ಐದು ಕೋಣೆಯಲ್ಲಿರುವ ಜಗನ್ನಾಥನ ಸಂಪತ್ತಿಗೆ ಎದುರಾಯ್ತು ಆಪತ್ತು ಪುರಿ ಜಗನ್ನಾಥ ದೇಗುಲದ ಸಂಪತ್ತಿನ ರಹಸ್ಯ ಭೇದಿಸಲು ಯಾಕೆ ಯಾರಿಂದಲೂ ಆಗಿಲ್ಲ ಗೊತ್ತಾ - Karnataka's Best News Portal

ಪೂರಿ ಜಗನ್ನಾಥನ ದೇವಾಲಯದಲ್ಲಿ ಇದ್ದ ಅಪಾರ ಸಂಪತ್ತು ಏನಾಯ್ತು ಯಾಕೆ ಇದನ್ನು ಯಾರಿಗೂ ಹೇಳಿಲ್ಲ!!
ಪೂರಿ ಜಗನ್ನಾಥನ ದೇವಾಲಯ ಎಂದರೆ ವಿಸ್ಮಯ ವಿಸ್ಮಯ ಎಂದರೆ ಪೂರಿ ಜಗನ್ನಾಥನ ದೇವಾಲಯ ಈಗಲೂ ಪೂರಿ ಜಗನ್ನಾಥನ ದೇವಾಲಯದಲ್ಲಿ ಆಗುವ ವಿಸ್ಮಯಗಳು ವಿಜ್ಞಾನಕ್ಕೆ ದೊಡ್ಡ ಪ್ರಶ್ನೆ ಆಗಿವೆ. ಈ ದೇವಾಲಯಕ್ಕೆ ಪ್ರತಿದಿನ 20 ರಿಂದ 30,000 ಜನರು ದರ್ಶನವನ್ನು ಪಡೆಯುತ್ತಾರೆ ಇನ್ನು ವಿಶೇಷವಾದ ಸಂದರ್ಭಗಳಲ್ಲಿ 70000ಕ್ಕೂ ಹೆಚ್ಚು ಜನ ಸೇರುತ್ತಾರೆ.

ಇಲ್ಲಿನ ಬ್ಯಾಂಕ್ ಠೇವಣಿ ಪ್ರತಿ ತಿಂಗಳಿಗೆ 150 ಕೋಟಿ ಇದೆ. ಪ್ರಪಂಚದ ಹೆಚ್ಚು ಶ್ರೀಮಂತ ದೇವಸ್ಥಾನದಲ್ಲಿ ಪೂರಿ ಜಗನ್ನಾಥ ದೇವಸ್ಥಾನವು ಒಂದಾಗಿದೆ ಇಲ್ಲಿ 12ನೇ ಶತಮಾನದ ರತ್ನಗಳು ಇವೆ ಎಂಬ ಮಾತು ಕೂಡ ಇವೆ. ಶ್ರೀಮಂತ ದೇವಸ್ಥಾನವೆಂದರೆ ಮೊದಲಿಗೆ ನಾವು ತಿರುಪತಿಯ ತಿಮ್ಮಪ್ಪನ ದೇವಸ್ಥಾನ ದೇವಸ್ಥಾನದಿಂದ ಅಂದುಕೊಳ್ಳುತ್ತೇವೆ ಪ್ರತಿ ತಿಂಗಳು ತಿಮ್ಮಪ್ಪನ ಹುಂಡಿಗೆ ಸುಮಾರು 130 ಕೋಟಿಗೂ ಹೆಚ್ಚು ಹಣವು ಬೀಳುತ್ತದೆ.

ಅದೇ ರೀತಿ ಕೇಳಿದ ಅನಂತಪದ್ಮ ಸ್ವಾಮಿಯ ದೇವಸ್ಥಾನ ಕೂಡ ಶ್ರೀಮಂತ ದೇವಸ್ಥಾನ ಎಂದು ಹೇಳಿದಾಗಿದೆ. ಈ ಮುಂಚೆ ಅನಂತಪದ್ಮ ಸ್ವಾಮಿಯ ದೇವಸ್ಥಾನದ ಅಡಿಯಲ್ಲಿ ಸಿಕ್ಕ ಚಿನ್ನದ ಮೊತ್ತ ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಎಂದು ಹೇಳಲಾಗಿದೆ. ಇಂತಹ ದೇವಸ್ಥಾನಗಳ ಪೈಕಿ ಪೂರಿ ಜಗನ್ನಾಥನ ದೇವಸ್ಥಾನವು ಒಂದು ಹೌದು ಪೂರಿ ಜಗನ್ನಾಥ ದೇವಸ್ಥಾನದ ಕೆಳಗಿನ ಚಾವಣಿಯಲ್ಲಿ 150 ಕೆಜಿ ಹೆಚ್ಚು ಚಿನ್ನವು ಇದೆ.

ಪೂರಿ ಜಗನ್ನಾಥ ನಿಲಯದಲ್ಲಿ ಏಳು ಚಿನ್ನದ ಕೋಣೆಗಳು ಇದ್ದು, ಈಗಾಗಲೇ ಎರಡು ಕೋಣೆಯನ್ನು ತೆರೆದಿದೆ. ಸದ್ಯ ನವೀನ್ ಪಟ್ನಾಯಕರವರ ಸರ್ಕಾರದ ಆಡಳಿತದಲ್ಲಿ ಇನ್ನು ಬೇರೆ ಕೋಣೆಗಳನ್ನು ತೆರೆಸುವ ಸಲುವಾಗಿ ಕೋರ್ಟ್ನ ಆದೇಶವು 2018ರಲ್ಲಿ ಹೊರಡಿಸಿತ್ತು. ಆದರೆ ಅದು ಆಗಲಿಲ್ಲ ಏಕೆಂದರೆ ಕೋಣೆಗಳ ಬೀಗದ ಕೈ ಸಿಗದೇ ಇರುವುದು. ಕೆಲವು ದಿನಗಳ ನಂತರ ಬೀಗದ ಕೈ ಸಿಕ್ಕಿದೆ ಎಂದು ಹೇಳಿದ ಜಿಲ್ಲಾ ಆಡಳಿತ ಇದು ಸತ್ಯವೋ ಅಥವಾ ಸುಳ್ಳೋ ಎಂದು ಈಗಲೂ ತಿಳಿದಿಲ್ಲ. ಏಕೆಂದರೆ ಈ ಕೋಣೆಗಳ ಬೀಗದ ಕೈ 1970ರಲ್ಲಿ ಕಳೆದು ಹೋಗಿದೆ ಎಂಬ ಮಾಹಿತಿ ಇದೆ.

ಸಮೀಕ್ಷೆ ಪ್ರಕಾರ ಆ ಕೋಣೆಗಳ ಒಳಗೆ 15 ಕೆಜಿ ಭಾರವನ್ನು ಹೊಂದಿರುವ ಮೂರು ದೇವರುಗಳ ಕಿರೀಟವಿದೆ. ಬೆಳ್ಳಿಯ ವಸ್ತುಗಳು, ಮುತ್ತು ರತ್ನಗಳು ಇವೆ ಎಂದು ಹೇಳಲಾಗಿದೆ. ಈ ಹಿಂದೆ 1965ರಲ್ಲಿ ಹಾಗೂ 1967ರಲ್ಲಿ ಎರಡು ಕೋಣೆಗಳನ್ನು ತೆರೆಸಲಾಗಿತ್ತು. ಅಂತಹ ಸಂದರ್ಭದಲ್ಲಿ ಯಾವುದು ವಿಚಿತ್ರವಾದ ಶಭ್ದ ಕೇಳಿಬಂದಿತ್ತು. ಅದು ಸರ್ಪಗಳ ಶಬ್ದವಿರಬಹುದು ಎಂದು ಹೇಳಲಾಗಿದೆ ಇನ್ನು ಪೂರಿ ಜಗನ್ನಾಥನ ಚಿನ್ನದ ಕೋಣೆಯನ್ನು ತೆರೆದರೆ ಜಗತ್ಪ್ರಳ ಆಗಬಹುದು ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಇನ್ನು ಈ ಚಿನ್ನವೆಲವು ರಾಜರ ಸಂಪತ್ತಾಗಿದೆ. ಸದ್ಯ ನವೀನ್ ಪಟ್ನಾಥ್ ಅವರ ಸರ್ಕಾರ ನೇತೃತ್ವದಲ್ಲಿ ಮತ್ತೊಮ್ಮೆ ಕೋಣೆಯನ್ನು ತೆರೆಸುವ ಕಾರ್ಯವು ಮುಂದೆ ನಡೆಯಬಹುದು ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *