ದೀಪದ ಬತ್ತಿ ಸುಟ್ಟು ಬೂದಿ ಆದರೆ ಯಾವುದರ ಸಂಕೇತ ನಿತ್ಯ ದೀಪಾರಾಧನೆ ಹೇಗೆ ಮಾಡಬೇಕು... ದೈವಶಕ್ತಿ ಮನೆಯಲ್ಲಿ ಹೆಚ್ಚಾಗಲು ಏನು ಮಾಡಬೇಕು - Karnataka's Best News Portal

ದೀಪದ ಬತ್ತಿ ಸುಟ್ಟು ಬೂದಿ ಆದರೆ ಯಾವುದರ ಸಂಕೇತ.? ನಿತ್ಯದೀಪರಾದನೆ ಹೇಗೆ ಮಾಡಬೇಕು.? ದೈವ ಶಕ್ತಿ ಹೆಚ್ಚಿಸಲು ಏನು ಮಾಡಬೇಕು.?ನಾವು ದಿನನಿತ್ಯ ದೀಪರಾದನೆಯನ್ನು ಮಾಡುತ್ತಾ ಇರುತ್ತೇವೆ ಆ ಸಮಯದಲ್ಲಿ ನಾವು ಗೊತ್ತಿಲ್ಲದೆ ಕೆಲವೊಮ್ಮೆ ತಪ್ಪುಗಳನ್ನು ಮಾಡುತ್ತೇವೆ. ಮೊದಲು ಯಾವುದೇ ಒಂದು ದೀಪಗಳಿಗೆ ಎಣ್ಣೆಯನ್ನು ಮೊದಲು ಹಾಕಿ ನಂತರ ಬತ್ತಿಯನ್ನು ಇಟ್ಟು ಅದನ್ನು ನೀವು ಕಡ್ಡಿ ಪೆಟ್ಟಿ ಕಡ್ಡಿಯಲ್ಲಿ ಯಾವಾಗಲೂ ಬೆಳಗಿಸಬಾರದು ಗಂಧದ ಕಡ್ಡಿ ಹಚ್ಚಿಕೊಂಡು ಅದರಿಂದ ಅಥವಾ ಏಕಾರತಿಯಿಂದ ದೀಪವನ್ನು ಯಾವಾಗಲೂ ಬೆಳಗಿಸಿಕೊಳ್ಳಬೇಕು.

ದೀಪಗಳನ್ನು ನೀವು ಬೆಳ್ಳಿಯಲ್ಲಿ, ಇತ್ತಾಳೆ, ಕಂಚು, ತಾಮ್ರ, ಪಂಚಲೋಹ ಅಥವಾ ಮಣ್ಣಿನ ದೀಪಗಳನ್ನು ಸಹ ನೀವು ದಿನನಿತ್ಯದ ದೀಪಾರಾಧನೆಯಲ್ಲಿ ಬಳಸಬಹುದು ಯಾವುದೇ ಕಾರಣಕ್ಕೂ ಸ್ಟೀಲ್ ದೀಪಗಳನ್ನು ಬೆಳಗಿಸಬಾರದು. ದೀಪಗಳನ್ನು ದಿನನಿತ್ಯ ಪೂಜೆಗೂ ಮುಂಚೆ ಶುದ್ಧಿ ಮಾಡಿಕೊಂಡು ನಂತರ ದೀಪ ಬೆಳಗಿಸಬೇಕು ಯಾವುದೇ ಕಾರಣಕ್ಕೂ ಬರೀ ಬತ್ತಿಗಳನ್ನು ಬದಲಿಸಿ ದೀಪಗಳನ್ನು ಬೆಳಗಬಾರದು.


ಬೇಕಿದ್ದರೆ ನೀವು ಎರಡು ಜೋಡಿ ದೀಪಗಳನ್ನು ಇಟ್ಟುಕೊಂಡು ಒಂದು ದಿನ ಒಂದರಲ್ಲಿ ಬೆಳಗಿದರೆ ಮತ್ತೊಂದು ದಿನ ಬದಲಿಸಿ ಮತ್ತೊಂದರಲ್ಲಿ ಜೋಡಿ ದೀಪವನ್ನು ಬೆಳಗಿಸಬಹುದು. ದೀಪಗಳನ್ನು ಬೆಳಗಿಸಬೇಕಾದರೆ ಯಾವಾಗಲೂ ನೆಲದ ಮೇಲೆ ಇಡಬಾರದು ಅದರ ಕೆಳಗೆ ಒಂದು ತಟ್ಟೆ ಅಥವಾ ಎಲೆಯನ್ನು ಇಟ್ಟು ಅದರ ಮೇಲೆ ದೀಪವನ್ನು ಇಟ್ಟು ಬೆಳಗಿಸಬೇಕು.

ಬರೀ ನೆಲದ ಮೇಲೆ ಯಾವುದೇ ಕಾರಣಕ್ಕೂ ದೀಪಗಳನ್ನು ಇಡಬಾರದು ದೀಪಗಳಿಗೆ ಯಾವಾಗಲೂ ಎರಡು ಬತ್ತಿಗಳನ್ನು ಸೇರಿಸಿ ಒಂದು ಬತ್ತಿ ಮಾಡಿಕೊಂಡು ಬೆಳಗಬೇಕು. ದೀಪವನ್ನು ಬೆಳಗಿಸಿದ ತಕ್ಷಣ ದೀಪಕ್ಕೆ ಮೂರು ಕಡೆ ಅರಿಶಿನ ಕುಂಕುಮವನ್ನು ಇಟ್ಟು ಸ್ವಲ್ಪ ಅಕ್ಷತೆಯನ್ನು ಸಹ ಹಾಕಬೇಕು ಅದೇ ರೀತಿ ದೀಪದ ಒಂದು ಪೀಠದ ಭಾಗವನ್ನು ಬ್ರಹ್ಮನಿಗೆ ಸಮಾನ ಎಂದು ಹೇಳುತ್ತಾರೆ

ದೀಪದ ಸ್ತಂಭ ವಿಷ್ಣುವಿನ ರೂಪ, ದೀಪದ ಮೇಲ್ಭಾಗವನ್ನು ಶಿವನ ಸ್ವರೂಪ ಎಂದು ಹೇಳಲಾಗುತ್ತದೆ, ಬತ್ತಿಯನ್ನು ಅಗ್ನಿ ದೇವರಿಗೆ, ಬೆಳಗಿರುವ ಬತ್ತಿಯನ್ನು ಶಕ್ತಿ ಸ್ವರೂಪವಾಗಿ ಭಾವಿಸಬೇಕು. ಒಂದೇ ಬತ್ತಿಯಿಂದ ದೀಪಾರಾಧನೆಯನ್ನು ಯಾವುದೇ ಕಾರಣಕ್ಕೂ ಮಾಡಬಾರದು ಏಕ ಬತ್ತಿ ದೀಪವನ್ನು ಅಶುಭ ಸಂದರ್ಭದಲ್ಲಿ ಮಾತ್ರ ಬೆಳಗಿಸುವಂತಹದು. ತುಳಸಿ ಕಟ್ಟೆಯ ಹತ್ತಿರ ಮಣ್ಣಿನ ದೀಪದಿಂದ ದೀಪಾರಾಧನೆಯನ್ನು ಮಾಡುವುದರಿಂದ ಮನೆಗೆ ಯಾವುದೇ ರೀತಿಯಾದಂತಹ ದುಷ್ಟ ಶಕ್ತಿಗಳು ಪ್ರವೇಶ ಮಾಡುವುದಿಲ್ಲ.

ದೀಪರಾಧನೆಯಲ್ಲಿ ತುಪ್ಪದ ದೀಪ ಮಹಾಲಕ್ಷ್ಮಿಗೆ, ಎಳ್ಳೆಣ್ಣೆ ವಿಷ್ಣುವಿಗೆ ಮತ್ತು ಸುಬ್ರಹ್ಮಣ್ಯನಿಗೆ, ಕೊಬ್ಬರಿ ಎಣ್ಣೆ ಗಣೇಶನಿಗೆ ತುಂಬಾ ವಿಶೇಷವಾದ ಪ್ರೀತಿ ಇರುವಂತಹದ್ದು. ಹಸುವಿನ ತುಪ್ಪ ಬೇವಿನ ಎಣ್ಣೆ, ಒಳ್ಳೆಣ್ಣೆ ಅಥವಾ ಅರಳೆಣ್ಣೆ ಕೊಬ್ಬರಿ ಎಣ್ಣೆಗಳು ಪರಶಕ್ತಿಗೆ ಅತ್ಯಂತ ಪ್ರಿಯವಾದದ್ದು ಇದನ್ನು ನೀವು ದೀಪಾರಾಧನೆಗೆ ಬಳಸಬೇಕು. ಈ ರೀತಿಯಲ್ಲಿ ನೀವು ದೀಪಾರಾಧನೆ ಮಾಡುವುದರಿಂದ ಶುಭವಾಗುತ್ತದೆ.

Leave a Reply

Your email address will not be published. Required fields are marked *