ಅವನನ್ನು ಕೊಂದಿದ್ದು ನನಗೆ ಅವತ್ತೇ ಗೊತ್ತಿತ್ತು ಅವರೆ ಹೇಳೋಕೆ ಅವರೆಲ್ಲ ಬಿಡಲಿಲ್ಲ ಬಗೆ ಹರಿಯಿತೆ ಸುಶಾಂತ್ ಸಾವಿನ ರಹಸ್ಯ.. - Karnataka's Best News Portal

ಅವನನ್ನು ಕೊಂದಿದ್ದು ನನಗೆ ಅವತ್ತೇ ಗೊತ್ತಿತ್ತು ಅವರೆ ಹೇಳೋಕೆ ಅವರೆಲ್ಲ ಬಿಡಲಿಲ್ಲ ಬಗೆ ಹರಿಯಿತೆ ಸುಶಾಂತ್ ಸಾವಿನ ರಹಸ್ಯ..

ಸುಶಾಂತ್ ಸಿಂಗ್ ರಜಪೂತ್ ಎನ್ನುವ ಸ್ಪುರದ್ರೂಪಿ ನಟನದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ…ಬಾಲಿವುಡ್ ಹೆಸರಾಂತ ನಟ ಸುಶಾಂತ್ ಸಿಂಗ್ ರಜಪೂತ್ ಅವರದ್ದು ಆತ್ಮಹತ್ಯೆ ಅಲ್ಲ ಬದಲಿಗೆ ಅದು ವ್ಯವಸ್ಥಿತವಾದ ಮರ್ಡರ್ ಎಂದು ಇತ್ತೀಚಿಗೆ ಸುಶಾಂತ್ ಅವರ ಶವ ಪರೀಕ್ಷೆ ಮಾಡಿದ್ದ ಡಾಕ್ಟರ್ ರೂಪ್ ಕುಮಾರ್ ಶಾ ಎನ್ನುವವರು ಅಧಿಕೃತವಾಗಿ ಸುದ್ದಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು ಶಾಕ್ ನೀಡಿದ್ದಾರೆ. ಎರಡು ವರ್ಷಗಳ ಹಿಂದೆ ಅಚಾನಕ್ಕಾಗಿ ಸಂಭವಿಸಿದ್ದ ಈ ಉದಯೋನ್ಮುಖ ತಾರೆಯ ಸಾವು ಎಲ್ಲೆಡೆ ಗುಲ್ಲಾಗಿ ಸಾಕಷ್ಟು ಅನುಮಾನಗಳಿಗೂ ಕಾರಣವಾಗಿತ್ತು.

ಆಗಿನಿಂದಲೂ ಸಹ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವ ವಿವಾದ ಸತತವಾಗಿ ಹರಿದಾಡುತ್ತಲೇ ಇತ್ತು. ಇದಕ್ಕೆ ಕೆಲವೊಂದು ಸೆಲೆಬ್ರಿಟಿಗಳ ಹೆಸರು ಕೂಡ ತಗುಲಿ ಹಾಕಿಕೊಂಡಿತ್ತು. ಈಗ ರೂಪ್ ಕುಮಾರ್ ಶಾ ಅವರ ಈ ಹೇಳಿಕೆ ಈ ಸಾವಿನ ಕೇಸ್ ಗೆ ಮತ್ತೊಂದು ಬಿಗ್ ಟ್ವಿಸ್ಟ್ ನೀಡಿದೆ. ಈ ಹಿಂದೆ ಸುಶಾಂತ್ ಸಾವಿನ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರವು ಎಸ್ ಐ ಟಿ ಎಂದರೆ ಸ್ಪೆಷಲ್ ಇನ್ವೆಸ್ಟಿಕೆಶನ್ ಟೀಮ್ ಅನ್ನು ಕೂಡ ನೇಮಿಸಿತ್ತು.


ಸರಿ ಸುಮಾರು ಸುಶಾಂತ್ ಅವರ ಸಾವು ಸಂಭವಿಸುವ ಐದು ದಿನಗಳ ಮುಂದೆಯೇ ಅವರ ಅಸಿಸ್ಟೆಂಟ್ ಹಾಗೂ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯನ್ ಎಂಬಾಕೆಯು ಕೂಡ ನಿಗೂಢವಾಗಿ ಸಾವನಪ್ಪಿದ್ದರು. ಈಕೆಯ ಸಾವು ಸಂಭವಿಸಿದ್ದು 2020ರ ಜೂನ್ 8ರಂದು ಇದಾದ ಐದೇ ದಿನಗಳಲ್ಲಿ ಸುಶಾಂತ್ ಅವರ ಶವ ಅವರ ಮುಂಬೈನ ಮನೆಯಲ್ಲಿ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

See also  ಓದಿದ್ದೆಲ್ಲಾ ಮರೆತು ಹೋಗುತ್ತೆ ಏನು ಮಾಡೋದು ಮಕ್ಕಳ ಮೆಮೊರಿ ಇಂಪ್ರೂವ್ ಆಗಲು ಹೀಗೆ ಮಾಡಿ

ದಿಶಾ ಸಾಲಿಯನ್ ಅವರು ಸತ್ತಿರುವ ಹಿಂದಿನ ದಿನ ರಾತ್ರಿ ಕೂಡ ಯಾವುದೋ ಪಾರ್ಟಿಯಲ್ಲಿ ಸಂತಸದಿಂದಲೇ ಇದ್ದವರು. ಆದರೆ ಇದ್ದಕ್ಕಿದ್ದ ಹಾಗೆ ಮರುದಿನ ಫ್ಲಾಟ್ ರೂಮಿನಲ್ಲಿ ಹೆಣವಾಗಿ ಸಿಕ್ಕಿದ್ದರು. ಇಲ್ಲಿ ದಿಶಾ ಸಾಲಿಯನ್ ಸಾವಿಗೂ ಹಾಗೂ ಸುಶಾಂತ್ ಸಾವಿಗೂ ಏನೋ ಸಂಬಂಧ ಇರಬೇಕು ಎನ್ನುವ ಅನುಮಾನ ಹಲವರು ಜನರಲ್ಲಿ ಇತ್ತು. ಇವರಿಬ್ಬರ ಸಾವನ್ನು ಕೂಡ ಒಂದೇ ಟೀಮ್ ಸಂಚು ಮಾಡಿ 5 ದಿನಗಳ ಅಂತರದಲ್ಲಿ ಕೊಲೆ ಮಾಡಿ ಹೋಗಿದೆ ಎನ್ನುವುದು ಈಗ ಹೊರಬಿದ್ದಿರುವ ಭಯಗ್ರಸ್ಥ ನಿಜ ಸಂಗತಿ.

ಈ ಎರಡು ಸಾವುಗಳು ಸಹಜವಲ್ಲ ಎರಡು ಸಾವುಗಳಿಗೂ ಸಂಬಂಧ ಇದೆ ಅದು ಹತ್ಯೆಯೇ ಇರಬಹುದು ಎನ್ನುವುದು ಎರಡು ವರ್ಷಗಳಿಂದಲೂ ಕೂಡ ಹರಿದಾಡುತ್ತಿದ್ದ ವಿಷಯ. ಈ ವಿಷಯದ ಕುರಿತು ಸರ್ಕಾರ ಹಾಗೂ ಅಧಿಕಾರಿಗಳು ದಿವ್ಯ ನಿರ್ಲಕ್ಷ ತೋರುತ್ತ ಇದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿತ್ತು. ಇದು ಬಹುಮಟ್ಟಿಗೆ ಸತ್ಯವೂ ಕೂಡ ಹೌದು.

ಈಗ ಮಹಾರಾಷ್ಟ್ರ ಸರ್ಕಾರವು ಈ ಹತ್ಯೆ ಹಿಂದೆ ಇರುವ ಅಪರಾಧಿಗಳನ್ನು ಕಂಡುಹಿಡಿದು ತಕ್ಕ ಶಿಕ್ಷೆ ಕೊಡಿಸುತ್ತೇವೆ ಎನ್ನುವ ಭರವಸೆಯನ್ನು ನೀಡಿದೆ. ಈ ವಿಷಯದ ಕುರಿತ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

[irp]


crossorigin="anonymous">