ಸಾಡೇಸಾತಿ ಕೊನೆಯ ಭಾಗ ಆರಂಭ ಮಕರ ಶನೈಶ್ವರ ಸ್ವಾಮಿ ನಿಮ್ಮ ಜೀವನವನ್ನು ಹೇಗೆಲ್ಲಾ ಬದಲಾವಣೆ ಮಾಡಲಿದ್ದಾನೆ ಗೊತ್ತಾ? - Karnataka's Best News Portal

ಸಾಡೇಸಾತಿ ಕೊನೆಯ ಭಾಗ ಆರಂಭ ಮಕರ ಶನೈಶ್ವರ ಸ್ವಾಮಿ ನಿಮ್ಮ ಜೀವನವನ್ನು ಹೇಗೆಲ್ಲಾ ಬದಲಾವಣೆ ಮಾಡಲಿದ್ದಾನೆ ಗೊತ್ತಾ?

ಮಕರ ರಾಶಿ ಸಾಡೇ ಸಾತ್ ಕೊನೆಯ ಭಾಗ.
2023 ಜನವರಿ 17 ಮಕರ ರಾಶಿಯಿಂದ ಕುಂಭ ರಾಶಿಗೆ ಶನಿ ಸಂಚಾರ ಆಗುತ್ತದೆ. 2025 ನೇ ಇಸವಿ ಏಪ್ರಿಲ್ 30 ನೇ ತಾರೀಖಿನ ತನಕ ಶನೇಶ್ವರ ಅಲ್ಲೇ ಇರುತ್ತಾನೆ. ಶನೇಶ್ವರ ಸ್ವಾಮಿ ಸಂಪೂರ್ಣ ಏಳು ವರ್ಷಗಳ ಕಾಲ ಕೆಡುಕು ಉಂಟು ಮಾಡುವುದಿಲ್ಲ. ಎರಡುವರೆ ವರ್ಷದ ಸಾಡೇಸಾತಿಯಲ್ಲಿ ಕೊನೆಯ ಭಾಗವಾದ ಎರಡುವರೆ ವರ್ಷದಲ್ಲಿ ನೀವು ಮಕರ ರಾಶಿಯವರು ಇದ್ದೀರಿ.

ಮಕರ ರಾಶಿಯವರ ಲಾಭ ಸ್ಥಾನದ ಮೇಲೆ ಶನೇಶ್ವರನ ಪೂರ್ಣ ಅನುಗ್ರಹ ಇರುತ್ತದೆ ಸಹಜ ಸ್ವಾಭಾವಿಕವಾಗಿ ಲಾಭ ಉಂಟಾಗುವುದಿಲ್ಲ ಇದರಲ್ಲಿ ನಿಮ್ಮ ಪ್ರಯತ್ನವೂ ಸಹ ಇರಬೇಕಾಗುತ್ತದೆ. ಶನೇಶ್ವರ ಸ್ವಾಮಿ ಬಹಳ ನಿಧಾನವಾಗಿ ಆದಾಯವನ್ನು ಕೊಡುವುದರಿಂದ ಕಳೆದ ಐದು ವರ್ಷಗಳಲ್ಲಿ ನೀವು ಹೂಡಿಕೆ ಮಾಡಿದಂತಹ ಆದಾಯದಲ್ಲಿ ಲಾಭ ದೊರೆಯುತ್ತದೆ.


ಮನೆ, ತೋಟ, ಜಮೀನು ಇತ್ಯಾದಿಗಳ ಮೇಲೆ ಇನ್ವೆಸ್ಟ್ ಮಾಡಿ ಬಿಟ್ಟಿದ್ದರೆ ಈ ಎರಡುವರೆ ವರ್ಷದಲ್ಲಿ ನಿಮಗೆ ಹೆಚ್ಚಿನ ಆದಾಯ ಉಂಟಾಗುತ್ತದೆ. ಮಕರ ರಾಶಿಯವರು ಮಾತನಾಡುವ ಮಾತಿನಲ್ಲಿ ತುಂಬಾ ಪ್ರಶಂಸೆ ಬರಲಿದೆ ನಿಮ್ಮ ಮಾತಿನ ಮೇಲೆ ಹೆಚ್ಚಿನ ಪ್ರಾಧ್ಯಾನತೆ ಸಿಗುವುದರಿಂದ ನಿಮ್ಮ ಮಾತಿನ ಮೇಲೆ ಸ್ವಲ್ಪ ಗಮನ ಇಟ್ಟು ಮಾತನಾಡಬೇಕಾಗುತ್ತದೆ. ನಿಮ್ಮ ಮಾತುಗಳನ್ನು ಕೆಲವೊಬ್ಬರು ನೆಗೆಟಿವ್ ಆಗಿ ಸಹ ತೆಗೆದುಕೊಳ್ಳಬಹುದು.

ನೀವು ಆಡುವಂತಹ ಕೆಲವೊಂದು ಮಾತುಗಳು ನಿಮ್ಮ ಜೀವನದ ಮೇಲೆ ಪ್ರಭಾವವನ್ನು ಬೀರಿ ಬಿಡುತ್ತದೆ ಆದ್ದರಿಂದ ನಿಮ್ಮ ಮಾತುಗಳ ಮೇಲೆ ನಿಗಾ ವಹಿಸಿ ಮಾತನಾಡಬೇಕು. ನಿಮಗೆ ಲಾಭದಾಯಕವಾಗಬೇಕು ಎಂದರೆ ಏನು ಮಾಡಬೇಕು ಎಂದು ತಿಳಿಯುವುದಾದರೆ. ಪ್ರತಿದಿನ ಸನೇಶ್ವರನ ಅಷ್ಟೋತ್ತರವನ್ನು ಪಠಿಸುವಂತಹದ್ದು, ಪ್ರತಿ ಶನಿವಾರ ಶನೇಶ್ವರನ ದೇವಸ್ಥಾನಕ್ಕೆ ಹೋಗಿ ನಮಸ್ಕರಿಸಿ ಬರುವಂತಹ ತಿಂಗಳಿಗೆ ಒಮ್ಮೆಯಾದರೂ ಗಾಣದ ಎಳ್ಳೆಣ್ಣೆಯನ್ನು ದಾನ ಮಾಡುವುದು ಅಥವಾ ಗಾಣದ ಎಳ್ಳೆಣ್ಣೆಯಲ್ಲಿ ಶನೇಶ್ವರನಿಗೆ ಅಭಿಷೇಕ ಮಾಡಿಸುವುದು.

See also  ನಿಮ್ಮ ಮನೆಯ ವಾಸ್ತು ದೋಷದಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ..ಪರಿಹಾರಕ್ಕೆ ತಪ್ಪದೆ ಈ ಸಂಚಿಕೆ ನೋಡಿ

ಗಾಣದ ಎಣ್ಣೆಯಲ್ಲಿ ದೀಪ ಹಚ್ಚುವುದು ಈ ರೀತಿಯ ಯಾವುದೇ ಪರಿಹಾರವನ್ನು ನೀನು ಮಾಡಬಹುದು. ದಶರಥ ಕೃತ ಶನಿ ಸ್ತೋತ್ರವನ್ನು ಪಠಿಸುವಂತಹದ್ದು ಮಾಡುವುದರಿಂದ ಅತ್ಯುತ್ತಮ ಫಲವನ್ನು ನಿಮಗೆ ಕೊಡುತ್ತದೆ. ಮಕರ ರಾಶಿಯ ವಿದ್ಯಾರ್ಥಿಗಳು ಸ್ವಲ್ಪ ಓದಿನ ಕಡೆ ಆಲಸ್ಯವನ್ನು ವಹಿಸಬಹುದು ನಾಳೆ ಮಾಡಬೇಕು ಎನ್ನುವಂತಹ ಕೆಲಸಗಳನ್ನು ಆದಷ್ಟು ವಿದ್ಯಾರ್ಥಿಗಳು ಇಂದೇ ಮಾಡಿ ಮುಗಿಸಿದರೆ ತುಂಬಾ ಒಳ್ಳೆಯದು.

ಆಲಸ್ಯತನ ನಿಮ್ಮನ್ನು ಬಿಟ್ಟುಬಿಡದೆ ಕಾಡುತ್ತಾ ಇರುತ್ತದೆ. ವಿವಾಹಿತ ಮಕರ ರಾಶಿಯ ಸ್ತ್ರೀಯರು ನೋಡುವುದಾದರೆ ತವರು ಮನೆಯ ಆಸ್ತಿಯ ಬಗ್ಗೆ ನಿಮಗೆ ಆಸೆ ಹುಟ್ಟಿಕೊಳ್ಳುತ್ತದೆ. ವಿಶೇಷವಾಗಿ ತವರು ಮನೆಯ ಭೂಮಿಯ ಮೇಲೆ ಮಕರ ರಾಶಿಯ ವಿವಾಹಿತ ಸ್ತ್ರೀಯರಿಗೆ ಆಸೆ ಉಂಟಾಗುತ್ತದೆ. ಆಸ್ತಿಯ ವಿಚಾರಕ್ಕೆ ತವರು ಮನೆಯವರೊಂದಿಗೆ ಕೆಲವೊಂದಷ್ಟು ಮನಸ್ತಾಪಗಳು ಉಂಟಾಗುತ್ತದೆ.

[irp]


crossorigin="anonymous">