21 ದಿನದ ಚಾಲೆಂಜ್ ಈ ಮಾತ್ರೆ ತಿಂದರೆ 36 ಸೊಂಟ 28 ಆಗೋದು ಗ್ಯಾರೆಂಟಿ..ಈ ಮಾತ್ರೆ ಬೇಗ ತೂಕ ಕಡಿಮೆ ಮಾಡುತ್ತೆ - Karnataka's Best News Portal

21 ದಿನದ ಚಾಲೆಂಜ್ ಈ ಟ್ಯಾಬ್ಲೆಟ್ ತಿಂದರೆ ತುಂಬಾ ಸ್ಲಿಮ್ ಆಗಿ ನಿಮ್ಮ ಹೊಟ್ಟೆಯ ಭಾಗ ಕರಗುತ್ತದೆ.ಯಾರಿಗೆಲ್ಲ ಸಣ್ಣಗಾಗಬೇಕು ಎನ್ನುವಂತಹ ಆಸೆ ಇರುತ್ತದೆಯೋ ಅಂತಹವರು ಈ ಒಂದು ಮನೆಮದ್ದನ್ನು ಬಳಸಿದರೆ ಖಂಡಿತವಾಗಿಯೂ ಸಣ್ಣಗಾಗುತ್ತೀರಾ. ಈ ಒಂದು ಮನೆ ಮದ್ದನ್ನು ಮಾಡಲು ಬೇಕಾಗಿರುವಂತಹ ಮುಖ್ಯ ಪದಾರ್ಥ ಎಂದರೆ ಅಗಸೆ ಬೀಜ ಒಂದು ಬಾಣಲೆಗೆ ಮೂರು ಟೇಬಲ್ ಸ್ಪೂನ್ ನಷ್ಟು ಅಗಸೆ ಬೀಜ ಹಾಕಿ ಇದನ್ನು ಬಾಣಲೆಯಲ್ಲಿ ಎರಡರಿಂದ ಮೂರು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಇಟ್ಟು ಫ್ರೈ ಮಾಡಿಕೊಳ್ಳಬೇಕು.

ನಂತರ ಅದೇ ಬಾಣಲೆಗೆ ಅರ್ಧ ಟೇಬಲ್ ಸ್ಪೂನ್ ನಷ್ಟು ಜೀರಿಗೆ ಅರ್ಧ ಟೇಬಲ್ ಸ್ಪೂನ್ ನಷ್ಟು ಓಂ ಕಾಳನ್ನು ಸೇರಿಸಿ ಅದಕ್ಕೆ ಒಂದು ಇಂಚಿನಷ್ಟು ಚಕ್ಕೆಯನ್ನು ಹಾಕಿ ಕಡಿಮೆ ಉರಿಯಲ್ಲಿ ಚಿಟಪಟ ಸೌಂಡ್ ಬರುವ ತನಕ ಫ್ರೈ ಮಾಡಿಕೊಳ್ಳಿ. ನಂತರ ಈ ಎಲ್ಲಾ ಸಾಮಗ್ರಿಗಳನ್ನು ಒಂದು ಮಿಕ್ಸಿ ಜಾರಿನಲ್ಲಿ ಹಾಕಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಿ.

ಈ ಒಂದು ಮನೆಮದ್ದನ್ನು ಮಾಡಲು ಬೇಕಾಗಿರುವಂತಹ ಇನ್ನೊಂದು ಮುಖ್ಯ ಪದ್ದಾರ್ಥ ಎಂದರೆ ಶುಂಠಿ ಹೌದು ಹಸಿ ಶುಂಠಿಯನ್ನು 2 ಇಂಚಿನಷ್ಟು ತೆಗೆದುಕೊಂಡು ಅದನ್ನು ಸಣ್ಣದಾಗಿ ತುರಿಕೊಳ್ಳಬೇಕು. ಶುಂಠಿಯನ್ನು ತುರಿದ ನಂತರ ಅದರಿಂದ ರಸವನ್ನು ಚೆನ್ನಾಗಿ ಹಿಂಡಿ ತೆಗೆದುಕೊಳ್ಳಬೇಕು ಅಥವಾ ನೀವು ಒಂದು ಜಾಲರಿಯ ಸಹಾಯದಿಂದ ತೆಗೆದುಕೊಳ್ಳಬಹುದು.

ಟೀ ಶೋಧಿಸುವಂತಹ ಜಾಲರಿಯನ್ನು ತೆಗೆದುಕೊಂಡು ಒಂದು ಸ್ಪೂನಿಂದ ಚೆನ್ನಾಗಿ ಹಿಂಡಿ ತೆಗೆದರೆ ನಿಮಗೆ ಶುಂಠಿ ರಸ ದೊರೆಯುತ್ತದೆ. ಈ ಒಂದು ಶುಂಠಿಯ ರಸಕ್ಕೆ ಒಂದು ದೊಡ್ಡ ಗಾತ್ರದ ನಿಂಬೆಹಣ್ಣಿನ ರಸವನ್ನು ಸೇರಿಸಿ, ತಯಾರಿಸಿ ಕೊಂಡಿರುವಂತಹ ಪೌಡರ್ ಗೆ ಇದನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಒಂದು ಪೇಸ್ಟ್ ಅನ್ನು ನೀವು ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು.

ಇದನ್ನು ಎರಡರಿಂದ ಮೂರು ದಿನಗಳ ಕಾಲ ಇಟ್ಟುಕೊಳ್ಳಬಹುದು ಏಕೆಂದರೆ ಇದರಲ್ಲಿ ನಿಂಬೆಹಣ್ಣಿನ ರಸ ಶುಂಠಿ ರಸವನ್ನು ಸೇರಿಸುವುದರಿಂದ ಹೆಚ್ಚು ದಿನ ಇಟ್ಟುಕೊಳ್ಳಲು ಆಗುವುದಿಲ್ಲ. ಈ ಒಂದು ಉಂಡೆಗಳನ್ನು ನೀವು ಬೆಳಗ್ಗೆ ತಿಂಡಿ ಆದ ನಂತರ ಹಾಗೆ ರಾತ್ರಿ ಊಟ ಆದ ನಂತರ ಈ ಒಂದು ಉಂಡೆಗಳನ್ನು ತೆಗೆದುಕೊಳ್ಳುತ್ತಾ ಬರಬೇಕು.

ಇದನ್ನು ನೀವು 21 ದಿನಗಳ ಕಾಲ ಸತತವಾಗಿ ತೆಗೆದುಕೊಳ್ಳುವುದರಿಂದ ನಿಮಗೆ ಇರುವಂತಹ ಗೊಜ್ಜನ ಸಮಸ್ಯೆ ಕಡಿಮೆಯಾಗುತ್ತದೆ ಹಾಗೆಯೇ ನಿಮ್ಮ ಹೊಟ್ಟೆಯ ಭಾಗವನ್ನು ಸಹ ಕರಗಿಸಲು ಇದು ಸಹಾಯ ಮಾಡುತ್ತದೆ. ಯಾರಿಗೆಲ್ಲ ಸಣ್ಣ ಆಗಬೇಕು ಎನ್ನುವಂತಹ ಆಸೆ ಇರುತ್ತದೆ ಅಂತಹವರು ಈ ಒಂದು ಮನೆ ಮದ್ದನ್ನು ಇಂದಿನಿಂದಲೇ ಉಪಯೋಗಿಸಿ ನೋಡಿ ಒಳ್ಳೆಯ ರಿಸಲ್ಟ್ ದೊರೆಯುತ್ತದೆ.

Leave a Reply

Your email address will not be published. Required fields are marked *