ಧನು ರಾಶಿ ಫೆಬ್ರವರಿ 2023 ನಿಮಗೆ ಬರ್ತಾಯಿದೆ ಶುಕ್ರಬಲ ಈ 5 ಕೆಲಸಗಳಿಗೆ ಬಾರಿ ಶುಭಯೋಗ.. - Karnataka's Best News Portal

ಧನಸ್ಸು ರಾಶಿ ಫೆಬ್ರುವರಿ 2023 ಮಾಸ ಭವಿಷ್ಯ||ಶುಭ ವಿಚಾರಗಳು||ಧನಸ್ಸು ರಾಶಿಯವರ ಮಾಸ ಭವಿಷ್ಯವನ್ನು ನೋಡುವುದಕ್ಕೂ ಮೊದಲು ಫೆಬ್ರವರಿ ತಿಂಗಳ ಗ್ರಹ ಸ್ಥಿತಿಯನ್ನು ನೋಡುವುದಾದರೆ,ಫೆಬ್ರವರಿ 7ನೇ ತಾರೀಖು ಮಕರ ರಾಶಿಗೆ ಬುಧ ಗ್ರಹನ ಸಂಚಾರವಾಗ ಲಿದೆ ನಿಮ್ಮ ಕರ್ಮಾಧಿಪತಿ ಸಪ್ತಮಾಧಿಪತಿ ಯಾದ ಬುಧ ಗ್ರಹ ನಿಮ್ಮ ರಾಶಿಯನ್ನು ಬಿಟ್ಟು ಬೇರೆ ರಾಶಿಗೆ ಏಳನೇ ತಾರೀಖು ಹೋಗಲಿದ್ದಾನೆ.

ಇನ್ನು ಫೆಬ್ರವರಿ 13ನೇ ತಾರೀಖು ಕುಂಭ ರಾಶಿಗೆ ರವಿ ಸಂಚಾರ ಅಂದರೆ ನಿಮ್ಮ ಭಾಗ್ಯಾಧಿಪತಿ ತೃತೀಯಕ್ಕೆ ಹೋಗಲಿದ್ದಾನೆ ಇನ್ನು ಫೆಬ್ರವರಿ 15ನೇ ತಾರೀಖು ಮೀನ ರಾಶಿಗೆ ಶುಕ್ರ ಗ್ರಹ ಇಲ್ಲಿ ನಿಮಗೆ ಶುಕ್ರ ಒಂದು ರೀತಿಯ ಬಲ ಎಂದು ಹೇಳಬಹುದು ಯಾಕೆ ಎಂದರೆ ಲಾಭಾಧಿಪತಿ ಚತುರ್ಥದಲ್ಲಿ ಪರಮೋಚ್ಚ ಸ್ಥಿತಿಯಲ್ಲಿ ಇದ್ದು ಕರ್ಮಸ್ಥಾನವನ್ನು ವೀಕ್ಷಣೆ ಮಾಡುತ್ತಾನೆ.

ಆದ್ದರಿಂದಾಗಿ ಧನಸ್ಸು ರಾಶಿಯವರಿಗೆ ಅದ್ಭುತವಾಗಿರು ತ್ತದೆ ಶುಕ್ರ ಬಲ. ಅದರಲ್ಲೂ ವಿಶೇಷವಾಗಿ ಧನಸ್ಸು ರಾಶಿಯವರಿಗೆ ಈ ಒಂದು ತಿಂಗಳಲ್ಲಿ ಸ್ವಲ್ಪ ನಿಧಾನ ಗತಿಯಲ್ಲಿ ಕಾದು ನೋಡಿದಾಗ ರವಿ ಸಂಚಾರದಿಂದ ರವಿ ಬಲ ಸಿಗಲಿದೆ ಹಾಗೂ ಶುಕ್ರ ಸಂಚಾರದಿಂದ ಶುಕ್ರ ಬಲ ಸಿಗಲಿದೆ ಬುಧನ ಸಂಚಾರದಿಂದ ಬುಧ ಬಲವು ಕೂಡ ಸಿಗಲಿದೆ ಇದೆಲ್ಲವನ್ನು ನೋಡುವುದಕ್ಕೂ ಮುನ್ನ ಒಂದು ಶುಭ ವಿಚಾರ ಏನು ಎಂದು ನೋಡುವುದಾದರೆ

ಧನಸ್ಸು ರಾಶಿಯವರಿಗೆ ಏಳುವರೆ ವರ್ಷದ ದೀರ್ಘ ಕಾಲಾವಧಿಯ ಸಾಡೆ ಸಾತಿಯನ್ನು ನೀವು ಕಳೆದು ಕೊಂಡಿದ್ದೀರಿ ಅದರಿಂದ ಒಂದೊಂದೇ ಹೆಜ್ಜೆಯಂತೆ ಅಭಿವೃದ್ಧಿಯನ್ನು ಹೊಂದುತ್ತೀರಿ, ಅದರಲ್ಲೂ ಮೊದಲನೆಯದಾಗಿ ಉದ್ಯೋಗ ಪ್ರಾಪ್ತಿಗಾಗಿ ಹೆಚ್ಚಿನ ಶ್ರಮ ವಹಿಸುವುದು ಉತ್ತಮವಾಗಿರುತ್ತದೆ ಜೊತೆಗೆ ಈಗಾಗಲೇ ಕೆಲಸದಲ್ಲಿ ಇರುವವರಿಗೆ ಒಳ್ಳೆಯ ಸಂಬಳ ಬರುವಂತಹ ಅವಕಾಶವು ಕೂಡ ಸಿಗುತ್ತದೆ.

ಧನಸ್ಸು ರಾಶಿಯವರಿಗೆ ಈ ಒಂದು ತಿಂಗಳಲ್ಲಿ ಶತ್ರುಗಳು ಅಡ್ಡ ಬರಬಹುದು ಆದ್ದರಿಂದ ಅದರ ಬಗ್ಗೆ ಹೆಚ್ಚು ಗಮನವನ್ನು ವಹಿಸುವುದು ಉತ್ತಮ ಅದರಲ್ಲೂ ನಿಮಗೆ ಸಂಬಂಧಿಸಿ ದಂತಹ ಯಾವುದೇ ವಿಷಯದ ಬಗ್ಗೆ ನಿಮ್ಮ ಸುತ್ತಮುತ್ತ ಇರುವಂತಹ ಜನಗಳಲ್ಲಿ ಹೇಳಿಕೊಳ್ಳಬೇಡಿ ಇದರಿಂದ ಅವರು ಹೊಟ್ಟೆಕಿಚ್ಚು ಪಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸದ್ದಿಲ್ಲದೇ ನಿಮ್ಮ ಕೆಲಸವನ್ನು ನೀವು ಮಾಡಿಕೊಳ್ಳುವುದು ಉತ್ತಮ.

ಈ ತಿಂಗಳು ಧನಸ್ಸು ರಾಶಿಯವರು ಯಾರೆಲ್ಲ ವ್ಯಾಪಾರ ವ್ಯವಹಾರವನ್ನು ಮಾಡುತ್ತಿರುತ್ತಾರೋ ಅವರೆಲ್ಲರಿಗೂ ಕೂಡ ಉತ್ತಮವಾದಂತಹ ಲಾಭ ಸಿಗಲಿದೆ. ಜೊತೆಗೆ ಭೂಮಿಗೆ ಸಂಬಂಧಿಸಿದಂತಹ ಎಲ್ಲಾ ಕೆಲಸಗಳು ಕೂಡ ಉತ್ತಮವಾಗಿ ನೆರವೇರುತ್ತದೆ ನೀವು ಅಂದುಕೊಂಡಂತೆ ಹೊಸ ಭೂಮಿಯನ್ನು ಖರೀದಿಸಬಹುದು ಅಥವಾ ರೈತರಿಗೆ ಭೂಮಿಯಿಂದ ಹೆಚ್ಚು ಇಳುವರಿ ಕೂಡ ಬರಬಹುದು ಈ ರೀತಿಯಾಗಿ ಭೂಮಿಗೆ ಸಂಬಂಧಿಸಿದಂತೆ ಹೆಚ್ಚು ಲಾಭವನ್ನು ಪಡೆಯುತ್ತೀರಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *