ಒಂದು ಎಕರೆಗೆ ಒಂದು ಕೋಟಿ ದುಡಿಯುತ್ತಿರುವ ಮಹಿಳೆ ಕವಿತಾ ಮಿಶ್ರ ಶ್ರೀಗಂಧ ಫಾರ್ಮ್ ಟ್ಯೂರ್ ..ಇನ್ಪೋಸಿಸ್ ಬಿಟ್ಟು ಶ್ರೀಗಂಧ ಬೆಳೆದ ಮಹಿಳೆ - Karnataka's Best News Portal

ಎಂಟು ಎಕರೆಯಲ್ಲಿ ಎಂಟು ಕೋಟಿ ದುಡ್ಡು ಮಾಡುವ ಸೀಕ್ರೆಟ್ ಹಂಚಿಕೊಂಡ ಪ್ರಗತಿಪರ ಎಜುಕೇಟೆಡ್ ರೈತ ಮಹಿಳೆ ಕವಿತಾ ಮಿಶ್ರಾ…ಕರ್ನಾಟಕದಲ್ಲಿ ಶ್ರೀಗಂಧದ ಬೆಳೆಗಾರರು ಎಂದು ಹೆಸರಾಗಿರುವ ಕವಿತಾ ಮಿಶ್ರ ಒಬ್ಬರು ಪ್ರಗತಿಪರ ರೈತ ಮಹಿಳೆ. ಜೊತೆಗೆ ಅದ್ಭುತವಾದ ವಾಗ್ಮಿ ಕೂಡ, ಕೃಷಿ ಬಗ್ಗೆ ಅನೇಕ ಹೊಸ ವಿಚಾರಗಳನ್ನು ಪ್ರಯೋಗ ಮಾಡಿ ಗೆದ್ದಿರುವ ಇವರು ಕೃಷಿ ಬಗ್ಗೆ ಅತ್ಯಂತ ಒಲವು ಹೊಂದಿದ್ದಾರೆ. ರಾಯಚೂರಿನಿಂದ ಬಾಗಲಕೋಟೆಗೆ ಹೋಗುವ ರಸ್ತೆಯಲ್ಲಿ ಇವರು ಒಂದು ಫಾರ್ಮ್ ಕೂಡ ಮಾಡಿದ್ದಾರೆ.

ಕವಿತಾ ಮಿಶ್ರ ಸ್ಯಾಂಡಲ್ ಫಾರ್ಮ್ ಎಂದು ಬೋರ್ಡ್ ಹೊಂದಿರುವ ಇದರಲ್ಲಿ ಎಲ್ಲಾ ಬಗೆಯ ಹಣ್ಣು ತರಕಾರಿ ಔಷಧಿ ಸಸಿಗಳು, ಹೂವಿನ ಸಸಿಗಳು, ಅಲಂಕಾರಕ ಸಸ್ಯಗಳು ಕೂಡ ಸಿಗುತ್ತವೆ. ಒಂದು ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಇವರ ವ್ಯವಸಾಯದ ಚಟುವಟಿಕೆಗಳ ಕುರಿತ ವಿಡಿಯೋಗಳು ಬಹಳ ವೈರಲ್ ಆಗಿದ್ದವು. ಆಗ ಯಾರು ಈ ಕವಿತಾ ಮಿಶ್ರ ಎಂದು ಎಲ್ಲರೂ ಆಶ್ಚರ್ಯದಿಂದ ತಿಳಿದುಕೊಳ್ಳಲು ಶುರು ಮಾಡಿದರು.


ಕವಿತಾ ಮಿಶ್ರ ಅವರ ಪೂರ್ತಿ ಹೆಸರು ಕವಿತಾ ಉಮಾಶಂಕರ್ ಮಿಶ್ರ. ಇವರು ಹುಟ್ಟಿದ್ದು ಧಾರವಾಡದಲ್ಲಿ ಆದರೆ ಈಗ ನೆಲೆಸಿರುವ ರಾಯಚೂರ್ ಬಳಿಯ ಕವಿತಾಳ್ ಇವರ ಗಂಡನ ಮನೆ ಆಗಿದೆ. ಧಾರವಾಡದಲ್ಲಿ ವಿದ್ಯಾಭ್ಯಾಸವನ್ನೆಲ್ಲ ಮುಗಿಸಿದ ಇವರು ತುಂಬಾ ಚೆನ್ನಾಗಿ ಓದಿಕೊಂಡಿದ್ದರು. ಆದರೆ ಕವಿತಾಳ್ ಎನ್ನುವ ಹಳ್ಳಿಗೆ ಇವರನ್ನು ಮದುವೆ ಮಾಡಿ ಕೊಟ್ಟಾಗ ಬಹಳ ಬೇಸರ ಪಟ್ಟುಕೊಂಡಿದ್ದರಂತೆ.

ಯಾಕೆಂದರೆ ಆ ಹಳ್ಳಿಯಲ್ಲಿ ಹೆಣ್ಣು ಮಕ್ಕಳು ಬೇರೆ ಕಡೆ ಹೋಗಿ ಕೆಲಸ ಮಾಡುವಂತಿರಲಿಲ್ಲ. ಹೀಗಾಗಿ ಇಲ್ಲಿದ್ದುಕೊಂಡು ನಾನು ಏನು ಸಾಧನೆ ಮಾಡಲಿ ಎಂದು ಅವರು ಯೋಚಿಸ ತೊಡಗಿದರು. ಆದರೆ ಪ್ರತಿಯಿಂದ ಸಿಕ್ಕ ಅನುಮತಿ ಏನೆಂದರೆ, ನೀನು ಏನೇ ಸಾಧಿಸುವುದೇ ಇದ್ದರೂ ಈ ನಮ್ಮ ಹೊಲ ಮನೆ ಒಳಗೆ ಮಾಡಬೇಕು ಎಂದು. ಆ ಸಮಯದಲ್ಲಿ ಒಂದು ಸಣ್ಣ ಸೈಕಲ್ ಕೂಡ ಅವರ ಹೊಲಕ್ಕೆ ಹೋಗಲು ಸರಿಯಾದ ರಸ್ತೆ ಮಾರ್ಗ ಇರಲಿಲ್ಲ, ಅರ್ಧ ಕ್ವಿಂಟಲ್ ಸಜ್ಜೆ ಕೂಡ ಬೆಳೆಯಲು ಸಾಧ್ಯವಾಗದಂತಹ ಗುಡ್ಡದಂತಿತ್ತು ಅವರ ಜಮೀನು.

ಆದರೆ ಇಂದು ಅದೇ ಜಾಗದಲ್ಲಿ ಇಡೀ ಕರ್ನಾಟಕಕ್ಕೆ ಮಾದರಿಯಾಗುವಂತ ಫಾರ್ಮ್ ನಿರ್ಮಿಸಿದ್ದಾರೆ. ಇಂದು ಅವರ ಎಂಟು ಎಕರೆ ಹತ್ತು ಗುಂಟೆ ತೋಟದಲ್ಲಿ ಎರಡೂವರೆ ಸಾವಿರ ಶ್ರೀ ಗಂಧದ ಮರಗಳಿವೆ. ಜೊತೆಗೆ ಒಂದು ಸಾವಿರ ಮಾವು, ಆರು ನೂರು ಪೇರಲೆ, ಆರು ನೂರೂ ಸೀತಾಫಲ ನೂರು ಬೆಟ್ಟದ ನೆಲ್ಲಿಕಾಯಿ ಮರ, 300 ನೂರು ನೇರಳೆ ಮತ್ತು ನೂರು ಹುಣಸೆ ಮರ, ನೂರು ನಿಂಬೆ, ನೂರು ಕರಿಬೇವು, ನೂರು ನುಗ್ಗೆಕಾಯಿ, ನೂರು ತೆಂಗು ಹಾಗೂ ಮತ್ತು 800 ಸಾಗುವಾನಿ ಮರಗಳನ್ನು ಬೆಳೆದಿದ್ದಾರೆ.

ನಿಜಕ್ಕೂ ಇದು ಒಂದು ಅದ್ಭುತ ಸಾಧನೆಯೇ ಸರಿ. ಇವರ ಉದ್ದೇಶ ಇಷ್ಟೇ ಸಿಂಗಲ್ ಸ್ಕ್ವಯರ್ ಪೀಟ್ ಕೂಡ ಫಲವತ್ತಾದ ಭೂಮಿ ವ್ಯರ್ಥ ಆಗಬಾರದು ಎನ್ನುವುದು. ಇಂದು ಇವರು ಅವರ ಎಂಟು ಗಂಟೆ ಭೂಮಿಯಿಂದ ಗಳಿಸುತ್ತಿರುವುದು ಆದಾಯ ಬರೋಬ್ಬರಿ ಎಂಟು ಕೋಟಿ ರೂಗಳು. ಇದರ ಕುರಿತ ಇನ್ನಷ್ಟು ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Reply

Your email address will not be published. Required fields are marked *