ಮಹಿಳೆಯರು ಈ ಸಮಯದಲ್ಲಿ ನೆಲ ಒರೆಸಿದರೆ ಬಡತನ ಬೆನ್ನಟ್ಟುವುದು ಖಚಿತ.ಹೀಗೆ ಮಾಡಿದರೆ ಕಷ್ಟಗಳು ಬರೊಲ್ಲ - Karnataka's Best News Portal

ಈ ಸಮಯದಲ್ಲಿ ಮನೆ ನೆಲ ಒರೆಸಿದರೆ ಬಡತನ ಖಚಿತ||
ಸಾಮಾನ್ಯವಾಗಿ ಮನೆಯನ್ನು ಸ್ವಚ್ಛಗೊಳಿಸುವಾಗ ಕೆಲವು ನಿಯಮಗಳನ್ನು ಅನುಸರಿಸಿದರೆ ಮನೆಯಲ್ಲಿರುವಂತಹ ಋಣಾತ್ಮಕ ಅಂಶಗಳು ನಾಶವಾಗುತ್ತವೆ ಹಾಗೂ ಮನೆಗೆ ಮಹಾಲಕ್ಷ್ಮಿ ದೇವಿಯ ಆಗಮನ ಆಗುತ್ತದೆ ಎಂದು ಹೇಳಲಾಗುತ್ತದೆ ಆದರೆ ಗೊತ್ತೋ ಗೊತ್ತಿಲ್ಲದೆಯೋ ನಾವು ಈ ನಿಯಮಗಳಲ್ಲಿ ತಪ್ಪು ಮಾಡುತ್ತಾ ಹೋದರೆ ಅದು ನಮ್ಮ ಮನೆಗೆ ಆರ್ಥಿಕ ಸಂಕಷ್ಟವನ್ನು ತಂದು ಕೊಡುತ್ತದೆ ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿಲ್ಲ.

ಪ್ರತಿನಿತ್ಯ ಮನೆಯನ್ನು ಸ್ವಚ್ಛಗೊಳಿಸುವ ಹಾಗೂ ಒರೆಸುವ ಪ್ರಕ್ರಿಯೆ ಇರುತ್ತದೆ ಧಾರ್ಮಿಕ ನಂಬಿಕೆಯ ಪ್ರಕಾರ ನಿತ್ಯ ನಾವು ನೆಲ ವರೆಸುವಾಗ ನೀರಿಗೆ ಚಿಟಿಕೆ ಉಪ್ಪನ್ನು ಮಾತ್ರ ಬೆರೆಸಿ ನಂತರ ಆ ನೀರಿನ ಸಹಾಯದಿಂದ ಮನೆಯನ್ನು ಒರೆಸಬೇಕು ಹೀಗೆ ಮಾಡುವುದರಿಂದ ಧನಾತ್ಮಕ ಶಕ್ತಿ ಹಾಗೂ ಲಕ್ಷ್ಮಿ ದೇವಿ ಆಗಮಿಸುತ್ತಾಳೆ ಎನ್ನುವ ನಂಬಿಕೆ ಇದೆ.

ಅದಲ್ಲದೆ ಸಾಕಷ್ಟು ರೋಗ ಪೀಡಿತ ಸೂಕ್ಷ್ಮಾಣುಗಳು ನಾಶವಾಗುತ್ತದೆ ಎಂದು ಹೇಳಲಾಗುತ್ತದೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಕೋಣೆಯನ್ನು ಕಲ್ಲುಪ್ಪು ಬೆರೆಸಿದ ನೀರಿನಿಂದ ಒರೆಸಬೇಕು ಮೊದಲು ಮನೆಯ ಹಿಂಭಾಗದಿಂದ ಪ್ರಾರಂಭಿಸಿ ಮನೆಯ ಒಳಗಡೆ ಒಂದಿಂಚನ್ನು ಬಿಡದೆ ಒರೆಸುತ್ತಾ ಮನೆಯ ಹೊಸ್ತಿಲಲ್ಲಿ ಕೊನೆಯಾಗುವಂತೆ ಒರೆಸುವುದರಿಂದ ಋಣಾತ್ಮಕ ಶಕ್ತಿಯನ್ನು ಹೊರಹಾಕಿ ದರಿದ್ರದ ಲಕ್ಷಣಗಳನ್ನು ಸಹ ನಿವಾರಿಸಬಹುದು.

ಈ ವಿಧಾನವನ್ನು ಭಾನುವಾರದ ಹೊರತು ಇತರೆ ದಿನಗಳಲ್ಲಿ ಆಚರಿಸಬಹುದು ಇನ್ನು ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟು ನಿಮ್ಮ ಮನೆಯಿಂದ ದೂರ ಇರುವುದಕ್ಕೆ ಒಂದು ಲೋಟಕ್ಕೆ ನೀರು ತುಂಬಿಸಿ ಮತ್ತು ಅದಕ್ಕೆ ಉಪ್ಪು ಸೇರಿಸಿ ಇದನ್ನು ಮನೆಯ ನೈರುತ್ಯ ಮೂಲೆಯಲ್ಲಿ ಇಡಬೇಕು ಹೀಗೆ ಮಾಡುವುದರಿಂದ ಹಣಕಾಸಿನ ಮುಗ್ಗಟ್ಟು ಇರುವುದಿಲ್ಲ ಮತ್ತು ಹಣದ ನಿರ್ವಹಣೆಯೂ ಚೆನ್ನಾಗಿರುತ್ತದೆ.

ಪ್ರತಿ ರಾತ್ರಿ ಮಲಗುವ ಮುನ್ನ ಉಪ್ಪಿನ ನೀರಿನಿಂದ ಒರೆಸುವುದರಿಂದ ಲಾಭ ಪಡೆಯಬಹುದು ತಲೆಯಲ್ಲಿ ಪದೇಪದೇ ನಕಾರಾತ್ಮಕ ಯೋಚನೆಗಳು ಬರುತ್ತಿದ್ದರೆ ಅದರಿಂದ ಮನಸ್ಸು ಹಾಳಾಗುತ್ತಿದ್ದರೆ ಉಪ್ಪಿನಿಂದ ಈ ಸಮಸ್ಯೆಯನ್ನು ಸರಿಪಡಿಸಬಹುದು ನೀವು ಸ್ನಾನ ಮಾಡುವ ನೀರಿಗೆ ಒಂದು ಚಿಟಿಕೆ ಉಪ್ಪನ್ನು ಹಾಕಿ ಸ್ನಾನ ಮಾಡಿ ಈ ಉಪ್ಪು ನೀರನ್ನು ತಲೆಗೆ ಮತ್ತು ಮುಖಕ್ಕೆ ಹಾಕಿಕೊಳ್ಳಬೇಡಿ ಇದರಿಂದ ನಿಮ್ಮ ಯೋಜನೆಗಳಲ್ಲಿ ಬದಲಾವಣೆ ಬರುವುದನ್ನು ನೀವೇ ಕಾಣಬಹುದು.

ಬೆಳಗಿನ ಸಮಯದಲ್ಲಿ ಮನೆಯನ್ನು ಒರೆಸುವುದರಿಂದ ಸಕಾರಾತ್ಮಕ ಶಕ್ತಿಗಳ ಸಂಚಲನವಾಗುತ್ತದೆ ಕೆಲವು ಬೇವಿನ ಎಲೆಗಳನ್ನು ತೆಗೆದುಕೊಂಡು ನೀರಿನ ಪಾತ್ರೆಯಲ್ಲಿ ಹಾಕಿದ ನಂತರ ಚೆನ್ನಾಗಿ ಕುದಿಸಿ ನಂತರ ಎಲೆಗಳನ್ನು ತೆಗೆದು ಒಂದು ಲೋಟ ನೆಲ ಒರೆಸುವ ಬಕೆಟ್ ಗೆ ಹಾಕಿಕೊಂಡು ನಂತರ ಮನೆಯನ್ನು ಒರೆಸಬೇಕು ಇದೇ ರೀತಿ ವಾರಕ್ಕೊಮ್ಮೆ ಮಾಡಿ ನೋಡಿ ಕೆಟ್ಟ ಕಾಯಿಲೆಗಳು ನಿಮ್ಮ ಮನೆಯಿಂದ ದೂರ ಸರಿಯುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *