ಕರ್ನಾಟಕದ ಆರು ಪ್ರಸಿದ್ದ ವೆಂಕಟೇಶ್ವರ ದೇವಸ್ಥಾನಗಳು ವೈಕುಂಠ ಏಕಾದಶಿಯ ವಿಶೇಷ.. ಬಾಲಾಜಿಯ ಭಕ್ತರು ತಪ್ಪದೇ ನೋಡಿ - Karnataka's Best News Portal

ವೈಕುಂಠ ಏಕಾದಶಿ ವಿಶೇಷ|| ಕರ್ನಾಟಕದ ಆರು ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನಗಳು||ವೈಕುಂಠ ಎಂದರೆ ಭಗವಾನ್ ವಿಷ್ಣು ದೇವರವಾಸ ಸ್ಥಾನ ಮುಚ್ಚಲಾಗಿರುವಂತಹ ವೈಕುಂಠದ ದ್ವಾರವನ್ನು ವೈಕುಂಠ ಏಕಾದಶಿಯ ದಿನದಂದು ತೆರೆಯಲಾಗುತ್ತದೆ ಹಾಗಾಗಿಯೇ ಈ ಸುದಿನದ ದಿನದಂದು ಭಗವಾನ್ ವಿಷ್ಣು ದೇವರ ದರ್ಶನವನ್ನು ಮಾಡಿದರೆ ಸರ್ವ ಪಾಪಗಳು ಸಹ ನಿವಾರಣೆ ಯಾಗುತ್ತದೆ ವೈಕುಂಠ ಏಕಾದಶಿಯ ವ್ರತಾಚರಣೆಯನ್ನು ಮಾಡುವುದರಿಂದ ಸ್ವತಹ ತೀರ್ಥಕ್ಷೇತ್ರಗಳನ್ನು.

ಸಂದರ್ಶಿಸಿದರೆ ಸಿಗುವ ಪುಣ್ಯ ನಮಗೆ ಲಭಿಸುತ್ತದೆ ಈ ದಿನ ಭಗವಾನ್ ಮಹಾವಿಷ್ಣುವಿನ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನವನ್ನು ಮಾಡಿ ವೈಕುಂಠ ದ್ವಾರದಿಂದ ಹೊರ ಬಂದರೆ ಮುಕ್ತಿ ದೊರೆಯುತ್ತದೆ ಇಂತಹ ಸುದಿನವಾದಂತಹ ಇಂದು ನಮ್ಮ ಪ್ರಸ್ತುತ ಕರ್ನಾಟಕ ರಾಜ್ಯದ ಪ್ರಸಿದ್ಧ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನದ ಕುರಿತು ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.


ವೈಕುಂಠ ಏಕಾದಶಿಯ ದಿನ ಪ್ರತಿಯೊಬ್ಬರೂ ಕೂಡ ತಿರುಪತಿ ತಿರುಮಲ ದೇವಾಲಯಕ್ಕೆ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ ಆದ್ದರಿಂದ ಈ ದಿನ ನಾವು ಹೇಳುತ್ತಿರುವಂತಹ ಆರು ಪ್ರಸಿದ್ಧ ವಿಷ್ಣುವಿನ ದೇವಸ್ಥಾನಕ್ಕೆ ಹೋಗಿ ನೀವು ವೈಕುಂಠ ದ್ವಾರವನ್ನು ಪ್ರವೇಶ ಮಾಡಿದರೆ ತಿರುಪತಿಯ ದೇವಾಲಯವನ್ನು ನೋಡಿದಷ್ಟೇ ಅನುಭವವಾಗುತ್ತದೆ ಹಾಗೂ ಅಷ್ಟೇ ಫಲವನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿರು ತ್ತದೆ ಹಾಗಾದರೆ ಆ ಆರು ಪ್ರಸಿದ್ಧ ವೆಂಕಟೇಶ್ವರ ಸ್ವಾಮಿಯ ದೇವಾಲಯಗಳು ಯಾವುವು ಎಂಬುದನ್ನು ಒಂದೊಂದಾಗಿ ತಿಳಿದುಕೊಳ್ಳೋಣ.

ಮೊದಲನೆಯದು ಚಿಕ್ಕ ತಿರುಪತಿ ಕ್ಷೇತ್ರ ಕೋಲಾರ ಜಿಲ್ಲೆಯ ಮಾಲೂರಿನ ಬಳಿ ಚಿಕ್ಕ ತಿರುಪತಿ ಎಂಬ ಪುಣ್ಯಕ್ಷೇತ್ರವಿದೆ ರಾಜಧಾನಿ ಬೆಂಗಳೂರಿನಿಂದ ಈ ದೇವಾಲಯ ಸುಮಾರು 45 ಕಿ.ಮೀ ದೂರದಲ್ಲಿದೆ ವೈಟ್ ಫೀಲ್ಡ್ ನಿಂದ ಕೇವಲ 20 ಕಿ.ಮೀ ದೂರದಲ್ಲಿದೆ ಚಿಕ್ಕ ತಿರುಪತಿ ಕ್ಷೇತ್ರ ಸುಮಾರು 4000 ವರ್ಷಗಳ ಇತಿಹಾಸ ಹೊಂದಿದೆ ಈ ದೇಗುಲದಲ್ಲಿರುವ ವಿಗ್ರಹವನ್ನು.

ಸಾಕ್ಷಾತ್ ಅಗ್ನಿ ದೇವರೇ ಪ್ರತಿಷ್ಠಾಪಿಸಿ ಪೂಜಿಸಿದ್ದಾರೆ ಎನ್ನುವ ಪ್ರತೀತಿ ಇದೆ ದ್ವಾಪರಾಯುಗ ಮಹಾಭಾರತ ದೊಂದಿಗೆ ಈ ಚಿಕ್ಕ ತಿರುಪತಿಯ ಇತಿಹಾಸ ಬೆಸೆದುಕೊಂಡಿದೆ ದ್ವಾಪರಾಯುಗದಲ್ಲಿ ರಾಜ ಮಹಾರಾಜರು ಋಷಿ ಮುನಿಗಳು ಹೆಚ್ಚಾಗಿ ಯಜ್ಞ ಯಾಗಾಧಿಗಳನ್ನು ಮಾಡುತ್ತಿದ್ದರು ಆಗ ಅಗ್ನಿ ದೇವರು ಹೆಚ್ಚಾಗಿ ತುಪ್ಪವನ್ನು ಸೇವಿಸುತ್ತಿದ್ದರಿಂದ ಉದರ ಬೇನೆಯನ್ನು ಅನುಭವಿಸಬೇಕಾಗಿರುತ್ತದೆ ಆಗ ದೇವತೆಗಳ ವೈದ್ಯರಾದಂತಹ ಅಶ್ವಿನಿ ಕುಮಾರರು.

ಔಷಧಿ ಸಸ್ಯಗಳಿಂದ ಕೂಡಿರುವಂತಹ ಕಾಂಡವ ವನವನ್ನು ದಹನ ಮಾಡಿದರೆ ಉದರ ಬೇನೆ ನಿವಾರಣೆ ಯಾಗುತ್ತದೆ ಎಂಬ ಸಲಹೆಯನ್ನು ನೀಡುತ್ತಾರೆ ಆಗ ಅಗ್ನಿ ದೇವರು ಕಾಂಡವ ವನವನ್ನು ದಹಿಸಲು ಮುಂದಾದಾಗ ಭಗವಾನ್ ಕೃಷ್ಣ ಪರಮಾತ್ಮ ಹಾಗೂ ಅರ್ಜುನ ಇಬ್ಬರು ಕಾಂಡವ ವನದ ರಕ್ಷಣೆಗೆ ನಿಲ್ಲುತ್ತಾರೆ ಈ ಸಂದರ್ಭದಲ್ಲಿ ತಕ್ಷಕ ಎಂಬ ಸರ್ಪವು ಸುಟ್ಟ ಗಾಯಕ್ಕೆ ತುತ್ತಾಗಿ ಅಗ್ನಿ ದೇವರಿಗೆ ಶಾಪವನ್ನು ನೀಡುತ್ತಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *