ಮೋದಿಯ ದೊಡ್ಡ ಕುಟುಂಬ ಅಣ್ಣ ತಮ್ಮ ತಂಗಿ ಎಲ್ಲರೂ ಇದ್ದರೂ ಮೋದಿ ಒಂಟಿ ಯಾಕೆ ಗೊತ್ತಾ ? - Karnataka's Best News Portal

ಇವರೆಲ್ಲ ಇದ್ದರೂ ಮೋದಿ ಏಕಾಂಗಿ ಯಾಕೆ??

ನರೇಂದ್ರ ಮೋದಿ ಅವರ ತಾಯಿಯ ಹೆಸರು ಹೀರಾಬೆನ್ ಮೋದಿ ನರೇಂದ್ರ ಮೋದಿ ಅವರಿಗೆ ತಾಯಿ ಹೀರಾಬೆನ್ ಮೋದಿ ಅಂದರೆ ತುಂಬಾ ಇಷ್ಟ ಮೋದಿ ಅವರ ತಮ್ಮ ಉಳಿದ ಕುಟುಂಬದ ಜೊತೆ ಸಂಪೂರ್ಣವಾಗಿ ಎಲ್ಲಾ ಸಂಬಂಧವನ್ನು ಬೇರೆ ಮಾಡಿಕೊಂಡಿದ್ದರು ಅವರಿಗೆ ಅವರ ತಾಯಿ ಪ್ರೀತಿ ಯಾವತ್ತಿಗೂ ಕಡಿಮೆಯಾಗಿಲ್ಲ ಜೊತೆಗೆ ಸಮಯ ಸಿಕ್ಕಾಗಲೆಲ್ಲಾ.

ಮೋದಿ ಅವರು ತಮ್ಮ ತಾಯಿಯನ್ನು ನೋಡಿಕೊಂಡು ಅವರ ಆರೋಗ್ಯವನ್ನು ವಿಚಾರಿಸಿಕೊಂಡು ಬರುತ್ತಿದ್ದರು ಮುಖ್ಯವಾಗಿ ಅವರ ಹುಟ್ಟು ಹಬ್ಬದ ದಿನದಂದು ಹಾಗೂ ಯಾವುದಾದರೂ ಒಂದು ಚುನಾವಣೆಯಲ್ಲಿ ಜಯಶೀಲರಾದಾಗಲೆಲ್ಲ ತಾಯಿಯನ್ನು ಭೇಟಿಯಾಗುವುದಕ್ಕೆ ಹೋಗುತ್ತಾರೆ ಜೊತೆಗೆ ತಾಯಿಯ ಆಶೀರ್ವಾದವನ್ನು ಕೂಡ ಪಡೆಯುತ್ತಾರೆ ಇನ್ನು ಹೀರಾಬೆನ್ ಮೋದಿ ನರೇಂದ್ರ ಮೋದಿ ಅವರು ಗುಜರಾತ್ ಸಿಎಂ ಆಗುವುದಕ್ಕೂ ಮೊದಲು ಯಾವ ಮನೆಯಲ್ಲಿ ಇದ್ದರೋ.

ಈಗಲೂ ಕೂಡ ಹೀರಾಬೆನ್ ಮೋದಿ ಅದೇ ಮನೆಯಲ್ಲಿ ವಾಸವಾಗಿದ್ದಾರೆ ಇವರನ್ನು ಅವರ ಕಿರಿಯ ಮಗ ಪಂಕಜ್ ಮೋದಿ ಅವರು ನೋಡಿಕೊಳ್ಳುತ್ತಾರೆ ಹೀರಾಬೆನ್ ಮೋದಿ ಅವರಿಗೆ ಇದೇ ವರ್ಷ ಜೂನ್ ತಿಂಗಳು ನೂರು ವರ್ಷ ದಾಟಿದೆ ನೋಟ್ ಬ್ಯಾನ್ ಆದ ಸಮಯದಲ್ಲಿ ಹೀರಾಬೆನ್ ಮೋದಿ ಬ್ಯಾಂಕ್ ಮುಂದೆ ಬಿಸಿಲಿನಲ್ಲಿ ಸಾಲಾಗಿ ನಿಂತಿರುವಂತಹ ವಿಷಯ ಬಹಳಷ್ಟು ಸುದ್ದಿಯಾಗಿತ್ತು.

ನರೇಂದ್ರ ಮೋದಿ ಅವರ ತಂದೆ ದಾಮೋದರ್ ದಾಸ್ ಮೂಲ್ ಚಂದ್ರ ಮೋದಿ, ನರೇಂದ್ರ ಮೋದಿ ತಂದೆ ತಾಯಿಗೆ ಒಟ್ಟು ಆರು ಜನ ಮಕ್ಕಳು ಅದರಲ್ಲಿ ನರೇಂದ್ರ ಮೋದಿ ಅವರು ಮೂರನೆಯವರು ಇವರೆಲ್ಲರಿಗಿಂತ ದೊಡ್ಡವರು ಸೋಮಾಭಾಯ್ ಮೋದಿ ಇವರಿಗೆ 81 ವರ್ಷ ವಯಸ್ಸಾಗಿದ್ದು ಇವರು ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ ಗುಜರಾತ್ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಇವರು.

ಈಗ ಕೆಲಸದಿಂದ ನಿವೃತ್ತಿಯಾಗಿ ವೃದ್ದಾಶ್ರಮ ನಡೆಸುತ್ತಿದ್ದಾರೆ ಪುಣೆಯಲ್ಲಿ ನಡೆದ ಒಂದು ಕಾರ್ಯಕ್ರಮಕ್ಕೆ ಇವರು ಹೋಗಿದ್ದರು ಆಗ ನರೇಂದ್ರ ಮೋದಿ ಅವರು ಇವರು ನನ್ನ ಅಣ್ಣ ಎಂದು ಎಲ್ಲರಿಗೂ ಪರಿಚಯ ಮಾಡಿಕೊಟ್ಟರು ಆಗ ಮಾತನಾಡಿದ ಸೋಮಾಭಾಯ್ ಮೋದಿ ನರೇಂದ್ರ ಮೋದಿ ನನ್ನ ತಮ್ಮ ಆದರೆ ಪ್ರಧಾನಿ ಮೋದಿಗೂ ನನಗೂ ಯಾವ ಸಂಬಂಧವೂ ಇಲ್ಲ ಅವರಿಗೆ ನಾನು 135 ಕೋಟಿ ಭಾರತೀಯರಲ್ಲಿ ನಾನು ಒಬ್ಬ ಅಷ್ಟೇ ಎಂದಿದ್ದರು.

ಎರಡನೇ ಅಣ್ಣ ಅಮೃತ್ ಭಾಯ್ ಮೋದಿ ಇವರು ಈ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಆಗ ಇವರಿಗೆ 10,000 ಸಂಬಳ ಸಿಗುತ್ತಿತ್ತು ಈಗ ಆ ಕೆಲಸದಿಂದ ನಿವೃತ್ತರಾಗಿದ್ದಾರೆ ಇವರ ಮಗ ಸಂಜಯ್ ಎನ್ನುವವರು ಒಂದು ಚಿಕ್ಕ ಬುಸಿನೆಸ್ ಮಾಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *