2022 ರಲ್ಲಿ ನಿಧನರಾದ ಸ್ಯಾಂಡಲ್‌ವುಡ್ ಸ್ಟಾರ್ ನಟರು||
2022 ಈ ವರ್ಷ ಇನ್ನೇನು ಮುಗಿಯುತ್ತಾ ಬಂದಿದೆ ಈ ವರ್ಷ ಅಂದರೆ 2022 ರಲ್ಲಿ ಸ್ಯಾಂಡಲ್ ವುಡ್ ಇಂಡಸ್ಟ್ರಿ ಸಾಕಷ್ಟು ಕಲಾವಿದರನ್ನು ಕಳೆದುಕೊಂಡಿದ್ದು ನಮಗೆ ಇಲ್ಲಿಯ ತನಕ ಸಾಕಷ್ಟು ಮನರಂಜನೆಯನ್ನು ನೀಡಿ ಈಗ ನಮ್ಮಿಂದ ದೂರ ಆಗಿರುವಂತಹ ಸೆಲೆಬ್ರಿಟಿಗಳು ಯಾರು ಎಂದು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ
ಮೋಹನ್ ಜುನೇಜ ಮದುಮಗ ಎಂಬ ಪಾತ್ರದಲ್ಲಿ ಕನ್ನಡದ ಸಿನಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದಂತಹ ಈ ನಟ ನೂರಕ್ಕೂ ಹೆಚ್ಚಿನ ಕನ್ನಡ ಸಿನಿಮಾಗಳಲ್ಲಿ ಕಾಮಿಡಿ ಮತ್ತು ಸಪೋರ್ಟಿಂಗ್ ರೋಲ್ ಗಳಲ್ಲಿ ಅಭಿನಯಿಸಿದ್ದಾರೆ ಕೇವಲ ಸಿನಿಮಾ ಮಾತ್ರವಲ್ಲದೆ ಟಿವಿ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿರುವಂತಹ ಮೋಹನ್ ಅವರು ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾಗಳಲ್ಲಿ ಅಭಿನಯಿಸಿ ಇಡೀ ಸೌತ್ ಇಂಡಿಯಾದಲ್ಲಿ ಫೇಮ್ ಗಳಿಸಿದ್ದರು.
ಕೆಜಿಎಫ್ ಚಾಪ್ಟರ್ 1 ಸಿನಿಮಾದಲ್ಲಿ ಮೋಹನ್ ಅವರು ಹೇಳಿದಂತ ಮಾನ್ಸ್ಟರ್ ಎಂಬ ಡೈಲಾಗ್ ತುಂಬಾ ಫೇಮಸ್ ಆಗಿದ್ದು ಇಂತಹ ಅದ್ಭುತವಾದ ಕಲಾವಿದ ದೀರ್ಘಕಾಲದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದು ಮೇ 7 2022 ರಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಆಗ ಮೋಹನ್ ಅವರಿಗೆ 54 ವರ್ಷ ವಯಸ್ಸಾಗಿತ್ತು.
ಭಾರ್ಗವಿ ನಾರಾಯಣ್ ಕನ್ನಡದ ಸಿನಿಮಾ ಸೀರಿಯಲ್ ರಂಗಭೂಮಿ ಇವೆಲ್ಲದರಲ್ಲಿಯೂ ಗುರುತಿಸಿಕೊಂಡಿದ್ದಂತಹ ಭಾರ್ಗವಿ ನಾರಾಯಣ್ ಅವರು ಎರಡು ಕನಸು ಪಲ್ಲವಿ ಅನುಪಲ್ಲವಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಭಾರ್ಗವಿ ಅವರು ನಟ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸಿರುವ ರಾಜಕುಮಾರ ಎಂಬ ಚಿತ್ರದಲ್ಲಿ ತಮ್ಮದೇ ಆದಂತಹ ಚಿಕ್ಕ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ ಇನ್ನು ಇವರು ಕೊನೆಯದಾಗಿ ನಟಿಸಿರುವಂತಹ ಸಿನಿಮಾ ತ್ರಿಬಲ್ 7 ಚಾರ್ಲಿ.
ಇವರು ಫೆಬ್ರವರಿ 14 2022 ರಲ್ಲಿ ವಯೋ ಸಹಜ ಕಾಯಿಲೆಯಿಂದ ನಿಧನರಾದರು ಆಗ ಭಾರ್ಗವಿ ಅವರಿಗೆ 83 ವರ್ಷ ವಯಸ್ಸಾಗಿತ್ತು. ಅಶೋಕ್ ರಾವ್ ಸ್ಯಾಂಡಲ್ ವುಡ್ ನ ಹಿರಿಯ ಪೋಷಕ ನಟ ಅಶೋಕ್ ರಾವ್ ಅವರು ಪರಶುರಾಮ ಸಿನಿಮಾದ ಮುಖಾಂತರ ಸಿನಿ ಜರ್ನಿಯನ್ನು ಪ್ರಾರಂಭಿಸಿ ಅತಿ ಕಡಿಮೆ ಸಮಯದಲ್ಲಿ ಬಹು ಬೇಡಿಕೆಯ ನಟನಾಗಿ ಬೆಳೆದಿದ್ದರು.
ಇವರು ಡಾಕ್ಟರ್ ರಾಜ್ ಕುಮಾರ್ ಶಂಕರ್ ನಾಗ್ ಸೇರಿದಂತೆ ಹಲವಾರು ದಿಗ್ಗಜ ನಟರೊಂದಿಗೆ ತೆರೆಯಲ್ಲಿ ಕಾಣಿಸಿಕೊಂಡಿದ್ದು ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಲನ್ ಮತ್ತು ಸಪೋರ್ಟಿಂಗ್ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಇವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಫೆಬ್ರವರಿ 2 2022 ರಂದು ತಮ್ಮ 75ನೇ ವಯಸ್ಸಿನಲ್ಲಿ ನಿಧನ ಹೊಂದಿದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.