ಹಣವಿಲ್ಲ ಎನ್ನುವುದು ನಿಮಗೆ ಟೆನ್ಷನ್ ತರಿಸುತ್ತಿದೆಯಾ ಪ್ರತಿದಿನ ಬುದ್ದರು ಹೇಳಿರುವ ಈ ಮಾತನ್ನು ಒಮ್ಮೆ ಕೇಳಿ ಸಾಕು. - Karnataka's Best News Portal

ಇದನ್ನು ನೋಡಿದ ನಂತರ ನೀವು ಜೀವನದಲ್ಲಿ ಬಡವರಾಗಿ ಇರಲು ಸಾಧ್ಯವಿಲ್ಲ!!ಒಂದು ಸಾರಿ ಗೌತಮ ಬುದ್ಧರು ತಮ್ಮ ಶಿಷ್ಯರ ಜೊತೆ ಸಂಚಾರ ಮಾಡುವಾಗ ಒಂದು ಹಳ್ಳಿಯನ್ನು ಹಾದು ಹೋಗುವಾಗ ತಮ್ಮ ಶಿಷ್ಯರ ಜೊತೆಗೆ ಆ ಹಳ್ಳಿಯಲ್ಲಿ ಕೆಲಸಮಯ ನೆಲೆಸಲು ನಿರ್ಧಾರ ಮಾಡಿದರು ಬುದ್ಧರು ಹಳ್ಳಿಯಲ್ಲಿ ಇರುತ್ತಾರೆ ಎನ್ನುವ ವಿಷಯ ಕಾಡ್ಗಿಚ್ಚಿನ ಹಾಗೆ ಇಡೀ ಹಳ್ಳಿಯಲ್ಲಿ ಹಬ್ಬಿತು.

ಹಳ್ಳಿಯ ಜನರು ಬುದ್ಧನ ದರ್ಶನ ಪಡೆಯಲು ಬರಲು ಶುರು ಮಾಡಿದರು ತಮ್ಮ ಸಮಸ್ಯೆಗಳನ್ನು ಬುದ್ಧರ ಬಳಿ ಹೇಳಿ ಅದಕ್ಕೆ ಪರಿಹಾರ ಪಡೆಯಲು ಬರುತ್ತಿದ್ದರು, ಬುದ್ಧರು ಸಹ, ಹಳ್ಳಿಯ ಜನರ ಸಮಸ್ಯೆಗಳನ್ನು ಕೇಳಿ ಅದಕ್ಕೆ ಪರಿಹಾರ ನೀಡುತ್ತಿದ್ದರು ಹಳ್ಳಿಯಲ್ಲಿದ್ದ ಒಬ್ಬ ವ್ಯಕ್ತಿ ಬುದ್ಧರ ಬಳಿ ಬಂದು, ಪೂಜ್ಯರೆ ನಮ್ಮ ಹಳ್ಳಿಯಲ್ಲಿ ಎಲ್ಲರೂ ಕೂಡ ಕಷ್ಟಪಟ್ಟು ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ.


ದೇವರು ನಮಗೆ ಕೊಟ್ಟಿರುವ ಎಲ್ಲದಕ್ಕೂ ದೇವರಿಗೆ ಧನ್ಯವಾದ ಹೇಳುತ್ತೇವೆ. ಆದರೆ ಒಬ್ಬ ವ್ಯಕ್ತಿ ಮಾತ್ರ ಯಾವುದೇ ಕೆಲಸ ಮಾಡದೆ, ತನ್ನ ಕಷ್ಟ ಮತ್ತು ಬಡತನಕ್ಕೆ ದೇವರೇ ಕಾರಣ ಎಂದು ದೇವರನ್ನು ಶಪಿಸುತ್ತಾನೆ. ಸದಾ ದೇವರಿಗೆ ಶಾಪ ಹಾಕುತ್ತಾ ನಿಂದನೆ ಮಾಡುತ್ತಾ ಇರುತ್ತಾನೆ ನಾವು ಅವನನ್ನು ತಡೆಯಲು ಹೋದರೆ, ನಮ್ಮನ್ನು ಕೂಡ ಬಯ್ಯುತ್ತಾನೆ.

ಏನು ಮಾಡಬೇಕೆಂದು ನಮಗೆ ತಿಳಿಯುತ್ತಿಲ್ಲ…” ಎನ್ನುತ್ತಾನೆ. ಆಗ ಬುದ್ಧರು ನಗುತ್ತಾ”ಅವನನ್ನು ನನ್ನ ಬಳಿಗೆ ಕರೆದು ತನ್ನಿ”ಎಂದು ಹೇಳುತ್ತಾರೆ ಆಗ ಮತ್ತೊಬ್ಬರು ” ಓ ಬುದ್ಧಿವಂತರೆ, ಆತ ಒರಟು ಸ್ವಭಾವದ ವ್ಯಕ್ತಿ ನಿಮ್ಮನ್ನು ನಿಂದಿಸಬಹುದು ನಿಮ್ಮನ್ನು ಅವಮಾನ ಮಾಡುವುದನ್ನು ನೋಡಲು ಆಗುವುದಿಲ್ಲ ಹಾಗಾಗಿ ಅವನನ್ನು ಇಲ್ಲಿಗೆ ಕರೆ ತರದೆ ಇರುವುದು ಒಳ್ಳೆಯದು ಎನ್ನುತ್ತಾರೆ. ಆಗ ಬುದ್ಧರು ನಗುತ್ತಾ.

“ನೀವು ಚಿಂತೆ ಮಾಡಬೇಡಿ ಅವನನ್ನು ನನ್ನ ಬಳಿಗೆ ಕರೆತನ್ನಿ ನಾನು ಅವನ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಹೇಳಿ…”ಎನ್ನುತ್ತಾರೆ ಬುದ್ಧನ ಮಾತುಗಳನ್ನು ಕೇಳಿದ ಕೆಲವು ಹಳ್ಳಿಯವರು, ಅವನನ್ನು ಕರೆ ತರಲು ಹೋಗುತ್ತಾರೆ ಆ ವ್ಯಕ್ತಿ ಮೊದಲು ಬುದ್ಧರ ಬಳಿ ಬರುವುದಕ್ಕೆ ಒಪ್ಪಿಕೊಳ್ಳುವುದಿಲ್ಲ ಎಲ್ಲಾ ಸನ್ಯಾಸಿಗಳು ಹೇಡಿಗಳು ಮತ್ತು ನಕಲಿ ಮನುಷ್ಯರಾಗಿರುತ್ತಾರೆ ನಾನು ಅವರ ಬಳಿಗೆ ಹೋಗುವುದಿಲ್ಲ..”ಎಂದು ಹೇಳುತ್ತಾನೆ.

ಆಗ ಹಳ್ಳಿಯ ಜನರು ಬುದ್ಧ ಆತನ ತೊಂದರೆಗಳನ್ನು ಪರಿಹಾರ ಮಾಡುತ್ತಾರೆ ಎಂದು ಹೇಳಿದಾಗ, ಆತ ಬರಲು ಒಪ್ಪಿಕೊಳ್ಳುತ್ತಾನೆ ಬುದ್ಧರ ಬಳಿಗೆ ಹೋದ ನಂತರ ಹೇಳಿ ಏನು ವಿಚಾರ ?ನನ್ನನ್ನು ಯಾಕೆ ಇಲ್ಲಿಗೆ ಕರೆದಿದ್ದೀರ? ನೀವು ನನಗೆ ಏನನ್ನು ಹೇಳಬೇಕು? ನಿಮಗೂ ನಾನು ದೇವರನ್ನು ನಿಂದಿಸಬಾರದೆ? ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *