ಮಧ್ಯರಾತ್ರಿ ಪೋನ್ ಮಾಡಿ ಮನೆಗೆ ಬಾ ಅಂತಾರೆ ಹೋಗಲಿಲ್ಲ ಅಂದರೆ ಸಿನಿಮಾ ಕ್ಯಾನ್ಸಲ್ ಸಿನಿಮಾ ಜಗತ್ತಿನ ಇನ್ನೊಂದು ಮುಖ ಹೇಗಿರುತ್ತೆ ಗೊತ್ತಾ.. - Karnataka's Best News Portal

ಸಿನಿಮಾದಲ್ಲಿ ಚಾನ್ಸ್ ಬೇಕು ಅಂದ್ರೆ ಅವರು ಹೇಳಿದಂಗೆ ಕೇಳಬೇಕು ಅಂತ ಅಂದಿದ್ಯಾರು.ಚಿತ್ರರಂಗ ಅಂದರೆ ಅದೊಂದು ವಿವಾದಗಳ ಹಾಗೂ ಅಪವಾದಗಳ ಮಹಾಕೂಪ ಎಂದೇ ಹೇಳಲಾಗುತ್ತದೆ ಚಿತ್ರರಂಗ ಹಾಗು ಅದಕ್ಕೆ ಸಂಬಂಧಪಟ್ಟವರು ಸದಾ ಒಂದಲ್ಲ ಒಂದು ವಿವಾದಗಳಲ್ಲಿ ಇದ್ದೇ ಇರುತ್ತಾರೆ. ಚಿತ್ರರಂಗ ಹಾಗು ಲೈಂಗಿಕ ಆರೋಪ ಇವೆರಡಕ್ಕೂ ಕೂಡ ಅವಿನಾಭಾವ ನಂಟಿದೆ. ಮಣಿಯರು ದೊಡ್ಡ ದೊಡ್ಡ ನಾಯಕರುಗಳ ಮೇಲೆ ಲೈಂ’ಗಿ’ಕ ಆರೋಪವನ್ನು ಹರಿಸಿದ್ದನ್ನು ನೋಡಿದ್ದೇವೆ.

ಸುಮಾರು 4 ವರ್ಷಗಳ ಹಿಂದೆ ಅಂದರೆ 2018ರಲ್ಲಿ ಈ ಒಂದು ಹೋರಾಟ ಉಗ್ರ ಸ್ವರೂಪವನ್ನು ತಾಳಿತು ಮೀ’ಟು ಎಂಬ ಹೆಸರಿನ ಮಹಾ ಸ್ತ್ರೀ ಶಕ್ತಿ ಅಭಿಯಾನದಲ್ಲಿ ಭಾರತೀಯ ಚಿತ್ರರಂಗದ ಹಲವು ಹಿರಿಯ ಕಿರಿಯ ಹೊಸ ಮತ್ತು ಹಳಬರ ಒಂದಷ್ಟು ನಟಿಯರು ಪ್ರಭಾವಿ ವ್ಯಕ್ತಿಗಳ ವಿರುದ್ಧ ತಮಗಾದ ಅನ್ಯಾಯಕ್ಕೆ ಪ್ರತಿಯಾಗಿ ಸಾಮಾಜಿಕ ಹೋರಾಟವನ್ನು ಕೈಗೊಂಡ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ.


ಇದು ಭಾರತ ಮಾತ್ರವಲ್ಲದೆ ಇಡೀ ಜಗತ್ತಿನಾದ್ಯಂತ ತೀವ್ರಗತಿಯ ಹೋರಾಟವಾಗಿತ್ತು. ಈ ಮೀ’ಟು ಅಭಿಯಾನದಲ್ಲಿ ಅನೇಕ ಭಾರತೀಯ ನಟಿಯರು ಹಂಚಿಕೊಂಡ ಅಪವಾದ ಮತ್ತು ದೂರಗಳು ಬೆಚ್ಚಿ ಬೆಳಿಸುವಂತೆ ಇದ್ದವು. ಮೊದಲನೆಯದಾಗಿ ತನುಶ್ರೀ ದತ್ತ ಆರೋಪದ ಬಗ್ಗೆ ನೋಡುವುದಾದರೆ 2008ರಲ್ಲಿ ಅವರು ತಮ್ಮ ಮೇಲೆ ನಾನಾ ಪಾಟೇಕರ್ ಹಾಗೂ ಅವರ ಗೂಂಡಾಗಳು ಶೂಟಿಂಗ್ ಸೆಟ್ನಲ್ಲಿ ಎಸಗಿದ ಅನ್ಯಾಯದ ಬಗ್ಗೆ ದೂರು ಕೊಟ್ಟಿದ್ದರು ಇದು 2018ರ ಜುಲೈನಲ್ಲಿ ತೀವ್ರ ಸ್ವರೂಪವನ್ನು ಪಡೆದಿತ್ತು.

ಆ ಒಂದು ಸಮಯದಲ್ಲಿ ಎಲ್ಲೆಲ್ಲೂ ಕೂಡ ಮೀ’ಟು ಆರೋಪದ್ದೇ ಕಾರುಭಾರವಾಗಿತ್ತು 38 ವರ್ಷದ ನಟಿ ತನುಶ್ರೀ ದತ್ತ ತಮ್ಮ ಫೋಟೋ ಒಂದನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿ ತನಗೆ ಏನಾದರೂ ಹೆಚ್ಚು ಕಡಿಮೆಯಾದರೆ ಅದಕ್ಕೆ ನಾನಾ ಪಾಟೇಕರ್ ಹಾಗೂ ಅವರ ಮಾಫಿಯಾ ಗ್ಯಾಂಗ್ ನೇರ ಕಾರಣ ಎಂದು ಬರೆದುಕೊಂಡಿದ್ದರು ಇದು ತೀವ್ರ ಚರ್ಚೆಗೆ ಕಾರಣವಾಗಿ ಎಲ್ಲೆಡೆ ವೈರಲ್ ಆಗಿತ್ತು. ನಾನಾ ಪಾಟೇಕರ್ ಸಾಧಾರಣ ನಟನೆನಲ್ಲ ಬಾಲಿವುಡ್ ನಲ್ಲಿ ಅವರನ್ನು ನೈಜ ಹಾಗೂ ಕಂಪಿಟೇಟರ್ ಎಂದು ಕರೆಯಲಾಗುತ್ತಿತ್ತು ಹಾಗೂ ದೇಶದ ಬಡಜನರ ಹಾಗೂ ದೀನದಲಿತರ ಬಗ್ಗೆ ಅವರಿಗೆ ಇರುವಂತಹ ಕಾಳಜಿ ಹಾಗೂ ಸಹಾಯ ಮನೋಭಾವದಿಂದ ಮೆಚ್ಚುಗೆಯನ್ನು ಪಡೆದಿದ್ದರು.

ಆದರೆ ತನುಶ್ರೀ ಅವರ ಆರೋಪದಿಂದ ಆ ನಟನ ಹೆಸರು ಹಾಗೂ ಇಮೇಜ್ ಧಕ್ಕೆ ಉಂಟಾಗುವ ರೀತಿಯಲ್ಲಿತ್ತು. ಈ ಕುರಿತಾಗಿ ನಾನಾ ಪಾಟೇಕರ್ ಯಾವುದೇ ಹೇಳಿಕೆಯನ್ನು ಕೊಡದೆ ಮೌನವಾಗಿದ್ದರು. 10 ವರ್ಷಗಳ ಹಿಂದೆ ದೂರನ್ನು ಕೊಟ್ಟಿದ್ದೆ ಹಾಗೂ ಅವರಿಗೆ ಮೊದಲಿಂದಲೂ ಕೂಡ ಭೂಗತ ಲೋಕದ ಹಲವು ಮಾಫಿಯಾ ಡಾನ್‌ಗಳ ಜೊತೆ ಸ್ನೇಹ ಸಲುಗೆ ಇದೆ ಈ ಬಗ್ಗೆ ಕೋರ್ಟ್ ಅವರ ಬಗ್ಗೆ ಸೂಕ್ತ ತನಿಖೆಯನ್ನು ಮಾಡಬೇಕು ಎಂದು ತನುಶ್ರೀ ಆರೋಪ ಮಾಡಿದ್ದರು.

Leave a Reply

Your email address will not be published. Required fields are marked *