ಮೇಷ ರಾಶಿ ಗುರುಬಲ 2023 ದುಡ್ಡು ಹರಿದು ಬರುತ್ತೆ ನೆಮ್ಮದಿ ಹಾಳಾಗುತ್ತೆ ಗುರು ರಾಹು ಸಂಯೋಗ ಚಂಡಾಲ ಯೋಗ ಚಿತ್ರಹಿಂಸೆ ನೀಡುತ್ತೆ

ಮೇಷ ರಾಶಿ ಗುರು ಗೋಚರ ಫಲ 2023||
ಕಳೆದ ಏಪ್ರಿಲ್ ನಲ್ಲಿ ಬದಲಾದಂತಹ ಗುರು ಮುಂದಿನ ವರ್ಷ ಅಂದರೆ 2023ರ ಏಪ್ರಿಲ್ 22ನೇ ತಾರೀಖಿ ನಂದು ತನ್ನ ರಾಶಿಯ ಸಂಚಾರವನ್ನು ಮುಂದುವರಿ ಸುತ್ತಾ ಮೀನ ರಾಶಿಯಿಂದ ಮೇಷ ರಾಶಿಗೆ ಪರಿವರ್ತನೆ ಯಾಗುತ್ತಿದೆ ಪರಿವರ್ತನೆಯಾಗುವುದು ಮಾತ್ರವಲ್ಲದೆ ಅಲ್ಲೇ ಇರುವಂತಹ ರಾಹುಗ್ರಹದೊಂದಿಗೆ ಸಂಯೋಗ ವನ್ನು ಹೊಂದಿ ಗುರು ರಾಹು ಚಾಂಡಾಳ ಯೋಗವನ್ನೂ ಸಹ ಉತ್ಪತ್ತಿ ಮಾಡುತ್ತಿದೆ.

WhatsApp Group Join Now
Telegram Group Join Now

ಗುರು ರಾಹುವಿನ ಚಂಡಾಳ ಯೋಗ ಏಪ್ರಿಲ್ ನಿಂದ ಪ್ರಾರಂಭವಾಗಿ ಅಕ್ಟೋಬರ್ ವರೆಗೂ ಸಹ ಇರು ವಂತದ್ದು ಒಟ್ಟಾರೆಯಾಗಿ ಗುರು ಏಪ್ರಿಲ್ 22 2023 ನೇ ತಾರೀಖಿನಿಂದ 2024 ಮೇ 1 ನೇ ತಾರೀಖಿನವ ರೆಗೂ ಮೇಷ ರಾಶಿಯಲ್ಲಿ ಸಂಚಾರ ಮಾಡುತ್ತಿರುತ್ತಾನೆ ಹಾಗಾದರೆ ಮೇಷ ರಾಶಿಯವರಿಗೆ ಯಾವ ರೀತಿಯಾದ ಗುರುವಿನ ಫಲಗಳು ಇರುತ್ತದೆ ಎಂದು ನೋಡುವುದಾದರೆ


ಈ ವಿಷಯ ನೋಡುತ್ತಿದ್ದ ಹಾಗೆ ಮೇಷ ರಾಶಿಯವರಿಗೆ ಮುಖದಲ್ಲಿ ಮಂದಹಾಸ ಮೂಡಬಹುದು ಹೌದು ಗುರುವಿನ ಬಲ ಚೆನ್ನಾಗಿದೆ ಎಂದರೆ ಆ ವ್ಯಕ್ತಿಗೆ ಯಾವುದೇ ರೀತಿಯಾದಂತಹ ಸಂಕಷ್ಟಗಳು ಎದುರಾಗುವುದಿಲ್ಲ ಎಂದೇ ಎಲ್ಲರೂ ನಂಬಿರುತ್ತಾರೆ ಜೊತೆಗೆ ಗುರುವಿನ ಬಲ ಇದ್ದರೆ ಯಾವುದೇ ಕೆಲಸವನ್ನಾಗಲಿ ಎಲ್ಲವನ್ನು ನಾನು ಈಡೇರಿಸಬಲ್ಲೆ ಎನ್ನುವಂತಹ ಛಲ ಎಲ್ಲರಲ್ಲಿಯೂ ಕೂಡ ಇರುತ್ತವೆ. ಒಟ್ಟಾರೆಯಾಗಿ ಗುರುವಿನ ಬಲ ಇದ್ದರೆ ಮನೆಯಲ್ಲಿ ಶುಭಕಾರ್ಯಗಳು ಒಳ್ಳೆಯ ಕೆಲಸ ಕಾರ್ಯಗಳು ಎಲ್ಲವೂ ನೆರವೇರುತ್ತದೆ ಎಂದು ಎಲ್ಲರೂ ನಂಬುತ್ತಾರೆ.

See also  ವೃಷಭ ರಾಶಿ ಅಬ್ಬಬ್ಬಾ ನೀವು ಇಷ್ಟೊಂದು ವಿಭಿನ್ನ ಗುಣ ಲಕ್ಷಣ ಹೊಂದಿದ್ದೀರಾ..! ನಿಮ್ಮ ಜೀವನ ಹೀಗೆ ನಡೆಯುತ್ತೆ

2023 ಗುರು ಏಪ್ರಿಲ್ 22ನೇ ತಾರೀಖು ಮೇಷ ರಾಶಿಗೆ ಬರುತ್ತಿದ್ದು ಅಂದರೆ ನಿಮ್ಮ ಮನೆಯಲ್ಲಿಯೇ ಸ್ಥಿತನಾಗಿರುವುದರಿಂದ ಅದರಲ್ಲೂ ಜನ್ಮದಲ್ಲಿಯೇ ಇರುವಂತಹ ಗುರು ನಿಮಗೆ ಬಹಳಷ್ಟು ತೊಂದರೆಯನ್ನು ಕಷ್ಟವನ್ನು ಕೊಡುತ್ತಾನೆ ಅಂದರೆ ದೇಹದ ಪೀಡೆಗಳನ್ನು ಕೊಡುತ್ತಾನೆ ಗುರು ಯಾವ ಸ್ಥಾನದಲ್ಲಿ ಇರುತ್ತಾನೋ ಆಸ್ಥಾನವನ್ನು ನಾಶ ಮಾಡುತ್ತಾನೆ ಆದರೆ ಶನಿ ತಾನು ಇರುವ ಸ್ಥಾನವನ್ನು ಉಳಿಸುತ್ತಾನೆ ಎಂದೇ ಹೇಳಬಹುದು.

ಮೇಲೆ ಹೇಳಿದಂತೆ ಮೇಷ ರಾಶಿಯವರಿಗೆ ಗುರುವಿನ ಗೋಚಾರದಿಂದಾಗಿ ಸ್ವಲ್ಪ ಮಟ್ಟಿಗೆ ಆರೋಗ್ಯದಲ್ಲಿ ಏರುಪೇರಾಗಬಹುದು ನೀವು ಕೆಲಸ ಮಾಡುವಂತಹ ಸ್ಥಳಗಳಲ್ಲಿ ಕಿರುಕುಳಗಳು ಅಧಿಕವಾಗುತ್ತದೆ ಜೊತೆಗೆ ವಿದೇಶಗಳಿಗೆ ಹೋಗಿ ಕೆಲಸ ಮಾಡುವಂತಹ ಅವಕಾಶಗಳು ಕೂಡ ಬರಬಹುದು ನಿಮ್ಮ ಕುಟುಂಬದ ವಿಚಾರದಲ್ಲಾಗಿರಬಹುದು ನಿಮ್ಮ ಮದುವೆಯ ವಿಚಾರದಲ್ಲಾಗಿರಬಹುದು ಇವೆಲ್ಲದರಲ್ಲಿಯೂ ಕೂಡ ಗೊಂದಲಗಳು ಸೃಷ್ಟಿಯಾಗುತ್ತಿರುತ್ತದೆ.

ಒಟ್ಟಾರೆಯಾಗಿ ಮೇಷ ರಾಶಿಯವರು ಏಪ್ರಿಲ್ ನಿಂದ ಮೇ ತನಕ ಗುರುವಿನ ಫಲ ಇದ್ದರೂ ಕೂಡ ಗುರುವಿನ ಯಾವುದೇ ಫಲವನ್ನು ನೀವು ಅನುಭವಿಸಲು ಸಾಧ್ಯವಾಗುವುದಿಲ್ಲ ಆದರೆ ಮತ್ತೊಂದು ಖುಷಿಯ ವಿಚಾರ ಏನು ಅಂದರೆ ಸಂತಾನದ ವಿಚಾರದಲ್ಲಿ ನೀವೇನಾದರೂ ನಿರೀಕ್ಷೆ ಮಾಡುತ್ತಿದ್ದರೆ ಈ ಒಂದು ನಿರೀಕ್ಷೆ ನಿಮಗೆ ಫಲಿಸಬಹುದಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">