ಈ ಬೇರು ಭೂಮಿಯ ಮೇಲಿನ ಸಂಜೀವಿನಿ ಶತಾವರಿ ಸಾವಿರ ಮಕ್ಕಳ ತಾಯಿ ಇದರ ಉಪಯೋಗ ಕೇಳಿದರೆ ಶಾಕ್ ಆಗ್ತೀರಾ‌.. - Karnataka's Best News Portal

ಈ ಬೇರುಭೂಮಿಯ ಮೇಲಿನ ಸಂಜೀವಿನಿ|ಶತಾವರಿ ಸಾವಿರ ಮಕ್ಕಳ ತಾಯಿ||ಈ ದಿನ ಆಯುರ್ವೇದದಲ್ಲಿ ಹೆಚ್ಚು ಶಕ್ತಿಶಾಲಿಯಾಗಿರು ವಂತಹ ಹೆಚ್ಚು ಹೆಸರುವಾಸಿಯಾಗಿರುವಂತಹ ಶತಾವರಿ ಬೇರಿನ ಬಗ್ಗೆ ಆರೋಗ್ಯಕರವಾದ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ. ಶತಾವರಿಯ ಬೇರನ್ನು ಔಷಧಿಯಾಗಿ ಉಪಯೋಗಮಾಡಲಾಗು ತ್ತದೆ ಇದು ರಸಗುಣದಲ್ಲಿ ಮಧುರ ಗುಣವನ್ನು ಹೊಂದಿದೆ ಹಾಗೆಯೇ ಒಗರು ಮತ್ತು ಕಹಿಯ ಗುಣವನ್ನು ಕೂಡ ಹೊಂದಿದೆ.

ಇದರ ಜೊತೆ ಶತಾವರಿ ತ್ರಿದೋಷಕ ನಿವಾರಣೆಯಾಗಿ ಕೆಲಸ ಮಾಡುತ್ತದೆ ಬಹಳ ಮುಖ್ಯವಾಗಿ ವಾತ ಹಾಗು ಪಿತ್ತ ನಿವಾರಕವಾಗಿ ಕೆಲಸ ಮಾಡುತ್ತದೆ ಕೆಲವೊಮ್ಮೆ ಇದು ಕಫವನ್ನು ವೃದ್ಧಿಗೊಳಿಸುತ್ತದೆ ಏಕೆಂದರೆ ಇದರಲ್ಲಿ ಮಧುರ ಗುಣ ಹೆಚ್ಚಾಗಿರುವುದರಿಂದ ಆದರೆ ವಾತ ಮತ್ತು ಪಿತ್ತ ಗುಣವನ್ನು ನಿವಾರಣೆ ಮಾಡುವುದಕ್ಕೆ ಇದು ಅದ್ಭುತ ಔಷಧಿ ಎಂದು ಹೇಳಬಹುದು ಒಟ್ಟಾರೆ ಯಾಗಿ ನೋಡುವುದಾದರೆ ಇದೊಂದು ತ್ರಿದೋಷಕ ನಿವಾರಕವಾಗಿ ಕೆಲಸ ಮಾಡುತ್ತದೆ.


ಜೊತೆಗೆ ಶತಾವರಿಯನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಹಲವಾರು ಪರಿವರ್ತನೆಗಳನ್ನು ಕೂಡ ತರುತ್ತದೆ ಇದೊಂದು ಶೀತ ವೀರ್ಯ ಗುಣ ಧರ್ಮವನ್ನು ಹೊಂದಿರುವಂತಹ ಔಷಧಿಯಾಗಿದ್ದು ಇದನ್ನು ಯಾವ ಯಾವ ಸಮಸ್ಯೆಗಳಿಗೆ ಉಪಯೋಗಿಸ ಬಹುದು ಹೇಗೆ ಇದನ್ನು ಉಪಯೋಗಿಸುವುದು ಇನ್ನೂ ಇದರ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಮೊದಲನೆಯದಾಗಿ ವಾತದ ಸಮಸ್ಯೆ ಗಳಿಂದಾಗಿರುವಂತಹ ಸಂಧಿವಾತ ಹಾಗೂ ನರ ದೌರ್ಬಲ್ಯತೆ

ಹಾಗೂ ಇದನ್ನು ಅಜೀರ್ಣ ಮಲಬದ್ಧತೆಯ ಸಮಸ್ಯೆ ಹೀಗೆ ಈ ಒಂದು ವಾತದ ಸಮಸ್ಯೆಗಳಲ್ಲಿ ಇದನ್ನು ಬಳಸಬಹುದು. ಇದರ ಜೊತೆ ಬಹಳ ಮುಖ್ಯವಾಗಿ ಚರ್ಮದ ತೊಂದರೆಗಳಿಗೂ ಕೂಡ ಇದನ್ನು ಬಳಸ ಬಹುದು ಹಾಗಾದರೆ ಹೇಗೆ ಇದನ್ನು ಬಳಸುವುದು ಎಂದು ನೋಡುವುದಾದರೆ ಶತಾವರಿ ಚೂರ್ಣವನ್ನು ಒಂದು ಚಮಚ ಹಾಗೂ ಒಂದು ಚಮಚ ಜೇನುತುಪ್ಪ ಅಥವಾ ಹಸುವಿನ ತುಪ್ಪವನ್ನು ಸೇರಿಸಿ.

ಬೆಳಗಿನ ಸಮಯ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ವಾತಕ್ಕೆ ಸಂಬಂಧಿಸಿದಂತಹ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ. ಇನ್ನು ಪಿತ್ತದ ಸಮಸ್ಯೆಗಳಿಗೆ ಕಾರಣವಾಗಿರುವಂತಹ ಅಸಿಡಿಟಿ ಚರ್ಮದ ಸಮಸ್ಯೆ ಕಣ್ಣಿನ ಸಮಸ್ಯೆಗಳಿಗೆ ಬಳಸಲಾಗು ತ್ತದೆ ಇಂಥವರು ಹೇಗೆ ಇದನ್ನು ಬಳಸುವುದು ಎಂದು ನೋಡುವುದಾದರೆ ಶತಾವರಿಯನ್ನು ಹಾಲು ಮತ್ತು ಕಲ್ಲು ಸಕ್ಕರೆಯಲ್ಲಿ ಕುದಿಸಿ ಕಣ್ಣಿಗೆ ಶೇಖವನ್ನು ಮಾಡುತ್ತಾರೆ.

ಹೀಗೆ ಮಾಡುವುದರಿಂದ ಶತಾವರಿ ನಿಮ್ಮ ಕಣ್ಣಿನಲ್ಲಿ ಇರುವಂತಹ ದೋಷವನ್ನು ಶಮನ ಮಾಡುವಂತಹ ಅದ್ಬುತ ಶಕ್ತಿಯನ್ನು ಹೊಂದಿರುತ್ತದೆ ಹಾಗೂ ಮನೋ ರೋಗಗಳನ್ನು ನಿವಾರಣೆ ಮಾಡುವುದಕ್ಕೆ ಹೀಗೆ ಹಲ ವಾರು ಸಮಸ್ಯೆಗಳಿಗೆ ಈ ಒಂದು ಶತಾಪರಿ ಚೂರ್ಣ ಅದ್ಬುತವಾದಂತಹ ಕಾರ್ಯವನ್ನು ಮಾಡುತ್ತದೆ ಒಟ್ಟಾರೆಯಾಗಿ ಆಯುರ್ವೇದದಲ್ಲಿ ಶತಾವರಿಯನ್ನು ಹಲವಾರು ಔಷಧಿಗಳಿಗೆ ಉಪಯೋಗಿಸಲಾಗುತ್ತದೆ ಎಂದೇ ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *