ಶ್ರೀ ಸಿದ್ದೇಶ್ವರ ಸ್ವಾಮಿಗಳು ಹುಟ್ಟಿದ ಮನೆ ಅವರು‌ ನಡೆಸಿದ ಜೀವನ ಎಂತದ್ದು ಗೊತ್ತಾ ಜೀವನದಲ್ಲಿ ತಿಳಿಯಲೆಬೇಕಾದ ಬಂಗಾರದ ಮನುಷ್ಯನ ಕಥೆ - Karnataka's Best News Portal

ಶ್ರೀ ಸಿದ್ದೇಶ್ವರ ಸ್ವಾಮಿಗಳು ಹುಟ್ಟಿದ ಮನೆ ಅವರು‌ ನಡೆಸಿದ ಜೀವನ ಎಂತದ್ದು ಗೊತ್ತಾ ಜೀವನದಲ್ಲಿ ತಿಳಿಯಲೆಬೇಕಾದ ಬಂಗಾರದ ಮನುಷ್ಯನ ಕಥೆ

ಶ್ರೀ ಸಿದ್ದೇಶ್ವರ ಸ್ವಾಮೀಜಿ ಹುಟ್ಟಿದ ಮನೆ!ಶ್ರೀ ಸಿದ್ದೇಶ್ವರ ಸ್ವಾಮೀಜಿಗಳನ್ನು ಕರ್ನಾಟಕದ ಎರಡನೇ ವಿವೇಕಾನಂದ ಎಂದೇ ಕರೆಯುತ್ತಾರೆ ಇವರು ವಿಜಯಪುರದ ಜೀವಂತ ದೇವರು ಎಂದೇ ಪ್ರಸಿದ್ಧಿಯನ್ನು ಕೂಡ ಪಡೆದುಕೊಂಡಿದ್ದಾರೆ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಕೊಟ್ಟರೂ ಕೂಡ ಅದನ್ನು ನಮ್ರವಾಗಿ ವಾಪಸ್ಸು ಮಾಡಿದ್ದಾರೆ ಹೌದು ಅವರೇ ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು.

WhatsApp Group Join Now
Telegram Group Join Now

ಈಗಾಗಲೇ ಸಿದ್ದೇಶ್ವರ ಸ್ವಾಮೀಜಿಗಳ ಸಂಪೂರ್ಣ ಮಾಹಿತಿ ನಿಮಗೆಲ್ಲರಿಗೂ ತಿಳಿದಿದೆ ಅದರಂತೆ ಇನ್ನೂ ಕೆಲವೊಂದಷ್ಟು ನಿಮಗೆ ತಿಳಿಯದೆ ಇರುವಂತಹ ಮಾಹಿತಿಗಳ ಬಗ್ಗೆ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮೀಜಿ ಯವರ ಹುಟ್ಟಿದಂತಹ ಮನೆಯ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಶ್ರೀ ಸಿದ್ದೇಶ್ವರ ಸ್ವಾಮೀಜಿಗಳವರು ವಿಜಯಪುರ ಜಿಲ್ಲೆಯ ತಿಕ್ಕೋಟ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಒಂದು ಸಾಮಾನ್ಯ ರೈತ ಕುಟುಂಬದಲ್ಲಿ 1941 ಅಕ್ಟೋಬರ್ 24ರಂದು ಜನಿಸುತ್ತಾರೆ.

ಸಿದ್ದಗೊಂಡಪ್ಪ ಇದು ಇವರ ಬಾಲ್ಯದ ಹೆಸರು ಹಾಗೂ ಇವರಿಗೆ ತಾವು ಹುಟ್ಟಿದಂತಹ ಮನೆ ಎಂದರೆ ಪಂಚಪ್ರಾಣವಾಗಿತ್ತು ಇದು ಅವರ ಮೊದಲನೆಯ ಪಾಠಶಾಲೆ ಕೂಡ ಹೌದು ಈ ಮನೆಯಲ್ಲಿಯೇ ಆಟದ ಜೊತೆ ಕೆಲವೊಂದಷ್ಟು ಪಾಠಗಳನ್ನು ಕೂಡ ಕಲಿತು ಬಿಜ್ಜರಗಿ ಗ್ರಾಮದಲ್ಲಿಯೇ ನಾಲ್ಕನೇ ತರಗತಿಯವರೆಗೆ ಓದಿದರು ನಂತರ ಅವರು ಮಲ್ಲಿಕಾರ್ಜುನ ಸ್ವಾಮೀಜಿಗಳವರ ಬಳಿ ಬರುತ್ತಾರೆ.

ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಬಾಲಕ ಶ್ರೀ ಸಿದ್ದೇಶ್ವರರ ಚುರುಕುತನ ಮಲ್ಲಿಕಾರ್ಜುನ ಶ್ರೀಗಳಿಗೆ ತಿಳಿಯುವುದೇನು ತಡವಾಗಲಿಲ್ಲ ತಾವು ಪ್ರವಚನ ಮಾಡುವಂತಹ ಸ್ಥಳಗಳಿಗೆ ಅವರು ಶ್ರೀ ಸಿದ್ದೇಶ್ವರ ಅವರನ್ನು ಕರೆದುಕೊಂಡು ಹೋಗುತ್ತಿದ್ದರು ಇದರ ಜೊತೆ ಅವರ ಮುಂದಿನ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವು ಮುಂದುವರೆಯುವಂತೆಯೂ ಕೂಡ ನೋಡಿಕೊಂಡರು ಮುಂದೆ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪದವಿಯ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕಾಗಿ.

See also  ಸೆಕೆಂಡ್ ಪಿಯುಸಿ ಮಾಡಿದ್ರೆ ಸಾಕು ಮನೆಯಲ್ಲಿ ಕುಳಿತುಕೊಂಡು ತಿಂಗಳಿಗೆ 30 ತನಕ ಸಂಪಾದಿಸಬಹುದು ಹೀಗೆ ಮಾಡಿ ಸಾಕು

ಕೊಲ್ಲಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ್ರ ವಿಷಯದಲ್ಲಿ ಎಂಎ ಪದವಿಯನ್ನು ಉನ್ನತ ಶ್ರೇಣಿಯ ಲ್ಲಿ ಉತ್ತೀರ್ಣರಾಗುತ್ತಾರೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯ ವರು ಸರಳದಾಯಕವಾದ ಸ್ಪೂರ್ತಿದಾಯಕವಾದ ಜೀವನಶೈಲಿಯನ್ನು ಹೊಂದಿದ್ದರು. ತತ್ವಜ್ಞಾನಿ ಆಲೋಚಕ ಸಿದ್ದೇಶ್ವರ ಸ್ವಾಮೀಜಿಯವರು ಪ್ರಪಂಚ ದಾದ್ಯಂತ ಆಧ್ಯಾತ್ಮಿಕ ವಿಚಾರವನ್ನು ಪಸರಿಸಿದ್ದಾರೆ ಪೂಜ್ಯಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳ ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದರು ಕೇವಲ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ಮಧ್ಯ ಪ್ರದೇಶ ಗುಜರಾತ್ ನಗರಗಳಲ್ಲಿ.

ತಿಂಗಳುಗಳ ಗಟ್ಟಲೆ ಪ್ರವಚನವನ್ನು ನೀಡುತ್ತಿದ್ದರು ಭಾರತ ಸರ್ಕಾರ ನೀಡಿದ ಅತ್ಯುತ್ತಮ ನಾಗರಿಕ ಗೌರವ ಪ್ರಶಸ್ತಿಯ ಮೇಲೆ ನನಗೆ ಅಪಾರ ಗೌರವವಿದೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಕ್ಕೆ ನನಗೆ ಧನ್ಯವಾದಗಳು ಆದರೆ ನಾನೊಬ್ಬ ಸರಳ ವ್ಯಕ್ತಿ ಸಾಮಾನ್ಯ ಜೀವನ ನಡೆಸುತ್ತಿದ್ದ ಒಬ್ಬ ವ್ಯಕ್ತಿ ಆಧ್ಯಾತ್ಮಿಕ ಬೋಧನೆಯ ಮೂಲಕ ಜನರನ್ನು ಒಳ್ಳೆಯ ಮಾರ್ಗದತ್ತ ನಡೆಸುವುದೇ ನನ್ನ ಮೂಲ ಕರ್ತವ್ಯ ಎನ್ನುತ್ತಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">