ಚಿಕ್ಕ ಚಿಕ್ಕ ನುಸಿಗಳು ಮನೆಯಲ್ಲಿ ನಿಮಿಷದಲ್ಲಿ ಮಟಮಾಯ ಇನ್ನು ನುಸಿಗಳ ಕಾಟ ಇರೋದಿಲ್ಲ ಹೀಗೆ ಮಾಡಿ ಸಾಕು...ಈ ವಿಡಿಯೋ ನೋಡಿ - Karnataka's Best News Portal

ಇನ್ನು ನುಸಿಗಳ ಕಾಟ ಇರಲ್ಲ ಎಷ್ಟೇ ರಾಶಿ ನುಸಿಗಳು ಇರಲಿ ನಿಮಿಷದಲ್ಲಿ ಮಾಯ ಆಗುತ್ತೆ!! ಸೂಪರ್ ಟಿಪ್ಸ್
ಅಡುಗೆ ಮನೆಗಳಲ್ಲಿ ಯಾವುದೇ ಒಂದು ಪದಾರ್ಥ ವನ್ನು ತೆರೆದಿಟ್ಟಿದ್ದರೆ ಅದಕ್ಕೆ ನುಸಿಗಳ ಕಾಟ ತಪ್ಪಿದ್ದಲ್ಲ ಯಾವುದಾದರೂ ಒಂದು ಪದಾರ್ಥವನ್ನು ಬಾಳೆಹಣ್ಣು ಇರಬಹುದು ನಿಂಬೆಹಣ್ಣು ಇರಬಹುದು ಹೀಗೆ ಅಡುಗೆ ಮನೆಯಲ್ಲಿರುವಂತಹ ಸೊಪ್ಪು ತರಕಾರಿ ಆಹಾರದ ಮೇಲೆ ಎಲ್ಲವೂ ಕೂಡ ನುಸಿಗಳು ಕೂರುತ್ತಲೇ ಇರುತ್ತದೆ.

ಆದರೆ ಇವುಗಳನ್ನು ತಪ್ಪಿಸಲು ನಾವು ಎಷ್ಟೇ ಹರ ಸಾಹಸ ಪಟ್ಟರೂ ಯಾವುದೇ ವಿಧಾನವನ್ನು ಅನುಸರಿಸಿದರೂ ಕೂಡ ಅವುಗಳು ಹೋಗುವುದಿಲ್ಲ ಇದರಿಂದ ಆಹಾರ ಪದಾರ್ಥಗಳು ಹಾಳಾಗುತ್ತದೆ ಜೊತೆಗೆ ಇವುಗಳು ಆಹಾರದ ಮೇಲೆ ಕುಳಿತಿರುವುದರಿಂದ ಆಹಾರವನ್ನು ನಾವು ಸೇವಿಸುವುದರಿಂದ ನಮ್ಮ ಆರೋಗ್ಯದಲ್ಲಿಯೂ ಕೂಡ ಹಲವಾರು ತೊಂದರೆಗಳು ಕಾಣಿಸಿಕೊಳ್ಳುತ್ತಿರುತ್ತದೆ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸುವುದರಿಂದ


ನಿಮ್ಮ ಅಡುಗೆ ಮನೆಯಲ್ಲಿ ಯಾವುದೇ ರೀತಿಯಾದ ನುಸಿಗಳು ಬರುವುದಿಲ್ಲ ಜೊತೆಗೆ ಅವುಗಳು ಇದ್ದರೂ ಕೂಡ ಆಹಾರ ಪದಾರ್ಥದ ಮೇಲೆ ಆಗಲಿ ನಿಮ್ಮ ಮನೆಯಲ್ಲಿ ಕಂಡು ಬರುವುದಿಲ್ಲ ಅವೆಲ್ಲವೂ ಕೂಡ ದೂರವಾಗುತ್ತದೆ ಹಾಗಾದರೆ ಈ ಒಂದು ವಿಧಾನವನ್ನು ಹೇಗೆ ಮಾಡುವುದು ಇದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ಇವುಗಳನ್ನು ಯಾವ ರೀತಿ ಬರದಂತೆ ಆಹಾರವನ್ನು ಜೋಪಾನವಾಗಿ ಇಡಬಹುದು ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ.

ಈ ವಿಧಾನವನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಏನು ಎಂದು ನೋಡುವುದಾದರೆ ಮೊದಲು ಒಂದು ಚಿಕ್ಕ ಪಾತ್ರೆಗೆ ಅರ್ಧ ಲೋಟ ನೀರು ಹಾಕಿ ಅದಕ್ಕೆ ಒಂದು ಚಮಚ ಸಕ್ಕರೆ ಹಾಕಿ ಚೆನ್ನಾಗಿ ಕರಗಿಸಿಕೊಳ್ಳಿ ನಂತರ ಅದಕ್ಕೆ ಚೆನ್ನಾಗಿ ಹಣ್ಣಾಗಿರುವ ಬಾಳೆಹಣ್ಣನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಆ ನೀರಿನ ಒಳಗೆ ಹಾಕಬೇಕು ನಂತರ ಅದಕ್ಕೆ ನಿಮ್ಮ ಮನೆಯಲ್ಲಿರುವಂತಹ ಯಾವುದಾದರೂ ಡಿಶ್ ವಾಶ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು ನಂತರ ಆ ಪಾತ್ರೆಯ ಮೇಲ್ಭಾಗದಲ್ಲಿ ಬಿಳಿ ಬಣ್ಣದ ಪ್ಲಾಸ್ಟಿಕ್ ಕವರ್ ಹಾಕಿ ಸುತ್ತ ಅದನ್ನು ಕಟ್ಟಬೇಕು

ಈ ರೀತಿ ಕಟ್ಟಿದ ಮೇಲೆ ಅದರ ಮೇಲೆ ಚಿಕ್ಕ ಚಿಕ್ಕ ರಂದ್ರಗಳನ್ನು ಮಾಡಬೇಕು ಹೀಗೆ ಮಾಡುವುದರಿಂದ ನುಸಿಗಳು ಅದರೊಳಗೆ ಹೋಗಿ ಸಿಕ್ಕಿಹಾಕಿಕೊಳ್ಳುತ್ತದೆ ನಂತರ ಅದು ಬರಲು ಸಾಧ್ಯವಾಗುವುದಿಲ್ಲ ಜೊತೆಗೆ ಅದರಲ್ಲಿ ಡಿಶ್ ವಾಶ್ ಹಾಕಿರುವುದರಿಂದ ಅವುಗಳಿಗೆ ತಲೆಸುತ್ತು ಕೂಡ ಬರುತ್ತದೆ ಹೀಗೆ ಈ ವಿಧಾನವನ್ನು ಅನುಸರಿಸಿ ನಿಮ್ಮ ಅಡುಗೆ ಮನೆಯಲ್ಲಿ ಅಡುಗೆ ಮನೆಯ ಯಾವುದಾದರು ಜಾಗದಲ್ಲಿ ಇಟ್ಟರೆ ಜೊತೆಗೆ ಹಣ್ಣು ತರಕಾರಿ ಇಡುವಂತಹ ಸ್ಥಳಗಳಲ್ಲಿ ಇದನ್ನು ಇಟ್ಟರೆ ನುಸಿಗಳು ಇದರ ಒಳಗೆ ಬೀಳುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *