ಹೆಣ್ಣು ಮಕ್ಕಳು ಮರೆತೂ ಸಹ ಸಂಕ್ರಾಂತಿ ದಿನ ತಲೆ ಸ್ನಾನ ಮಾಡಬಾರದು ಯಾವ ದಿನ ಸಂಕ್ರಾಂತಿ ಆಚರಿಸಬೇಕು ನೋಡಿ - Karnataka's Best News Portal

ಮಕರ ಸಂಕ್ರಾಂತಿ ದಿನ ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಬಾರದು, ಯಾವ ದಿನ ಸಂಕ್ರಾಂತಿ ಆಚರಣೆ||
ಮಕರ ಸಂಕ್ರಾಂತಿಯನ್ನು ಯಾವ ದಿನ ಆಚರಿಸಬೇಕು ಹಾಗೂ ಅದರ ಯಾವ ನಿಯಮಗಳನ್ನು ಅನುಸರಿಸಬೇಕು ಇನ್ನೊಂದು ವಿಷಯದ ಬಗ್ಗೆ ಈ ದಿನ ತಿಳಿಯೋಣ ಅದರಲ್ಲಿ ಹೆಚ್ಚಿನ ಜನಕ್ಕೆ ಮಕರ ಸಂಕ್ರಾಂತಿಯನ್ನು 14ನೇ ತಾರೀಖು ಆಚರಿಸಬೇಕಾ ಅಥವಾ 15ನೇ ತಾರೀಖು ಆಚರಿಸಬೇಕಾ ಎಂಬ ಗೊಂದಲದಲ್ಲಿಯೇ ಇದ್ದಾರೆ.

ಈ ಮಕರಾಯಣ ಶುರುವಾಗುವುದು ನಮ್ಮ ಮಕರ ರಾಶಿಗೆ ಸೂರ್ಯ ಪ್ರವೇಶ ಮಾಡಿದಾಗ ಇದು ಉತ್ತರಾಯಣ ಪೂರ್ವ ಪುಣ್ಯ ಕಾಲ ಎಂದು ಶಾಸ್ತ್ರ ಹೇಳುತ್ತದೆ ಅಂದರೆ ಸೂರ್ಯ ಮಕರ ರಾಶಿಯನ್ನು ಪ್ರವೇಶ ಮಾಡಿದ ಮೇಲೆ ದೇವತೆಗಳಿಗೆ ಹಗಲು ಎಂದು ಹೇಳುತ್ತೇವೆ, ಉತ್ತರಾಯಣವನ್ನು ದೇವತೆಗಳಿಗೆ ಹಗಲು ದಕ್ಷಿಣಾಯಣವನ್ನು ದೇವತೆಗಳಿಗೆ ರಾತ್ರಿ ಎಂಬುದನ್ನು ಶಾಸ್ತ್ರಗಳು ತಿಳಿಸುತ್ತದೆ.


ಆದ್ದರಿಂದ ಸೂರ್ಯ ಮಕರ ರಾಶಿ ಪ್ರವೇಶ ಕಾಲವನ್ನು ಬಹಳ ವಿಶೇಷ ಪೂರ್ವ ಪುಣ್ಯ ಕಾಲ ಎಂದು ಹೇಳುತ್ತಾರೆ. ಅದೇ ರೀತಿಯಾಗಿ 14ನೇ ತಾರೀಖು ಸೂರ್ಯ ಮಕರ ರಾಶಿಯನ್ನು ಪ್ರವೇಶ ಮಾಡುತ್ತಾನೆ ಆದರೆ ಸಮಯ ರಾತ್ರಿ 8 ಗಂಟೆ 40 ನಿಮಿಷಕ್ಕೆ ಇದು ನಮ್ಮ ದೇವತೆಗಳಿಗೆ ನಾವು ಪೂಜೆಯನ್ನು ಮಾಡುವುದಕ್ಕೆ ಪ್ರಶಸ್ತವಾದಂತ ಕಾಲವಲ್ಲ , ನಮಗೆ ಸೂರ್ಯೋದಯ ಕಾಲದಲ್ಲಿ.

ಮಕರ ರಾಶಿಯಲ್ಲಿ ಸೂರ್ಯನಿರುವಾಗ ಪೂಜೆಯನ್ನು ಮಾಡಿದರೆ ಪೂರ್ಣ ಫಲ ಪ್ರಾಪ್ತಿಯಾಗುತ್ತದೆ ಅದಕ್ಕಾಗಿ 15ನೇ ತಾರೀಖು ಮಕರ ಸಂಕ್ರಾಂತಿಯನ್ನು ಆಚರಣೆ ಮಾಡಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಹಾಗಾಗಿ 15ನೇ ತಾರೀಖು ರವಿ ವಾರ ಮಕರ ಸಂಕ್ರಾಂತಿಯನ್ನು ಆಚರಿಸುವುದಕ್ಕೆ ಬಹಳ ಪ್ರಶಸ್ತವಾದಂತಹ ಸಮಯ ಎಂದೇ ಹೇಳಲಾಗುತ್ತದೆ. ಇನ್ನೊಂದು ವಿಶೇಷವಾದ ವಿಷಯ ಏನು ಎಂದರೆ ಹೆಂಗಸರು ಉತ್ತರಾಯಣ ಪರ್ವದ ದಿನದಂದು.

ಅಂದರೆ ಮಕರ ಸಂಕ್ರಾಂತಿಯ ದಿವಸ ತಲೆ ಸ್ನಾನ ಮಾಡಬಾರದು ಬದಲಿಗೆ ಮೈ ಸ್ನಾನವನ್ನು ಮಾತ್ರ ಮಾಡಬೇಕು ಏಕೆಂದರೆ ಹೆಣ್ಣು ಮಕ್ಕಳ ತಲೆ ಸ್ನಾನಕ್ಕೆ ಬಹಳ ವಿಶೇಷವಾದಂತಹ ಸ್ಥಾನ ಇದೆ. ಆದ್ದರಿಂದ ಹೆಣ್ಣು ಮಕ್ಕಳು ಅಭ್ಯಂಗಸ್ನಾನವನ್ನು ಭೋಗಿ ಹಬ್ಬದ ದಿನ ಮಾಡಬೇಕು ಅಂದರೆ ಮಕರ ಸಂಕ್ರಾಂತಿಯ ಹಿಂದಿನ ದಿನ ಧನುರ್ಮಾಸದ ಕೊನೆಯ ದಿನ ಅಭ್ಯಂಗ ಸ್ನಾನ ಅಂದರೆ ತಲೆಗೆ ಎಣ್ಣೆ ಹಾಕಿ ಅರಿಶಿಣವನ್ನು ಹಾಕಿ ಸ್ನಾನ ಮಾಡಬೇಕು.

ಮಕರ ಸಂಕ್ರಾಂತಿಯ ದಿನ ಅಪ್ಪಿ ತಪ್ಪಿಯು ಕೂಡ ಹೆಂಗಸರು ತಲೆ ಸ್ನಾನವನ್ನು ಮಾಡಬಾರದು ಎಂದು ಶಾಸ್ತ್ರಗಳು ಹೇಳುತ್ತದೆ. ಅದರಲ್ಲೂ ಇಲ್ಲಿಯ ತನಕ ಯಾರು ಧನುರ್ಮಾಸ ಮಾಡಿರುವುದಿಲ್ಲ ಅಂತವರು ಕೊನೆಯ ದಿನ ಹುಗ್ಗಿ ಅನ್ನ ಮಾಡಿ ದೇವರಿಗೆ ನೈವೇದ್ಯ ವನ್ನು ಮಾಡುವುದರಿಂದ ನಿಮ್ಮ ಎಲ್ಲ ಪಾಪ ಕರ್ಮ ಗಳನ್ನು ಕಳೆದುಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *