ನಿಮ್ಮ ಸ್ನೇಹಿತರಿಗೆ ಸಾಲ ಕೊಡೋಕೆ ಮುಂಚೆ ಈ‌ ವಿಡಿಯೋ ನೋಡಿ ಬಿಡಿ..ಅಬ್ಬಾ ಎಂಥಹ ಖತರ್ನಾಕ್ ಗಳು ಇರ್ತಾರೆ ಸ್ವಾಮಿ - Karnataka's Best News Portal

ಯಾರಿಗಾದರೂ ಸಾಲ ಕೊಟ್ಟರೆ ಕೇಳೋಕೆ ಹೋಗಬೇಡಿ ಕೇಳಿದರೆ ಏನಾಗುತ್ತೆ ಅಂತೀರಾ ಈ ವಿಷಯ ತಿಳಿದುಕೊಳ್ಳಿ||
ಈಕೆಯ ಹೆಸರು ವೈಶಾಲಿ ಈಕೆ ಗುಜರಾತ್ ಮೂಲದ 34 ವರ್ಷದ ಖ್ಯಾತ ಫೋಕ್ ಸಿಂಗರ್ ಅಲ್ಲಿಯ ನವರಾತ್ರಿ ಉತ್ಸವಗಳ ದಿನ ಆಕೆ ಗರ್ಭಾಸ್ ಎಂಬ ಪ್ರಕಾರದ ಹಾಡುಗಳನ್ನು ಹಾಡುವುದರಲ್ಲಿ ಎತ್ತಿದ ಕೈ ಈ ಗರ್ಬಾಸ್ ಎಂದರೆ ಗುಜರಾತಿ ಜಾನಪದದ ಒಂದು ಮುಖ್ಯವಾದoತಹ ಭಾಗ ಅದನ್ನು ಈಗಲೂ ಕೂಡ ಮುಖ್ಯ ಗಾಯಕರು ಹಾಡುತ್ತಾರೆ ವೈಶಾಲಿ ಒಬ್ಬ ಅದ್ಭುತ ಮನಮೋಹಕ ಗಾಯಕಿ ಈಕೆ ಆ ಗರ್ಭಾಸ್ ಹಾಡುಗಳನ್ನು ಕೇವಲ ಗುಜರಾತ್ ಮಾತ್ರವಲ್ಲದೆ ಬಾಂಬೆ ದೆಹಲಿ ಅಷ್ಟೇ ಯಾಕೆ ವಿದೇಶಗಳ ಅನೇಕ ಶೋಗಳಲ್ಲಿ ಹಾಡಿ ಪ್ರಸಿದ್ಧಿಯನ್ನು ಪಡೆದಾಕೆ ಇಂತಹ ಈಕೆ ಆಗಸ್ಟ್ ತಿಂಗಳಿನಲ್ಲಿ ಅಂದರೆ ಇಲ್ಲಿಂದ ಮೂರು ತಿಂಗಳ ಹಿಂದೆ ಬರ್ಬರವಾಗಿ ಹತ್ಯೆ ಗೀಡಾಗುತ್ತಾಳೆ.

ಹೀಗೆ ಭೀಕರವಾಗಿ ಹತ್ಯೆ ಗೀಡಾದ ಈಕೆಯ ಪತಿಯ ಹೆಸರು ಹಿತೇಶ್ ಬುಲ್ಸಾರ ಈತ ಒಬ್ಬ ಗಿಟಾರಿಸ್ಟ್ ಇವರಿಬ್ಬರೂ ಕೂಡ 2011ರಲ್ಲಿ ಮದುವೆಯಾಗಿದ್ದರು ಇವರಿಗೆ ಇಬ್ಬರು ಪ್ರೀತಿಯ ಮಕ್ಕಳು ಇದ್ದಾರೆ ಸಾಮಾನ್ಯವಾಗಿ ಅನೇಕ ವೇದಿಕೆಗಳಲ್ಲಿ ಇವರಿಬ್ಬರೂ ಒಟ್ಟಿಗೆ ಶೋ ನೀಡುತ್ತಿದ್ದರು ಈ ಮೂಲಕ ಅಲ್ಲಿಯ ಇವೆಂಟ್ ಗಳಿಂದಾಗಿ ಕಿರುತೆರೆಯಲ್ಲಿ ಇವರಿಬ್ಬರೂ ಫೇಮಸ್ ಗುಜರಾತ್ ನ ವಲ್ಸಾದ್ ಎಂಬಲ್ಲಿ ಇವರಿಬ್ಬರೂ ವಾಸವಿದ್ದರು ಇಲ್ಲಿಯ ತಮ್ಮದೇ ಅಪಾರ್ಟ್ಮೆಂಟ್ ನಲ್ಲಿ ಇವರು ಸಂಗೀತದ ಪಾಠಗಳನ್ನು ಕೂಡ ನಡೆಸುತ್ತಿದ್ದರು ಹೇಗೋ ಇವರ ಬದುಕು ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿಯೇ ಸಾಗಿತ್ತು ಹೀಗಿರುವಾಗ ಇದೆ ಆಗಸ್ಟ್ 22ನೇ ತಾರೀಖು ವೈಶಾಲಿ ತಮ್ಮ ಸ್ನೇಹಿತರೊಬ್ಬರನ್ನು ಕಾಣುವ ಸಲುವಾಗಿ ಮನೆಯಿಂದ ಹೊರಟಿದ್ದರು ಮನೆಯಿಂದ ಹೊರಟ ಅವಳು ಬಹಳ ಹೊತ್ತು ಕಾಣದೆ ಹೋದಾಗ.

ಅವರ ಪತಿ ಹಿತೇಶ್ ಪತ್ನಿಗೆ ಕಾಲ್ ಮಾಡಿದರು ಆಗ ಅವಳ ಫೋನ್ ಸ್ವಿಚ್ ಆಫ್ ಎಂದು ಬರುತ್ತದೆ ಆಕೆ ತನ್ನ ಸ್ನೇಹಿತರನ್ನು ಕಾಣಲು ಹೋಗಿದ್ದಾಳೆ ಎಂದು ಈ ಹಿತೇಶ್ ಗೆ ಯಾವುದೇ ವಿಷಯ ತಿಳಿದಿರಲಿಲ್ಲ ಆತ ಅವಳ ಎಲ್ಲಾ ಸ್ನೇಹಿತರಿಗೆ ಕರೆ ಮಾಡಿ ಆಕೆಯ ಬಗ್ಗೆ ವಿಚಾರಿಸಿದ ಆದರೆ ಅವರೆಲ್ಲರೂ ಕೂಡ ಆಕೆ ನಮ್ಮ ಬಳಿ ಬಂದಿಲ್ಲ ಎಂದು ಹೇಳುತ್ತಾರೆ ಆದರೆ ಈಕೆ ತನ್ನ ಯಾವುದೇ ಸ್ನೇಹಿತರನ್ನು ಭೇಟಿಯಾಗಿಲ್ಲ ಮೇಲಾಗಿ ಇವಳ ಫೋನ್ ಸ್ವಿಚ್ ಆಫ್ ಆಗಿರೋದು ಹಿತೇಶ್ ಗೆ ಆತಂಕ ಮೂಡುತ್ತದೆ ಆಗ ಸ್ವತಃ ಹಿತೇಶ್ ತಾನೇ ಮನೆಯಿಂದ ಹೊರಟು ಪತ್ನಿಯ ಹುಡುಕಾಟಕ್ಕೆ ಇಳಿದಿದ್ದ ಎಲ್ಲಾ ಕಡೆ ಹುಡುಕಿದರೂ ಪತ್ನಿಯ ಸುಳಿವೇ ಸಿಗದ ಕಾರಣ ಪೊಲೀಸ್ ಸ್ಟೇಷನ್ ಗೆ ಹೋಗಿ ತನ್ನ ಪತ್ನಿ ಕಾಣುತ್ತಿಲ್ಲ ಎಂದು ದೂರನ್ನು ಕೊಟ್ಟ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *