ಜಗತ್ತಿನ ಶಕ್ತಿಶಾಲಿ ಉಪಹಾರ ನೆನೆಸಿಟ್ಟ ಶೇಂಗಾ ಎಷ್ಟು ಯಾವಾಗ ಹೇಗೆ ಸೇವಿಸಬೇಕು ಹತ್ತು ಬಾದಾಮಿಗಳಿಗೆ ಸಮ ಕಡಲೆಬೀಜ ತಿನ್ನುವ ಮೊದಲು ನೋಡಿ - Karnataka's Best News Portal

ಶಕ್ತಿಶಾಲಿ ಉಪಹಾರ ನೆನೆಸಿಟ್ಟ ಶೇಂಗಾ||ಪ್ರತಿಯೊಬ್ಬರ ಅಡಿಗೆ ಮನೆಯಲ್ಲಿಯೂ ಕೂಡ ಸುಲಭ ವಾಗಿ ಸಿಗುವಂತಹ ಪದಾರ್ಥ ಯಾವುದು ಎಂದರೆ ಶೇಂಗಾ ಹೌದು ಯಾವುದೇ ಒಂದು ಅಡುಗೆಯಲ್ಲಿ ರುಚಿ ಹೆಚ್ಚಾಗಬೇಕು ಎಂದರೆ ಪ್ರತಿಯೊಂದಕ್ಕೂ ಹಾಕುತ್ತೇವೆ ಜೊತೆಗೆ ಉತ್ತರ ಕರ್ನಾಟಕ ದಲ್ಲಂತೂ ಶೇಂಗಾವನ್ನು ಪ್ರತಿಯೊಂದು ಆಹಾರ ಪದಾರ್ಥದಲ್ಲಿ ಯೂ ಕೂಡ ಬಳಸುತ್ತಿರುತ್ತಾರೆ ಆದರೆ ಶೇಂಗಾವನ್ನು ನಾವು ಉಪಯೋಗಿಸುವುದರಿಂದ ಯಾವ ರೀತಿಯ ಲಾಭವನ್ನು ಪಡೆಯಬಹುದು ಎಂದು ಹೆಚ್ಚಿನ ಜನಕ್ಕೆ ಗೊತ್ತಿಲ್ಲ.

ಅದರಲ್ಲೂ ನೆನೆಸಿಟ್ಟಂತಹ ಶೇಂಗಾವನ್ನು ತಿನ್ನುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಹಾಗೆಯೇ ಹಸಿಯಾಗಿ ಶೇಂಗಾವನ್ನು ತಿನ್ನುವುದರಿಂದ ಅಜೀರ್ಣ ಜಾಸ್ತಿ ಯಾಗುತ್ತದೆ ಬದಲಿಗೆ ಅದನ್ನು ನೆನೆಸಿಟ್ಟು ನಂತರ ತಿನ್ನುವುದರಿಂದ ಪಿತ್ತ ಶಮನವಾಗುತ್ತದೆ ಹೌದು ಏನಿದು ವಿಚಿತ್ರ ಎನ್ನಿಸಬಹುದು ಇದು ಸತ್ಯ ನೆನೆಸಿಟ್ಟ ಶೇಂಗಾವನ್ನು ತಿನ್ನುವುದರಿಂದ ಹೆಚ್ಚಿನ ಲಾಭವನ್ನು ಪ್ರತಿಯೊಬ್ಬರೂ ಕೂಡ ಪಡೆದುಕೊಳ್ಳಬಹುದು.


ಹಾಗಾದರೆ ಶೇಂಗಾ ಬೀಜವನ್ನು ತಿನ್ನುವುದರಿಂದ ನಮಗೆ ಇಷ್ಟೆಲ್ಲ ಲಾಭ ಹೆಚ್ಚಾಗುತ್ತಿದೆ ಎಂದರೆ ಇದರಲ್ಲಿ ಯಾವ ಪೋಷಕಾಂಶ ತತ್ವ ಅಡಗಿದೆ ಎನ್ನುವುದನ್ನು ಈ ದಿನ ತಿಳಿಯೋಣ ಶೇಂಗಾ ಬೀಜದಲ್ಲಿ ಕ್ಯಾಲ್ಸಿಯಂ ಐರನ್ ವಿಟಮಿನ್ ಬಿ ಸಿಕ್ಸ್ ಪೊಟ್ಯಾಶಿಯಂ ಸೋಡಿಯಂ ಫೈಬರ್ ಮತ್ತು ಪ್ರೋಟೀನ್ ಅಂಶವನ್ನು ಇದರಲ್ಲಿ ನಾವು ಯಥೇಚ್ಛವಾಗಿ ಕಾಣಬಹುದು ಒಟ್ಟಾರೆಯಾಗಿ ಇಷ್ಟೆಲ್ಲ ಪೋಷಕ ತತ್ವಗಳನ್ನು ಈ ಶೇಂಗಾ ಬೀಜ ಒಳಗೊಂಡಿದೆ.

ಹಾಗಾದರೆ ನೆನಸಿಟ್ಟಂತಹ ಶೇಂಗಾವನ್ನು ತಿನ್ನುವುದ ರಿಂದ ಯಾವುದೆಲ್ಲ ಲಾಭಗಳಾಗುತ್ತದೆ ಎಂದರೆ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಯಾವುದೇ ಕಾರಣಕ್ಕೂ ಯಾವತ್ತೂ ಕೂಡ ಕಡಿಮೆಯಾಗುವುದಿಲ್ಲ ದೇಹದಲ್ಲಿರುವಂತಹ ನರನಾಡಿಗಳಿಗೆ ಮಾಂಸ ಖಂಡಗಳಿಗೆ ಹಾಗೂ ಹೃದಯ ಕಿಡ್ನಿ ಮತ್ತು ನಮ್ಮ ಮೆದುಳಿಗೆ ಒಟ್ಟಾರೆಯಾಗಿ ನಮ್ಮ ಇಡೀ ದೇಹಕ್ಕೆ ಅದ್ಭುತವಾದಂತಹ ಶಕ್ತಿಯನ್ನು ತುಂಬುತ್ತದೆ.

ದೇಹದಲ್ಲಿ ಉರಿಯೂತದ ಸಮಸ್ಯೆ ಇದ್ದರೆ ಅದನ್ನು ನೆನೆಸಿಟ್ಟಂತಹ ಶೇಂಗಾ ಕಡಿಮೆ ಮಾಡುತ್ತದೆ ಶೇಂಗಾ ದಲ್ಲಿ ಇರುವಂತಹ ಫೈಬರ್ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಕ್ರಿಯಾಶೀಲವಾಗಿರುವಂತೆ ನೋಡಿ ಕೊಳ್ಳುತ್ತದೆ ಗ್ಯಾಸ್ಟಿಕ್ ಅಸಿಡಿಟಿ ಎಲ್ಲವೂ ಕೂಡ ನಿವಾರಣೆಯಾಗುತ್ತದೆ ಹೀಗೆ ಜೀರ್ಣಾಂಗ ವ್ಯವಸ್ಥೆ ನಮ್ಮ ದೇಹದಲ್ಲಿ ಸರಿಯಾದರೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ ಎಂದೇ ಆಯುರ್ವೇದದಲ್ಲಿ ಹೇಳಲಾಗುತ್ತದೆ ಡಯಾಬಿಟಿಸ್ ಇರುವಂತಹ ವ್ಯಕ್ತಿ ಇದನ್ನು ಸೇವನೆ ಮಾಡಿದರೆ ಡಯಾಬಿಟೀಸ್ ದೂರ ಮಾಡಿಕೊಳ್ಳಬಹುದಾಗಿರುತ್ತದೆ.

ಅದರಲ್ಲೂ ಬಹಳ ಮುಖ್ಯವಾಗಿ ಚರ್ಮದ ಕಾಂತಿ ವೃದ್ಧಿಯಾಗುತ್ತದೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಯಿಂದ ಕಾಣಿಸುವಂತಹ ಸಂಧಿವಾತದ ನೋವು ಮೂಳೆ ನೋವು ಇವೆಲ್ಲವೂ ಕೂಡ ಶಮನವಾಗುತ್ತದೆ ಒಟ್ಟಾರೆಯಾಗಿ ನೆನೆಸಿದಂತಹ ಶೇಂಗಾವನ್ನು ತಿನ್ನುವುದರಿಂದ ನಮ್ಮ ಇಡೀ ದೇಹಕ್ಕೆ ಬೇಕಾದಂತ ಒಳ್ಳೆಯ ಪೌಷ್ಟಿಕಾಂಶಗಳನ್ನು ನಾವು ಪಡೆದುಕೊಳ್ಳ ಬಹುದಾಗಿರುತ್ತದೆ ಇದನ್ನು ಬಡವರ ಬಾದಾಮಿ ಎಂದು ಕೂಡ ಕರೆಯುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *