ರೈತನ ಮಗ ನಡೆದಾಡುವ ದೇವರಾದ ಕಥೆ ಸಿದ್ದೇಶ್ವರ ಸ್ವಾಮೀಜಿ ಯಾರು ಖಾವಿ ಧರಿಸದಿದ್ರೂ ಕೋಟ್ಯಾಂತರ ಭಕ್ತಾಧಿಗಳು ಇವರಿಗೆ ಜಗತ್ತಿಗೆ ಇವರು ನೀಡಿದ ಸಂದೇಶಗಳು ಅದ್ಬುತ - Karnataka's Best News Portal

ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಶ್ರೀಗಳ ಸತ್ಯ ಕಥೆ||
ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಶ್ರೀಗಳು ಯಾರು ವಿಜಯಪುರದ ಜ್ಞಾನ ಯೋಗಾಶ್ರಮ ಪ್ರಾರಂಭಿಸಿದ್ದು ಯಾರು ಈ ಆಶ್ರಮದ ವಿಶೇಷತೆ ಏನು ಸಿದ್ದೇಶ್ವರ ಶ್ರೀಗಳ ಕಥೆ ಏನು ಸಿದ್ದೇಶ್ವರ ಶ್ರೀಗಳು ಮತ್ತು ಇವರ ಗುರುಗಳು ಮಾಡಿದ್ದು ಏನು ಹಾಗೂ ಜನ ಇವರನ್ನು ದೇವರೆ ರೀತಿ ನೋಡುವುದು ಯಾಕೆ ಪ್ರಧಾನಿ ಮೋದಿ ಅಮಿತ್ ಷಾ ಇವರ ಮುಂದೆ ತಲೆಬಾಗಿರುವುದು ಯಾಕೆ.

ಹಾಗಾದರೆ ಈಗಿನ ಶ್ರೀ ಸಿದ್ದೇಶ್ವರ ಶ್ರೀಗಳು ಹಾಗೂ ಜ್ಞಾನ ಯೋಗಶ್ರಮದ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ ಹಾಗಾದರೆ ಜ್ಞಾನ ಯೋಗಾಶ್ರಮದ ಇತಿಹಾಸ ಏನು ಮಲ್ಲಿಕಾರ್ಜುನ ಮಹಾಶಿವಯೋಗಿ ಯಾರು ಸಿದ್ದೇಶ್ವರ ಶ್ರೀಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ ಮೊದಲಿಗೆ ಅವರ ಆಶ್ರಮ ಮತ್ತು ಅವರ ಗುರುಗಳಾದ ಮಲ್ಲಿಕಾರ್ಜುನ ಶಿವಯೋಗಿಗಳ ಬಗ್ಗೆ ತಿಳಿಯಬೇಕು.


ಮಲ್ಲಿಕಾರ್ಜುನ ಶ್ರೀಗಳು ತಮ್ಮ 20ನೇ ವಯಸ್ಸಿನಲ್ಲಿ ಮನೆಬಿಟ್ಟರು ನಂತರ ಗದಗದ ಸದಾಶಿವ ಸ್ವಾಮೀಜಿ ಯವರನ್ನು ಭೇಟಿಯಾಗಿ ಅವರ ಮಾರ್ಗದರ್ಶನದಲ್ಲಿ ಮುಂದುವರೆದರು ಸದಾಶಿವ ಶ್ರೀಗಳು ಮಲ್ಲಿಕಾರ್ಜುನ ಶ್ರೀಗಳಿಗೆ ವೇದಾಂತ ಯೋಗ ಶರಣ ತತ್ವ ಮತ್ತು ಇತರೆ ಧಾರ್ಮಿಕ ಆಚರಣೆಗಳನ್ನು ಹೇಳಿಕೊಟ್ಟರು ಹೀಗೆ ಎಲ್ಲದರಲ್ಲೂ ಪಕ್ವವಾದ ಬಳಿಕ ಮಲ್ಲಿಕಾರ್ಜುನ ಶ್ರೀಗಳು 1925 ರಿಂದ ಪ್ರವಚನವನ್ನು ನೀಡಲು ಶುರು ಮಾಡಿದರು.

ಮಹಾರಾಷ್ಟ್ರ ಗೋವಾ ಕರ್ನಾಟಕದಲ್ಲೂ ಕೂಡ ಇವರು 1982ರವರೆಗೆ ಪ್ರವಚನಗಳನ್ನು ನೀಡುತ್ತಾ ಬಂದಿದ್ದರು ಇವರು ದೇಶದ ಮೇಲೆ ಅತಿಯಾದ ಪ್ರೀತಿ ಹೊಂದಿದ್ದು ಖಾದಿ ಬಳಕೆಯನ್ನು ದೊಡ್ಡಮಟ್ಟದಲ್ಲಿ ಪ್ರೋತ್ಸಾಹಿಸಿದ್ದರು ನಂತರ ಜನರಿಂದಲೇ ಹಣವನ್ನು ಪಡೆದುಕೊಂಡು ವಿವಿಧ ಶಾಲೆ ಮತ್ತು ಯೋಗಶ್ರಮ ಗಳನ್ನು ಪ್ರಾರಂಭಿಸಿದರು ಇಂದಿಗೂ ಈ ಶಾಲೆಗಳು ಮತ್ತು ಜ್ಞಾನ ಯೋಗಾಶ್ರಮ ಇದೆ ಈ ಸ್ವಾಮೀಜಿ ಹೇಗಿದ್ದರೂ ಎಂದರೆ ಕೆಲವು ನ್ಯಾಯ ತೀರ್ಮಾನಗಳಿಗೂ

ಇವರನ್ನು ಕರೆಯಲಾಗುತ್ತಿತ್ತು ಅದರಲ್ಲೂ ಒಂದು ಸಲ ಬೈಲಹೊಂಗಲ ಎಂಬ ಸ್ಥಳದಲ್ಲಿ ಹಲವು ತಿಂಗಳುಗಳ ಕಾಲ ಉಳಿದುಕೊಂಡಿದ್ದರು ಹಲವು ಜನರ ಹಲವಾರು ವ್ಯಾಜ್ಯಗಳನ್ನು ಬಗೆಹರಿಸಿದ್ದರು ಅಂದರೆ ಇವರ ಮಾತು ಜನರಿಗೆ ವೇದವಾಕ್ಯವಾಗಿತ್ತು ಹಾಗೂ ಇವರು ಹಲವು ಪುಸ್ತಕಗಳನ್ನು ಕೂಡ ಬರೆದಿದ್ದಾರೆ ಹಾಗಾದರೆ ಜ್ಞಾನ ಯೋಗಿ ಸಿದ್ದೇಶ್ವರ ಶ್ರೀಗಳು ಯಾರು ಇವರು ವಿಜಯ ಪುರ ಜಿಲ್ಲೆಯ ತಿಕ್ಕೋಟ ತಾಲೂಕಿನ.

ಬಿಜ್ಜರಗಿ ಗ್ರಾಮದಲ್ಲಿ 1941ರ ಅಕ್ಟೋಬರ್ 24ರಂದು ಜನಿಸಿದರು ಇವರದ್ದು ಸಾಮಾನ್ಯ ರೈತ ಕುಟುಂಬವಾ ಗಿತ್ತು ಸಿದ್ದಗೊಂಡಪ್ಪ ಎನ್ನುವುದು ಇವರ ಬಾಲ್ಯದ ಹೆಸರು ಮೊದಲು ನಾಲ್ಕನೇ ತರಗತಿಯವರೆಗೆ ಓದಿ ಶಾಲೆ ಬಿಟ್ಟ ಇವರು 14ನೇ ವಯಸ್ಸಿನಲ್ಲಿ ಮಲ್ಲಿ ಕಾರ್ಜುನ ಶ್ರೀಗಳ ಸಂಪರ್ಕವನ್ನು ಮಾಡುತ್ತಾರೆ ಸಿದ್ದೇಶ್ವರರಲ್ಲಿದ್ದ ಚುರುಕುತನವನ್ನು ಮಲ್ಲಿಕಾರ್ಜುನ ಮಹಾ ಶಿವಯೋಗಿಗಳು ಮೆಚ್ಚಿದ್ದರು ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *