ಡಾ ಬಿ ಆರ್ ಅಂಬೇಡ್ಕರ್ ಅವರ ಈ ಕೋರ್ಟ್ ಕೇಸ್ ಇಲ್ಲಿತನಕ ಯಾರಿಗೂ ಗೊತ್ತಿಲ್ಲ...ಒಂದು ರೋಚಕ ಕಥೆ ನೋಡಿ - Karnataka's Best News Portal

ಡಾ ಬಿ ಆರ್ ಅಂಬೇಡ್ಕರ್ ಅವರ ಈ ಕೋರ್ಟ್ ಕೇಸ್ ಇಲ್ಲಿತನಕ ಯಾರಿಗೂ ಗೊತ್ತಿಲ್ಲ…ಒಂದು ರೋಚಕ ಕಥೆ ನೋಡಿ

ಡಾಕ್ಟರ್ ಅಂಬೇಡ್ಕರ್ ನ ಈ ಕೋರ್ಟ್ ಕೇಸ್ ಒಂದು ರೋಚಕ ಕಥೆ.ಅಂಬೇಡ್ಕರ್ ಅವರು ಲಂಡನ್ನಿಂದ ಬ್ಯಾರಿಸ್ಟರ್ ಆಗಿ ಕೋರ್ಟ್ ನ ಕಚೇರಿ ಒಳಗೆ ಕಾಲಿಟ್ಟರು ಆಗ ಜನರು ಮತ್ತು ಅಲ್ಲಿರುವ ವಕೀಲರು ಇವರನ್ನು ನೋಡಿ ಗುರುತಿಸಿ ಇವನು ಬಾಬಾ ಸಾಹೇಬ ನೀಚ ಜಾತಿಯವನು ಇವತ್ತು ಕರಿಕೋಟ್ ಸೂಟ್ ಅನ್ನು ಹಾಕಿಕೊಂಡು ನಮ್ಮ ಕಚೇರಿ ಒಳಗೆ ಬಂದಿದ್ದಾನೆ ಬಾಬಾ ಸಾಹೇಬ ಅಲ್ಲಿ ಟೇಬಲ್ ಹುಡುಕಿದರು ಎಲ್ಲರ ಹತ್ತಿರ ಒಂದೊಂದು ಕ್ಯಾಬಿನ್ ಇತ್ತು, ಇವರಿಗೆ ಜಾಗ ಸಿಗಲಿಲ್ಲ ಆಗ ಇವರನ್ನು ನೋಡಿದ ಬೇರೆ ವಕೀಲರು ಹೇಳಿದರು.

ನೀನು ವಿದ್ವಾನ್ ನೀನು ತುಂಬಾ ತಿಳಿದುಕೊಂಡಿರುವವನು ನಿನಗೆ ಕಚೇರಿ ಅವಶ್ಯಕತೆ ಇಲ್ಲ ಕಚೇರಿಯಿಂದ ಹೊರಗೆ ಕುಳಿತರು ನಿನ್ನ ಅಂಗಡಿ ನಡೆಯುತ್ತದೆ ಎಂದು ಹೇಳಿದರು ಅದನ್ನೇ ಛಲವಾಗಿ ತೆಗೆದುಕೊಂಡಂತಹ ಅಂಬೇಡ್ಕರ್ ಅವರು ಕೋರ್ಟ್ ಕಚೇರಿಯಿಂದ ಆಚೆಗೆ ಕುಳಿತರು. ಬಾಬಾ ಸಾಹೇಬ್ ಅವರ ಹತ್ತಿರ ಚಿಕ್ಕಪುಟ್ಟ ಕೇಸ್ಗಳು ಬರುತ್ತಿತ್ತು ಅದರಿಂದ ಅವರ ಜೀವನ ನಡೆಯುತ್ತಿತ್ತು ಚಿಕ್ಕದಾಗಿ ಬಿಸಿನೆಸ್ ನಡೆಯುತ್ತಿತ್ತು.


ಇದರ ಮಧ್ಯ ಒಬ್ಬ ದೊಡ್ಡ ಸೇಟು ಆತನ ಮಗನಿಗೆ ಗಲ್ಲು ಶಿಕ್ಷೆಯನ್ನು ನೀಡಲಾಗಿತ್ತು ಆ ಸೇಟು ಮತ್ತು ಆತನ ಹೆಂಡತಿ ಇಡೀ ಮುಂಬೈನ ಎಲ್ಲಾ ವಕೀಲರ ಹತ್ತಿರ ಹೋಗಿ ಫೈಲ್ ತೋರಿಸಿದರು ತಕ್ಷಣ ಅವರು ರಿಜೆಕ್ಟ್ ಮಾಡ್ತಾ ಹೇಳುತ್ತಿದ್ದರು ನಿಮ್ಮ ಮಗ ಉಳಿಯುವುದಿಲ್ಲ ಎಂದರು ಮತ್ತು ಸೇಟು ತುಂಬಾ ಹಣವನ್ನು ಖರ್ಚು ಮಾಡಿದ್ದ. ಹೀಗೆ ಸೇಟು ಹುಡುಕುತ್ತಾ ಹುಡುಕುತ್ತಾ ಬಾಬಾ ಸಾಹೇಬ್ ಇರುವಂತಹ ಕಚೇರಿಗೆ ಬಂದು ತಲುಪುತ್ತಾರೆ.

See also  ಪಿಯುಸಿ ಅಥವಾ ಡಿಪ್ಲೋಮಾ ಪಾಸ್ ಆದವರು ಬಿಎಂಟಿಸಿ ಕಂಡಕ್ಟರ್ ಕೆಲಸ ತೆಗೆದುಕೊಳ್ಳೊದು ಹೇಗೆ ? ಈ ವಿಡಿಯೋ ನೋಡಿ

ಕಚೇರಿಯ ಒಳಗೆ ಇದ್ದಂತಹ ವಕೀಲರನ್ನು ವಿಚಾರಿಸುತ್ತಾರೆ ಆದರೆ ಯಾವುದೇ ವಕೀಲರು ಸಹ ಈ ಒಂದು ಕೇಸ್ ಅನ್ನು ತೆಗೆದುಕೊಳ್ಳಲು ಒಪ್ಪಿಕೊಳ್ಳುವುದಿಲ್ಲ ನಂತರ ಹೊರಗಡೆ ಬಂದು ಅಂಬೇಡ್ಕರ್ ಅವರ ಕಾಲನ್ನು ಹಿಡಿದು ಈ ಒಂದು ಕೇಸ್ ಅನ್ನು ನೀವು ತೆಗೆದುಕೊಂಡರೆ ನನ್ನ ಮಗ ಜೀವಾವಧಿ ಶಿಕ್ಷೆಯಿಂದ ಹೊರ ಬರುತ್ತಾನೆ ಎಂದು ಹೇಳುತ್ತಾರೆ.

ನಂತರ ಈ ಒಂದು ಕೇಸ್ ಅನ್ನು ತೆಗೆದುಕೊಂಡಂತಹ ಅಂಬೇಡ್ಕರ್ ಅವರು ಸೇಟು ಮಗನನ್ನು ರಕ್ಷಿಸಲು ಮುಂದಾಗುತ್ತಾರೆ. ಗಲ್ಲು ಶಿಕ್ಷೆಗೆ 10 ದಿನ ಇರುವಂತಹ ಸಂದರ್ಭದಲ್ಲಿ ಕೋರ್ಟ್ ಸಜ್ಜಾಯಿತು ಕೋರ್ಟ್ ನಲ್ಲಿ ಎರಡು ಪಕ್ಷದ ವಕೀಲರು ಸೇರಿದರು ಜಡ್ಜ್ ಹೇಳಿದರು ಬಾಬಾ ಸಾಹೇಬ್ ನೀನೇನಾದರೂ ಹೇಳುವುದು ಇದೆಯಾ ಎಂದು ಅದಕ್ಕೆ ಬಾಬಾ ಸಾಹೇಬ್ ಇಲ್ಲ ನೀವು ನಿಮ್ಮ ತೀರ್ಮಾನವನ್ನು ತಿಳಿಸಿ ಎಂದರು.

ನಂತರ ಆ ಸೇಟು ಮಗನ ಕತ್ತಿಗೆ ಗಲ್ಲಿಗೇರಿಸಲು ಕರೆದುಕೊಂಡು ಹೋದಂತಹ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಸಾಕು ನಿಲ್ಲಿಸಿ ನೀವು ಗಲ್ಲಿಗೇರಿಸುವ ಶಿಕ್ಷೆ ಕೊಟ್ಟಿದ್ದೀರಿ ನೀವು ಸಾವಿನ ಶಿಕ್ಷೆ ಕೊಟ್ಟಿರಲಿಲ್ಲ ಎಂದು ಅವರ ಜಾಣ್ಮೆಯನ್ನು ಮೆರೆದರು. ಈ ಒಂದು ವಿಚಾರವನ್ನು ನಾವು ಕೂಲಂಕುಶವಾಗಿ ವಿಚಾರಿಸಿದರೆ ಅಂಬೇಡ್ಕರ್ ಅವರ ತೀವ್ರ ಬುದ್ಧಿ ಎಷ್ಟು ಎಂಬುದು ನಮಗೆ ತಿಳಿಯುತ್ತದೆ.

[irp]


crossorigin="anonymous">