ಹೊಸ ವರ್ಷಕ್ಕೆ ಒಂದು ಪೋನ್ ಕಾಲ್ ರವಿಚಂದ್ರನ್ ಕಷ್ಟಗಳೆಲ್ಲ ದೂರ ಸ್ವಾಭಿಮಾನಿ ಕ್ರೆಜಿಸ್ಟಾರ್ ಭಾವುಕ ಚಿರಂಜೀವಿ ಬಿಗ್ ಗಿಪ್ಟ್.. - Karnataka's Best News Portal

ಏಕಾಂಗಿ ಬದುಕಲ್ಲಿ ಹೊಸ ವರ್ಷಕ್ಕೆ ಬಿಗ್ ಗಿಫ್ಟ್, ಕೊನೆಗೂ ಕೈ ಹಿಡಿದ ಮೆಗಾಸ್ಟಾರ್.ನಟ ರವಿಚಂದ್ರನ್ ಅವರ ಕುರಿತಾಗಿ ನಾವು ಸಾಕಷ್ಟು ಸುದ್ದಿಗಳನ್ನು ಕೇಳೇ ಇರುತ್ತೇವೆ. ನಟ ರವಿಚಂದ್ರನ್ ಅವರ ಜೊತೆಗೆ ದೇಶದ ಎಲ್ಲಾ ಸಿನಿರಂಗದ ಚಿತ್ರನಟರು ದೊಡ್ಡ ದೊಡ್ಡ ಕಲಾವಿದರು ಅತ್ಯಂತ ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ ಅದರಲ್ಲೂ ಟಾಲಿವುಡ್ ನ ಸ್ಟಾರ್ ಆಗಿರುವಂತಹ ಚಿರಂಜೀವಿಯವರು ರವಿಚಂದ್ರನ್ ಅವರ ಜೊತೆಗೆ ಅತ್ಯಂತ ಆಪ್ತ ಸಂಬಂಧವನ್ನು ಹೊಂದಿದ್ದಾರೆ.

ನಟ ರವಿಚಂದ್ರನ್ ಅವರು ಅತ್ಯಂತ ಸ್ವಾಭಿಮಾನಿ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಸ್ಟಾರ್ ನಟರಿಗೆ ಅದೆಷ್ಟೋ ಕಲಾವಿದರಿಗೆ ಅದರಲ್ಲಿಯೂ ಪರ ಭಾಷೆಯ ದೊಡ್ಡ ದೊಡ್ಡ ಕಲಾವಿದರಿಗೂ ಕೂಡ ಅವಕಾಶಗಳನ್ನು ಕೊಟ್ಟು ಅವರಿಗೆ ಸ್ಟಾರ್ ನಟರಾಗಿ ಬೆಳೆಯಲು ಅತಿ ದೊಡ್ಡ ಪಾತ್ರವಿದೆ. ರವಿಚಂದ್ರನ್ ಅವರ ಕೈ ಸದಾ ಕಾಲ ಕೊಡುವಂತಹ ಕೈ ಎನ್ನುವಂತಹ ಮಾತು ಚಿತ್ರರಂಗದಲ್ಲಿದೆ, ಈಗ ಸದ್ಯಕ್ಕೆ ರವಿಚಂದ್ರನ್ ಅವರ ಆರ್ಥಿಕ ಪರಿಸ್ಥಿತಿ ಒಂದಿಷ್ಟು ಬಿಗಡಾಯಿಸಿದೆ.


ರವಿಚಂದ್ರನ್ ಅವರು ಪಡುತ್ತಿರುವಂತಹ ಕಷ್ಟದ ದಿನಗಳು, ಚಿರಂಜೀವಿ ಅವರಿಗೆ ತಿಳಿದ ನಂತರ ಹೊಸ ವರ್ಷದ ದಿನವೇ ರವಿಚಂದ್ರನ್ ಅವರಿಗೆ ಸರ್ಪ್ರೈಸ್ ಕೊಡುವುದರ ಜೊತೆಗೆ ಶುಭಾಶಯಗಳು ಹಂಚಿಕೊಳ್ಳುವುದಕ್ಕೆ ಫೋನ್ ಕಾಲ್ ಒಂದನ್ನು ಮಾಡಿದ್ದಾರೆ ಆ ಕಾರಣಕ್ಕಾಗಿ ಈ ಫೋನ್ ಕಾಲ್ ಸಂಭಾಷಣೆ ಅತಿ ಪ್ರಮುಖ ಪಾತ್ರವನ್ನು ವಹಿಸಿದೆ.

ಸಿಪಾಯಿ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ರವಿಚಂದ್ರನ್ ಮತ್ತು ಚಿರಂಜೀವಿ ಅವರ ಮಧ್ಯೆ ಬಹಳಷ್ಟು ಆಪ್ತತೆ ಬೆಳೆದಿರುತ್ತದೆ ಆ ಸಮಯದಲ್ಲಿ ರವಿಚಂದ್ರನ್ ಅವರ ಸಿನಿಮಾದಲ್ಲಿ ಚಿರಂಜೀವಿಯವರು ನಟಿಸುವುದಕೋಸ್ಕರ ರವಿಚಂದ್ರನ್ ಅವರು ಒಂದಷ್ಟು ಬಜೆಟ್ ಅನ್ನು ಅವರಿಗಾಗಿಯೇ ಮೀಸಲಿಟ್ಟಿದ್ದರು. ಆದರೆ ಚಿರಂಜೀವಿ ಅವರು ಆ ಒಂದು ಬಜೆಟ್ ಅನ್ನು ತೆಗೆದುಕೊಳ್ಳುವುದಿಲ್ಲ ನಾನು ಈ ಸಿನಿಮಾ ಮಾಡಿದ್ದು ಅವರ ಸ್ನೇಹಕ್ಕೋಸ್ಕರ ಈ ಸಂಭಾವನೆಯನ್ನು ನಾನು ಪಡೆಯುವುದಿಲ್ಲ ಎಂದು ಅದನ್ನು ತಿರಸ್ಕರಿಸಿದರು.

ನಂತರ ರವಿಚಂದ್ರನ್ ಅವರು ಒಂದು ಪೇಪರನ್ನು ರೆಡಿ ಮಾಡಿ ಅದನ್ನು ಚಿರಂಜೀವಿ ಅವರ ಮನೆಗೆ ಕೊಟ್ಟು ಕಳಿಸುತ್ತಾರೆ ಪೇಪರ್ ನಲ್ಲಿ ಬೆಂಗಳೂರಿನ ಅತಿ ದುಬಾರಿ ಭಾಗ ಆಗಿರುವ ದೇವನಹಳ್ಳಿಯ ಇಂಟರ್ನ್ಯಾಷನಲ್ ಏರ್ಪೋರ್ಟ್ ಇರುವಂತಹ 3 ಎಕರೆಯ ಜಾಗವನ್ನು ಚಿರಂಜೀವಿ ಅವರ ಹೆಸರಿನಲ್ಲಿ ಬರೆದು ಕೊಟ್ಟಿರುತ್ತಾರೆ. ಹೊಸ ವರ್ಷದ ದಿನ ಮೆಗಾಸ್ಟಾರ್ ಅವರು ರವಿಚಂದ್ರನ್ ಅವರಿಗೆ ಕರೆ ಮಾಡಿ ಹೊಸ ವರ್ಷದ ಶುಭಾಶಯ ತಿಳಿಸುವುದರ ಜೊತೆಗೆ ನಾನು ನಿಮ್ಮ ಸಹಾಯವನ್ನು ಮರೆತಿಲ್ಲ,

ನಾನು ನಿಮ್ಮ ಅತಿ ಆಪ್ತ ಸ್ನೇಹಿತ ಎಂದು ಅಂದುಕೊಂಡಿದ್ದರೆ ನಾನು ಕೊಡುವಂತಹ ಗಿಫ್ಟನ್ನು ನೀವು ವಾಪಸ್ ಪಡೆಯಬೇಕು ಎನ್ನುವ ಮಾತನ್ನು ಚಿರಂಜೀವಿ ಹೇಳಿದ್ದಾರೆ ಆದರೆ ಇದನ್ನು ನಟ ರವಿಚಂದ್ರನ್ ನಿರಾಕರಿಸಿದ್ದಾರೆ. ಆದ್ದರಿಂದ ಚಿರಂಜೀವಿ ಅವರು ಗಿಫ್ಟ್ ರೂಪದಲ್ಲಿಯೇ ಅದರಷ್ಟೇ ಬೆಲೆ ಬಾಳುವಂತಹ ಜಾಗವನ್ನು ಕೊಡಲು ತೀರ್ಮಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *