ಸಿಂಹ ರಾಶಿ ವರ್ಷಭವಿಷ್ಯ ಇಲ್ಲಿವರೆಗೂ ಒಂದು ಲೆಕ್ಕ ಇನ್ನುಮೇಲೆ ಅದೃಷ್ಟದ ಲೆಕ್ಕ ರಾಜಯೋಗ ಬರಲಿದೆ ಈ ಅವಕಾಶ ಬಿಡಬೇಡಿ - Karnataka's Best News Portal

ಸಿಂಹ ರಾಶಿ ವರ್ಷ ಭವಿಷ್ಯ 2023||2023 ಹೊಸ ವರ್ಷದಲ್ಲಿ ಶನಿಯು ತನ್ನ ಸ್ಥಾನವನ್ನು ಬದಲಾವಣೆ ಮಾಡುತ್ತಿದ್ದು ಜನವರಿ 17ನೇ ತಾರೀಖು ಮಕರ ರಾಶಿಯಿಂದ ಕುಂಭ ರಾಶಿಗೆ ರಾಶಿ ಪರಿವರ್ತನೆ ಮಾಡುತ್ತಿದ್ದಾನೆ ಯಾವಾಗ ಶನಿ ಸಿಂಹ ರಾಶಿಯವರಿಗೆ ಷಷ್ಠದಲ್ಲಿ ಅಂದರೆ ಆರನೇ ಮನೆಯಲ್ಲಿ ಇದ್ದು ಯಾವಾಗ ಏಳನೇ ಮನೆಗೆ ಬರುತ್ತಾರೋ ಅಲ್ಲಿ ಶನಿಯ ದೃಷ್ಟಿ ನಿಮ್ಮ ರಾಶಿಯ ಮೇಲೆ ಬೀಳುತ್ತದೆ.

ಹಾಗಾಗಿ ಶನಿಯ ಪ್ರಭಾವ ನಿಮ್ಮ ರಾಶಿಯ ಮೇಲೆ ಬಿದ್ದಾಗ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂದು ನೋಡುವುದಾದರೆ ಇಲ್ಲಿ ಶನಿಯ ಪ್ರಭಾವದಿಂದ ನಿಮಗೆ ಯಾವುದೇ ರೀತಿಯ ತೊಂದರೆ ಉಂಟಾಗುವು ದಿಲ್ಲ ಬದಲಾಗಿ ನಿಮ್ಮನ್ನು ಯಾರೋ ಹಿಂಬಾಲಿಸುತ್ತಿ ದ್ದಾರೆ ನಿಮ್ಮನ್ನು ಯಾರೋ ಕಾಯುತ್ತಿದ್ದಾರೆ ಎಂಬ ಅರ್ಥವನ್ನು ನೀವು ತಿಳಿದುಕೊಳ್ಳ ಬಹುದು.

ಶನಿಯ ಒಂದು ಪ್ರಭಾವ ಸಪ್ತಮ ಭಾವದಲ್ಲಿ ಬಿದ್ದಾಗ ನಿಮ್ಮನ್ನು ಯಾರೋ ಒಬ್ಬರು ಕಾಯುತ್ತಿದ್ದಾರೆ ಹಿಂಬಾಲಿಸುತ್ತಿದ್ದಾರೆ ಎಂದರ್ಥ ಆದ್ದರಿಂದ ನೀವು ಯಾವುದೇ ಒಂದು ಕೆಲಸ ಮಾಡುತ್ತಿದ್ದರು ಅದರಲ್ಲಿ ಹೆಚ್ಚಿನ ಜಾಗರೂಕತೆಯಿಂದ ಇರಿ ಶನಿಯ ದೃಷ್ಟಿ ನಿಮ್ಮ ಮೇಲೆ ಬೀಳುವುದರಿಂದ ನಿಮ್ಮ ಆಯಸ್ಸು ವೃದ್ಧಿಯಾಗುತ್ತದೆ ನೀವೇನಾದರೂ ಕೆಟ್ಟ ಕೆಲಸ ಕಾರ್ಯದಲ್ಲಿ ಮುಳುಗಿದ್ದರೆ ಅದರಿಂದ ನಿಮ್ಮನ್ನು ಶನಿ ದೂರ ಮಾಡುತ್ತಾನೆ ಹಾಗಾಗಿ ಇವೆಲ್ಲವನ್ನೂ ಕೂಡ ಸಿಂಹ ರಾಶಿಯವರು ಪಡೆದುಕೊಳ್ಳುತ್ತೀರಿ.

ಆದರೆ ಅಷ್ಟಮ ಶನಿ ಅಥವಾ ಅರ್ಧಾಷ್ಟಮ ಶನಿ ಪಂಚಮ ಶನಿ ಸಾಡೆ ಸಾತ್ ಇದ್ಯಾವುದೂ ಕೂಡ ನಿಮಗೆ ತೊಂದರೆ ಉಂಟು ಮಾಡುವುದಿಲ್ಲ ಒಟ್ಟಾರೆಯಾಗಿ ಹೇಳಬೇಕು ಎಂದರೆ ಶನಿ ನಿಮಗೆ ವರ್ಷಪೂರ್ತಿ ಯಾವುದೇ ರೀತಿಯಾದಂತಹ ಕೆಟ್ಟ ಪ್ರಭಾವವನ್ನು ಕೊಡುವುದಿಲ್ಲ ಹಾಗಾದರೆ ಸಿಂಹ ರಾಶಿಯವರಿಗೆ ಗುರುವಿನ ಫಲ ಯಾವ ರೀತಿ ಇದೆ ಎಂದು ನೋಡುವುದಾದರೆ.

ಸಿಂಹ ರಾಶಿಯವರಿಗೆ ಯೋಗವನ್ನು ಕೊಡುವುದಕ್ಕೆ ಗುರು ಪ್ರಾರಂಭ ಮಾಡುತ್ತಾನೆ 21/04/2023 ಕ್ಕೆ ಗುರು ತನ್ನ ಸ್ಥಾನವನ್ನು ಬದಲಾವಣೆ ಮಾಡಿ ಮೀನ ರಾಶಿಯಿಂದ ಮೇಷ ರಾಶಿಗೆ ಬರುತ್ತಿದ್ದಾರೆ ಯಾವ ಒಂದು ಸಮಯದಲ್ಲಿ ಮೇಷ ರಾಶಿಗೆ ಗುರು ಬರುತ್ತಾರೋ ಆಗ ಸಿಂಹ ರಾಶಿಗೆ ಭಾಗ್ಯ ಸ್ಥಾನಕ್ಕೆ ಗುರು ಬಂದು ಸೇರುತ್ತಾರೆ ಒಟ್ಟಾರೆಯಾಗಿ ಸಿಂಹ ರಾಶಿಯವರಿಗೆ ಗುರುವಿನ ಫಲವು ಕೂಡ ಚೆನ್ನಾಗಿರುತ್ತದೆ.

ಹಾಗಾಗಿ ಸಿಂಹ ರಾಶಿಯವರು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು ಯಾವುದೇ ಒಂದು ವ್ಯಾಪಾರ ವ್ಯವಹಾರ ಮಾಡುತ್ತಿದ್ದರು ಅಂತವರು 21ರ ತನಕ ಕಾದು ನಂತರದ ದಿನದಲ್ಲಿ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಕೂಡ ಏಳಿಗೆಯನ್ನು ಕಾಣುತ್ತೀರಿ ಜೊತೆಗೆ ವಿದ್ಯಾಭ್ಯಾಸದಲ್ಲಿಯೂ ಕೂಡ ಹೆಚ್ಚಿನ ಅಭಿವೃದ್ಧಿಯನ್ನು ಕಾಣುತ್ತೀರಿ ಹೊಸ ವಾಹನ ಖರೀದಿ ಒಳ್ಳೆಯ ಆರೋಗ್ಯವನ್ನು ಕೂಡ ಪಡೆದುಕೊಳ್ಳುತ್ತೀರಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *