ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ನಟರು ಯಾರ್ಯಾರು ಗೊತ್ತಾ.?ಭಾರತೀಯ ಚಿತ್ರರಂಗ ಹಲವು ಭಾಷೆಗಳ ಹತ್ತಾರು ಸ್ಟಾರ್ ಹೀರೋಗಳ ಅನೇಕ ಸುಂದರ ನಟಿಯರು ಇರುವಂತಹ ಕಲರ್ ಫುಲ್ ಹಾಗೂ ವೈವಿಧ್ಯಮಯವಾದಂತಹ ಚಿತ್ರರಂಗ ವಿಶೇಷವಾಗಿ ದಕ್ಷಿಣದಲ್ಲಿ ಈಗ ಬಹುತೇಕ ಎಲ್ಲಾ ಹೀರೋಗಳ ಚಿತ್ರಗಳು ಕೂಡ ಭರ್ಜರಿಯಾಗಿ ಓಡುತ್ತಿವೆ ಈಗ ಹೊಸಬರ ಆರ್ಭಟ ಬಹುತೇಕ ಎಲ್ಲಾ ಚಿತ್ರರಂಗಗಳಲ್ಲೂ ಕೂಡ ಜೋರಾಗಿ ಇದ್ದರೂ ಹಳಬರು ಏನು ಕಡಿಮೆ ಆಗಿಲ್ಲ,
ಇತ್ತೀಚಿಗೆ ತೆರಿಗೆ ಬಂದ ಕನ್ನಡದ ವೇದ ಚಿತ್ರದಲ್ಲೂ ಕೂಡ ನಟ ಶಿವಣ್ಣ ಈ ವಯಸ್ಸಿನಲ್ಲೂ ಪ್ರೇಕ್ಷಕರ ಹಾರ್ಟ್ ಬೀಟ್ ಹೆಚ್ಚಾಗುವ ರೀತಿಯಲ್ಕಿ ನಟಿಸಿ ಗೆದ್ದಿದ್ದಾರೆ. ಈ ರೀತಿ ಪ್ರತಿ ಚಿತ್ರರಂಗದಲ್ಲೂ ಕೂಡ 30-40 ವರ್ಷಗಳಿಂದಲೂ ಮನರಂಜಿಸುತ್ತಾ ಬಂದಿರುವ ಎಷ್ಟೋ ಕಲಾವಿದರು ಇದ್ದಾರೆ. ಪ್ಯಾನ್ ಇಂಡಿಯಾ ಕ್ರೇಜ್ ನಿಂದಾಗಿ ಅನೇಕ ಹೊಸಬರು ಕನ್ನಡದಿಂದ ಬೇರೆ ಚಿತ್ರರಂಗಕ್ಕೂ ಕೂಡ ಪರಿಚಯವಾಗುತ್ತಿದ್ದರಾದರು.
ಕನ್ನಡದಲ್ಲಿ ನಟ ರಾಜ್‌ಕುಮಾರ್ ಹಾಗೂ ಡಾಕ್ಟರ್ ವಿಷ್ಣುವರ್ಧನ್ ಎಂಬ ಈ ಇಬ್ಬರು ಮಹಾ ನಟರು ಇರುವಂತಹ ಫ್ಯಾನ್ಸ್ ಬೇರೆ ಯಾವ ಕಲಾವಿದರಿಗೂ ಇಲ್ಲ ಕನ್ನಡ ಚಿತ್ರರಂಗದ ಮೊಟ್ಟ ಮೊದಲ ಸೂಪರ್ ಸ್ಟಾರ್ ಎಂದೆ ಕರೆಸಿಕೊಂಡ ಡಾಕ್ಟರ್ ರಾಜಣ್ಣ ಅವರ ಹೆಸರಿನಲ್ಲಿ ಇಡೀ ವಿಶ್ವದಲ್ಲಿ 5000ಕ್ಕೂ ಹೆಚ್ಚು ಸಂಖ್ಯೆಯ ರಿಜಿಸ್ಟರ್ ಅಭಿಮಾನಿ ಸಂಘಗಳು ಇದೆ.
ಅಣ್ಣಾವರಿಗಾಗಿ ಇಂದಿಗೂ ಕೂಡ ಪ್ರಾಣವನ್ನಾದರೂ ಕೊಡಬಲ್ಲ ಜನರಿದ್ದಾರೆ ರಾಜಣ್ಣ ಸಿನಿಮಾ ನಟರಾಗಿ, ಗಾಯಕ ರಾಗಿ, ನಿರ್ಮಾಪಕರಾಗಿ, ಮಹತ್ತರ ಚಿತ್ರಗಳನ್ನು ಕೊಟ್ಟ ಮೇರು ನಟ. ರಾಜ್ಯದ ಪ್ರತಿ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಕೂಡ ಡಾಕ್ಟರ್ ರಾಜ್‌ಕುಮಾರ್ ಫ್ಯಾನ್ಸ್ ಇದ್ದಾರೆ.
ಸುಮಾರು 1968ರಲ್ಲಿಯೇ ಕನ್ನಡದಲ್ಲಿ ಯಶಸ್ವಿ 100 ಚಿತ್ರಗಳನ್ನು ಮುಗಿಸಿದ ಏಕಮಾತ್ರ ಪ್ರಥಮ ಕಲಾವಿದರಾಗಿ ರಾಜಣ್ಣ ಅವರಿಗೆ ನಟಸಾರ್ವಭೌಮ ಎಂಬ ಬಿರುದು ಕೊಟ್ಟು ಗೌರವಿಸಲಾಯಿತು. ಡಾಕ್ಟರ್ ರಾಜ್‌ಕುಮಾರ್ ಅವರು ಕನ್ನಡದ ಹಾಗೂ ಕನ್ನಡಿಗರ ಕಣ್ಮಣಿ ಕನ್ನಡದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಸಕ್ಸಸ್ ರೇಟ್ ಇರುವುದು ಇವರಿಗೆ ಮಾತ್ರ ರಾಜಣ್ಣ ಹೆಚ್ಚು ಯಾವ ಚಿತ್ರದಲ್ಲೂ ಕೂಡ ರೀಮೇಕ್ ಹೀರೋ ಆಗಿ ನಟಿಸಲಿಲ್ಲ ಅವರ ಚಿತ್ರಗಳೇ ಬೇರೆ ಭಾಷೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೀಮೇಕ್ ಆಗುತ್ತಿದ್ದವು.
ಕನ್ನಡದಲ್ಲಿ ಡಾಕ್ಟರ್ ರಾಜ್‌ಕುಮಾರ್ ಅವರ ಹೊಸ ಚಿತ್ರಗಳು ಯಾವುದು ಬಿಡುಗಡೆ ಕಂಡಿವೆ ನಾವು ಯಾವುದನ್ನು ರಿಮೇಕ್ ಮಾಡಬೇಕು ನೋಡಿ ಎಂದು 70-80ರ ದಶಕದಲ್ಲಿ ತಮಿಳು ಹಾಗೂ ಚಿತ್ರರಂಗದ ನಿರ್ದೇಶಕರು ಚರ್ಚೆ ಮಾಡುತ್ತಿದ್ದರು. ಇನ್ನೂ ಡಾ. ರಾಜ್‌ಕುಮಾರ್ ಅವರ ಬಳಿಕ ಡಾಕ್ಟರ್ ವಿಷ್ಣುವರ್ಧನ್ ಅವರು ಬರುತ್ತರೆ ಕಾಂಪಿಟೇಟರ್ ಇಲ್ಲದೆ ಸೂಪರ್ ಸ್ಟಾರ್ ಆಗಿ ಮೆರೆದರು ಡಾ. ರಾಜ್‌ಕುಮಾರ್.