ಕಟಕ ರಾಶಿ ನಂಬಬೇಡಿ ಹಗ್ಗ ಹಾವು ಅಂತ ಭ್ರಾಂತಿ ಹುಟ್ಟಿಸ್ತಾರೆ ಕಟಕ ರಾಶಿ ಶನಿ ಪರಿವರ್ತನೆ ಫಲ 2023-25 ರ ತನಕ ಹೇಗಿದೆ ನೋಡಿ - Karnataka's Best News Portal

ಕಟಕ ರಾಶಿಯಲ್ಲಿ ಶನಿ ಪರಿವರ್ತನೆ ಫಲಾನುಫಲಗಳು ಹೇಗಿದೆ ಗೊತ್ತಾ?ಜನವರಿ 17ಕ್ಕೆ ಶನಿಯು ಮಕರ ರಾಶಿಯಿಂದ ಕುಂಭ ರಾಶಿಗೆ ಹೋಗುತ್ತಿದ್ದಾರೆ. ಮುಂದಿನ ಎರಡು ಕಾಲು ವರ್ಷ ಕುಂಭ ರಾಶಿಯಲ್ಲಿಯೇ ಶನಿ ಇರುತ್ತಾರೆ. ಎಂಟನೇ ಮನೆಯಲ್ಲಿರುವ ಶನಿಯು ಯಾವ ಯಾವ ಬದಲಾವಣೆಯನ್ನು ನಿಮ್ಮ ರಾಶಿಯಲ್ಲಿ ತರಲಿದ್ದಾರೆ. ಅದರ ದೋಷಗಳಿಗೆ ಇರುವ ಪರಿಹಾರಗಳು ಏನು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಅಷ್ಟಮ ಭಾವವನ್ನು ರಂಧ್ರ ಸ್ಥಾನ ಎನ್ನಲಾಗುತ್ತದೆ. ಇದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಶನಿಯ ಪ್ರಭಾವ ಇರುತ್ತದೆ. ಆರೋಗ್ಯ ಎನ್ನುವುದು ಪ್ರತಿಯೊಂದು ಚಟುವಟಿಕೆ ಮೇಲು ಕೂಡ ಪರಿಣಾಮ ಬೀರುತ್ತದೆ. ದೇಹದ ಯಾವುದೇ ಭಾಗಕ್ಕೆ ಸಮಸ್ಯೆ ಇದ್ದರೂ ಇಡೀ ದೇಹವೇ ಕಂಟ್ರೋಲ್ ತಪ್ಪಿದ ರೀತಿ ಆಗುತ್ತದೆ.

ಹಾಗಾಗಿ ಈ ಅಷ್ಟಮ ಸ್ಥಾನದಿಂದ ಇದೇ ರೀತಿ ಸಮಸ್ಯೆ ಇರುತ್ತದೆಯಾ, ಬರೀ ಬಾಧೆಗಳೇ ಹೆಚ್ಚಾಗಿರುತ್ತದೆಯಾ ಎನ್ನುವ ಭಯ ಹಲವರಿಗೆ ಕಾಡುತ್ತದೆ. ಏಪ್ರಿಲ್ ತನಕ ಗುರು ಚೆನ್ನಾಗಿರುವುದರಿಂದ ಆ ಸಮಯದಲ್ಲಿ ಹೆಚ್ಚಿನ ತೊಂದರೆಗಳೇನು ಇರುವುದಿಲ್ಲ. ನಿಮ್ಮ ಅದೃಷ್ಟ ರಕ್ಷಣೆ ಆಗಿರುತ್ತದೆ. ಶನಿಯನ್ನು ಆಯುಷ್ಯಕಾರಕ ಎಂದೂ ಕೂಡ ಕರೆಯುತ್ತಾರೆ. ಅಷ್ಟಮದ ಶನಿಗೆ ಭಯ ಬೀಳುವುದರಿಂದ ಅದರ ಪ್ರಭಾವದಿಂದ ಕೊಂಚ ಹೆಚ್ಚು ಕಮ್ಮಿ ಆದರೂ ಆ ಭಯ ಆಳವಾಗಿ ಬೇರೂರಿ ಬಿಡುತ್ತದೆ.

ಮೃತ್ಯುಭಯವನ್ನು ಕೂಡ ತರುವಷ್ಟರ ಮಟ್ಟಿಗೆ ಅಷ್ಟಮ ಶನಿ ನಿಮ್ಮನ್ನು ಸತಾಯಿಸಬಹುದು. ಆದರೆ ವಾತ್ಸವದ ಸಂಗತಿ ಏನೆಂದರೆ, ಪ್ರಾಣಕ್ಕೆ ಕಾರಕ ಶನಿ ಆಗಿರುವುದರಿಂದ ಅಷ್ಟಮದಲ್ಲಿ ಶನಿ ಇದ್ದಾಗ ಪ್ರಾಣಕ್ಕೆ ತೊಂದರೆ ಆಗುವುದಿಲ್ಲ. ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳು ಸತತವಾಗಿ ಕಾಡಬಹುದು, ಅದರಿಂದ ನಿಮ್ಮ ಮನಸ್ಸು ಭಯ ಬೀಳಬಹುದು ಅಷ್ಟೇ.

ಭಯ ಇದ್ದಾಗ ಹಗ್ಗ ಹಾವಾಗಿ ಕಚ್ಚುತ್ತದೆ ಎನ್ನುವ ಮಾತು ಸಹ ಇದೆ. ಹಗ್ಗವೇ ಹಾಗೂ ಎನ್ನುವ ರೀತಿ ಭ್ರಾಂತಿಯೂ ಉಂಟಾಗುವ ಹಾಗೆ ಮನಸ್ಸಿನಲ್ಲಿ ಕೂಡ ಶನಿ ಬಗ್ಗೆ ಇಂತಹದೇ ಭ್ರಾಂತಿ ಇರುತ್ತದೆ. ಹಾಗಾಗಿ ಅಷ್ಟಮದಲ್ಲಿ ಶನಿ ಇರುವವರು ಈ ಪ್ರಭಾವ ಹೊಂದಿರುವವರು ಮೊದಲಿಗೆ ಮಾಡಬೇಕಾದ ಸಂಗತಿ ಏನೆಂದರೆ, ನಿಜ ಯಾವುದು ಭ್ರಾಂತಿ ಯಾವುದು ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು.

ವಿಪರೀತವಾದ ಭಾವನಾತ್ಮಕ ಒತ್ತಡಕ್ಕೆ ಈ ಸಮಯದಲ್ಲಿ ನೀವು ಸಿಲುರುತ್ತೀರಿ. ಆರೋಗ್ಯದ ಸಮಸ್ಯೆ ಹಣಕಾಸಿನ ಸಮಸ್ಯೆ ಕೆಲಸದ ಒತ್ತಡ ಇನ್ನು ಅನೇಕ ಸಣ್ಣಪುಟ್ಟ ಸಮಸ್ಯೆಗಳು ಕೂಡ ಸತತವಾಗಿ ಕಾಡುತ್ತಿರುತ್ತದೆ. ಮನಸ್ಸಿಗೆ ಬರುವ ಪ್ರತಿಯೊಂದು ಗೊಂದಲವನ್ನು ಕೂಡ ವಿಚಾರ ಮಾಡಿ ಗಣನೆಗೆ ತಿಳಿದುಕೊಳ್ಳಬೇಕು. ಕಣ್ಣಿಗೆ ಕಂಡದ್ದೆಲ್ಲಾ ನಿಜ ಅಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

ಪ್ರತ್ಯಕ್ಷವಾಗಿ ಕಂಡದ್ದನ್ನು ಕೂಡ ಪ್ರಮಾಣಿಸಿ ನೋಡಬೇಕಾದ ಸಮಯ ಇದು. ಇದೇ ರೀತಿ ಕಟಕ ರಾಶಿಯ ಶನಿ ಪ್ರಭಾವದ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ವಿಡಿಯೋ ಪೂರ್ತಿಯಾಗಿ ನೋಡಿ.

Leave a Reply

Your email address will not be published. Required fields are marked *