ಮೊಟ್ಟ ಮೊದಲು ಬೆಳಿಗ್ಗೆ ಎದ್ದು ಏನು ಮಾಡಬೇಕು ಶ್ರೀ ಸಿದ್ದೇಶ್ವರ ಸ್ವಾಮಿಗಳು ಹೇಳುವ ಈ ಮಾತನ್ನು ಕೇಳಿ » Karnataka's Best News Portal

ಮೊಟ್ಟ ಮೊದಲು ಬೆಳಿಗ್ಗೆ ಎದ್ದು ಏನು ಮಾಡಬೇಕು ಶ್ರೀ ಸಿದ್ದೇಶ್ವರ ಸ್ವಾಮಿಗಳು ಹೇಳುವ ಈ ಮಾತನ್ನು ಕೇಳಿ

ಮೊಟ್ಟಮೊದಲು ಬೆಳಿಗ್ಗೆ ಎದ್ದು ಏನು ಮಾಡಬೇಕು, ಶ್ರೀ ಸಿದ್ದೇಶ್ವರ ಸ್ವಾಮೀಜಿ ಏನು ಹೇಳುತ್ತಾರೆ ಒಮ್ಮೆ ಕೇಳಿ.
ಹಿಂದಿನ ಕಾಲದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಕೆಲವೊಂದಷ್ಟು ಶುಭರವಾದಂತಹ ಕೆಲಸಗಳನ್ನು ಮಾಡುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಕಾಲ ಮುಂದುವರೆದಂತೆ ಜನರ ಜೀವನ ಶೈಲಿಗೂ ಸಹ ಬದಲಾಗುತ್ತಿದೆ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಲ್ಯಾಪ್‌ಟಾಪ್ ನೋಡುವುದು ಹಾಗೆ ಇನ್ನಿತರ ಯಾವುದಾದರೂ ಒಂದು ಕೆಲಸಗಳಲ್ಲಿ ತೊಡಗಿಸಿ ಕೊಳ್ಳುತ್ತಾ ಇದ್ದಾರೆ.

WhatsApp Group Join Now
Telegram Group Join Now

ಮೊದಲು ಎದ್ದ ತಕ್ಷಣ ದೇವರಿಗೆ ನಮಸ್ಕರಿಸಿ ಮುಂದಿನ ಕೆಲಸಗಳನ್ನು ಮಾಡಲಾಗುತ್ತಿತ್ತು. ಇತ್ತೀಚಿನ ಜನರು ಬೆಳಿಗ್ಗೆ ಎದ್ದ ತಕ್ಷಣ ತಮ್ಮ ಪಕ್ಕದಲ್ಲಿ ಇರುವಂತಹ ಮೊಬೈಲ್ ಗಳನ್ನು ಎತ್ತುಕೊಂಡು ಅದರಲ್ಲಿಯೇ ಮುಳುಗಿ ಹೋಗುತ್ತಾರೆ. ಬೆಳಿಗ್ಗೆ ಎದ್ದು ಮೊಟ್ಟ ಮೊದಲು ಏನು ಮಾಡಬೇಕು ಎನ್ನುವುದರ ಬಗ್ಗೆ ಸಿದ್ಧೇಶ್ವರ ಸ್ವಾಮಿಗಳು ನಮಗೆ ಒಂದಷ್ಟು ಮಾಹಿತಿಯನ್ನು ತಿಳಿಸಿದ್ದಾರೆ.


ಏಳುವಾಗ ಅನಂತತ, ಮಲಗುವಾಗ ಶೂನ್ಯ ಇದುವೇ ಜೀವನ. ಏಳುವಾಗ ದೇವ, ಮಲಗುವಾಗ ಮೌನ ಇದುವೇ ಜೀವನ. ಕೋಳಿ ಕೂಗದ ಮುನ್ನ ಹೇಳುವುದು ದಿನನಿತ್ಯ ಅಂದೆನ್ನ ಸರ್ವಜ್ಞ. ಕೋಳಿ ಕೂಗುವ ಮುಂಚೆ ಎದ್ದೇಳಬೇಕು ಎಂದು ಸರ್ವಜ್ಞ ತುಂಬಾ ನಿಯಮ ಬದ್ಧವಾಗಿ ಹೇಳಿದ್ದಾರೆ ಮೊದಲೆಲ್ಲಾ ಕೋಳಿಗಳು ಇದ್ದವು ಅದು ಕೂಗಿದರೆ ಕೇಳಿಸುವಷ್ಟು ಶಾಂತತೆಯಿಂದ ಜಗತ್ತು ಇತ್ತು ಆದರೆ ಇದೀಗ ಸಾಕಷ್ಟು ಗದ್ದಲದಿಂದ ಜಗತ್ತು ತುಂಬಿಕೊಂಡಿದೆ.

See also  ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ

ಕೋಳಿ ಕೂಗುವ ಮುನ್ನ ಅಂದರೆ ಸೂರ್ಯದೇವ ಹೊಂಗಿರಣವನ್ನು ಚೆಲ್ಲುವ ಮೊದಲೇ ಎದ್ದು ದೇವರನ್ನು ನೆನೆಯಬೇಕು. ಸೂರ್ಯ ಬರುವ ಮುಂಚೆ ಎದ್ದು ಮನಸ್ಸನ್ನು ದೇವರ ಕಡೆ ಹರಿಸಿ ಒಂದೆರಡು ನಿಮಿಷಗಳ ಕಾಲ ಪ್ರಾರ್ಥನೆ ಮಾಡಬೇಕು ನಮಗೆ ಈ ರೀತಿಯಾದಂತಹ ಒಂದು ಜೀವನ ಒಂದು ಕೊಟ್ಟಿರುವುದಕ್ಕೆ ದಯಾಳುವಿಗೆ ನಮಸ್ಕರಿಸಬೇಕು.

ಇಷ್ಟೆಲ್ಲ ಅನುಕೂಲ ಮಾಡಿಕೊಳ್ಳಲು ಅವಕಾಶ ಕೊಟ್ಟಿರುವಂತಹ ದೇವರನ್ನ ನೆನೆಸಿಕೊಳ್ಳುವುದು ಒಂದು ಪವಿತ್ರ ಕೆಲಸ ಇದು ಮೊದಲನೇ ಕೆಲಸ. ಎರಡನೆಯದಾಗಿ ದೇವರನ್ನು ನೆನೆಸಿದ ಮರುಕ್ಷಣವೇ ಜಗತ್ತಿನಲ್ಲಿ ಶ್ರೇಷ್ಠ ಸಂತರು, ಜ್ಞಾನಿಗಳು, ಮಹಾತ್ಮರು ಬಾಳಿ ಬದುಕಿ ಹೋಗಿರುತ್ತಾರೆ ಅವರ ಮಾತುಗಳಲ್ಲಿ ಸತ್ಯ ಕೂಡಿಕೊಂಡಿರುತ್ತದೆ ಅಂತಹ ಮಹಾನುಭಾವರ ಮಾತುಗಳನ್ನು ನೆನಪು ಮಾಡಿಕೊಳ್ಳಬೇಕು.

ಬೆಳಿಗ್ಗೆ ನಮ್ಮ ದಿನವೂ ದೇವರೊಂದಿಗೆ ಪ್ರಾರಂಭವಾಗಿ ರಾತ್ರಿ ದೇವರೊಂದಿಗೆ ಮುಗಿದರೆ ನಮ್ಮ ಜೀವನ ಪಾವನವಾಗುತ್ತದೆ. ಅದೇ ರೀತಿ ಹಲವಾರು ಜನಗಳು ದುಶ್ಚಟಗಳಿಗೆ ಮಾರುಹೋಗಿದ್ದಾರೆ ಬೆಳಗ್ಗೆ ಎದ್ದು ಆ ಒಂದು ಕೆಟ್ಟ ಚಟಗಳ ಮೂಲಕ ಪ್ರಾರಂಭಗೊಳಿಸಿ ತಮ್ಮ ಮನಸ್ಸನ್ನು ಶಾಂತ ರೀತಿಯಲ್ಲಿ ಇಟ್ಟುಕೊಳ್ಳಲು ವಿಫಲರಾಗುತ್ತಾರೆ. ಆದ್ದರಿಂದ ಸಿದ್ದೇಶ್ವರ ಶ್ರೀಗಳು ತಿಳಿಸಿರುವಂತಹ ರೀತಿಯಲ್ಲಿ ನಮ್ಮ ದಿನವನ್ನು ಪ್ರಾರಂಭ ಮಾಡಿಕೊಂಡು ಹಾಗೆ ದಿನದ ಕೊನೆಯನ್ನು ಸಹ ಮುಕ್ತಾಯ ಮಾಡಬೇಕು.

[irp]


crossorigin="anonymous">