ಇಂದು ಷಟ್ತಿಲಾ ಏಕಾದಶಿ ಇದ್ದು ಇಂತಹ ದಿನ ಮತ್ತೆ ಬರೋದಿಲ್ಲ ತಪ್ಪದೇ ಈ ಕೆಲಸ ಮಾಡಿ ನಿಮ್ಮ ಕರ್ಮಗಳು ಕಳೆದು ಅದೃಷ್ಟ ಬರುತ್ತೆ - Karnataka's Best News Portal

ಪೂರ್ವಜನ್ಮದ ಕರ್ಮ ಕಳೆಯುವ ಷಟತಿಲ ಏಕಾದಶಿ ಆಚರಣೆ.

ಒಮ್ಮೆ ನಾರದರು ತ್ರಿಲೋಕ ಸಂಚಾರ ಮುಗಿಸಿಕೊಂಡು ವೈಕುಂಠಕ್ಕೆ ಬರುತ್ತಾರೆ ಶ್ರೀಹರಿ ಮತ್ತು ಮಹಾಲಕ್ಷ್ಮಿ ದೇವಿಗೆ ಅಭಿನಂದನೆಯನ್ನು ಸಲ್ಲಿಸಿ ಕೃಷ್ಣರೊಂದಿಗೆ ಮಾತನಾಡುತ್ತಾ ಕುಳಿತಿರುವ ಸಂದರ್ಭದಲ್ಲಿ ನಾರದರು ಕೇಳುತ್ತಾರೆ ಹೇ ಪ್ರಭು ಷಟತಿಲ ಏಕದಶಿಯ ಪುಣ್ಯಫಲದ ಬಗ್ಗೆ ತಿಳಿಸು ಎಂದು ಪ್ರಾರ್ಥನೆಯನ್ನು ಮಾಡುತ್ತಾರೆ.

ಆಗ ಶ್ರೀಮನ್ನಾರಾಯಣ ದೇವರು ನಾರದರಿಗೆ ಹೇಳುತ್ತಾರೆ ಕೇಳು ನಾರದ, ಹಿಂದೆ ಒಬ್ಬ ಬ್ರಾಹ್ಮಣ ಸ್ತ್ರೀ ಇದ್ದರು ಅವಳು ನಿತ್ಯ ನನ್ನನ್ನು ಅಂದರೆ ಶ್ರೀಹರಿಯನ್ನು ತಪ್ಪದೇ ಪೂಜೆ ಮಾಡುತ್ತಿದ್ದಳು ನಿತ್ಯ ನಾಮಪೂಜೆ, ನಾಮ ವ್ರತಗಳು ಒಮ್ಮೆ ಒಂದು ತಿಂಗಳು ಕಠಿಣ ವ್ರತವನ್ನು ಮಾಡಿದಳು ಪರಿಣಾಮ ಅವಳ ಶರೀರವೇನು ಪರಿಶುದ್ಧವಾಯಿತು ಆದರೆ ಎಂದು ಅನ್ನದಾನವನ್ನು ಮಾಡಿರಲಿಲ್ಲ ಯಾಕೆಂದರೆ ಅನ್ನದಾನಕ್ಕೆ ಮಹತ್ತರವಾದಂತಹ ಪುಣ್ಯ ಸಿಗುತ್ತದೆ ಈಕೆ ನನ್ನನ್ನು ಇಷ್ಟೊಂದು ಭಕ್ತಿಯಿಂದ ಆರಾಧನೆಯನ್ನು ಮಾಡುತ್ತಾಳೆ.

ಮುಂದೆ ಈಕೆ ವೈಕುಂಠಕ್ಕೆ ಬಂದರೆ ಅತೃಪ್ತಳಾಗಿ ಇರಬೇಕಾಗುತ್ತೆ ಆಕೆಯಿಂದ ಒಂದು ಅನ್ನದಾನವನ್ನು ಎಂದು ಮನಸ್ಸಾಗಿ ಶ್ರೀಹರಿ ಸಾಕ್ಷತ್ ಭಿಕ್ಷುಕನ ವೇಷದಲ್ಲಿ ಬಂದು ಆಕೆಯ ಮನೆ ಬಾಗಿಲಿಗೆ ಬಿಕ್ಷಾಂದೇಹಿ ಎಂದು ಭಿಕ್ಷೆಯನ್ನು ಬೇಡುತ್ತಾರೆ. ಬಂದಂತಹ ಭಿಕ್ಷುಕನಿಗೆ ಆಕೆ ಒಂದು ಮಣ್ಣಿನ ಹೆಂಟೆಯನ್ನು ಹಾಕಿ ಬಂದಂತಹ ಭಿಕ್ಷುಕನನ್ನು ಮುಂದೆ ಕಳುಹಿಸುತ್ತಾಳೆ.

ಆಗ ಶ್ರೀಮನ್ ನಾರಾಯಣ ದೇವರು ಅದನ್ನೇ ತೆಗೆದುಕೊಂಡು ವೈಕುಂಠಕ್ಕ ಲೋಕಕ್ಕೆ ಬರುತ್ತಾರೆ. ಸ್ವಲ್ಪ ಕಾಲದ ನಂತರ ಅವಳು ದೇಹವನ್ನು ತ್ಯಜಿಸಿ ವೈಕುಂಠಕ್ಕೆ ಬರುತ್ತಾಳೆ ಆಗ ಅವಳಿಗೆ ವಾಸಿಸಲು ಒಂದು ಆಶ್ರಮ ಒಂದು ಮಾವಿನ ಹಣ್ಣಿನ ಮರ ಇರುತ್ತದೆ ಬೇರೆ ಏನು ಇರುವುದಿಲ್ಲ ನಿತ್ಯವೂ ಹಸಿವಿನಿಂದ ಆಕೆ ಅತೃಪ್ತಳಾಗಿ ಭಗವಂತನನ್ನು ಬೇಡಿಕೊಳ್ಳುತ್ತಾಳೆ.

ಶ್ರೀಹರಿ ನಾನು ನಿನ್ನ ಎಷ್ಟು ಭಕ್ತಿಯಿಂದ ಪೂಜೆಯನ್ನು ಮಾಡಿದೆ ನನಗೆ ಈ ಗತಿ ಬಂತು ಎಂದು ಕೇಳಿದಾಗ ಆಗ ಶ್ರೀಕೃಷ್ಣ ಹೇಳುತ್ತಾನೆ ನೀನು ನನ್ನ ಬಗ್ಗೆ ಧರ್ಮ ಪಾರಾಯಣಿ ನಿಜ ಆದರೆ ನೀನು ಅನ್ನದಾನವನ್ನು ಮಾಡಲಿಲ್ಲ ಸ್ವತಹ ನಾನೇ ನಿನ್ನ ಮನೆಗೆ ಬಂದು ಭಿಕ್ಷೆ ಬೇಡಿದರು ನನಗೆ ಮಣ್ಣಿನ ಹೆಂಟೆಯನ್ನು ದಾನವಾಗಿ ಕೊಟ್ಟೆ ಅದಕ್ಕಾಗಿ ಅದರ ಫಲವೇ ಈಗ ನೀನು ಅನ್ನವೇ ಸಿಗಲಾರದ ಹಾಗೆ ನಿಂತಿದ್ದೀಯ.

ಆಕೆ ಈ ಸಂಕಟದಿಂದ ಪಾರು ಮಾಡು ಎಂದು ಬೇಡಿಕೊಂಡಾಗ ಷಟತಿಲ ಏಕಾದಶಿ ವ್ರತವನ್ನು ಹೇಳಿಕೊಡುತ್ತಾರೆ ಅದರಂತೆ ಆಚರಣೆಯನ್ನು ಮಾಡು ಎಂದು ಆಕೆಗೆ ಹೇಳುತ್ತಾರೆ. ವಿಷ್ಣುವಿನ ಬೆವರಿನಿಂದ ಹುಟ್ಟಿರುವುದು ಎಳ್ಳು, ಎಳ್ಳನ್ನು ಹಚ್ಚಿಕೊಂಡು ಸ್ನಾನ ಮಾಡಬೇಕು ಎಳ್ಳಿನಿಂದ ಹೋಮ ಮಾಡುವುದು, ಎಳ್ಳಿನಿಂದ ಅಭಿಷೇಕ ಮಾಡುವುದು. ಎಳ್ಳಿನ ನೀರನ್ನು ಸೇವನೆ ಮಾಡುವುದು ಇದರಿಂದ ಅಪಾರವಾದಂತಹ ಪುಣ್ಯ ಸಿಗುತ್ತದೆ ಷಟತಿಲ ಏಕಾದಶಿ ವ್ರತದಲ್ಲಿ ಇದು ಮುಖ್ಯವಾದದ್ದು.

ಪೂರ್ವತೋ ಮಾಂ ಹರಿಃ ಪಾತುಪಶ್ಚಾಚ್ಚಕ್ರೀ ಚ ದಕ್ಷಿಣೇ | ಕೃಷ್ಣ ಉತ್ತರತಃ ಪಾತು ಶ್ರೀಶೋ ವಿಷ್ಣುಶ್ಚ ಸರ್ವತಃ ||

ಊರ್ಧ್ವಮಾನಂದಕೃತ್ಪಾತು ಅಧಸ್ತಾಚ್ಛಾರ್ಙ್ಗನೃತ್ಸದಾ |

ಪಾದೌ ಪಾತು ಸರೋಜಾಂಫ್ರಿ ಜಂಘ ಪಾತು ಜನಾರ್ದನಃ ||

ಜಾನುನೀ ಮೇ ಜಗನ್ನಾಥಃ ಊರೂ ಪಾತುತ್ರಿವಿಕ್ರಮಃ |

ಗುಹ್ಯಂ ಪಾತು ಹೃಷೀಕೇಶಃ ಪೃಷ್ಠಂ ಪಾತು ಮಮಾವ್ಯಯಃ ||

ಪಾತು ನಾಭಿಂ ಮಮಾನನ್ತಃ ಕುಕ್ಷಿಂ ರಾಕ್ಷಸಮರ್ದನಃ |

ದಾಮೋದರೋ ಮೇ ಹೃದಯಂ ವಕ್ಷಃ ಪಾತು ನೃಕೇಸರೀ ||

ಕರೌ ಮೇ ಕಾಳಿಯಾರಾತಿ: ಭುಜ ಭಕ್ತಾರ್ತಿಭಂಜನಃ |

ಕಂಠಂ ಕಾಲಾಂಬುದಶ್ಯಾಮಃ ಸ್ಕಂದೌ ಮೇ ಕಂಸಮರ್ದನಃ ||
ನಾರಾಯಣೋಽವ್ಯಾನ್ನಾಸಾಂ ಮೇ ಕರ್ಣೇ

ಕೇಶಿಪ್ರಭಂಜನಃ | ಕಪೋಲೇ ಪಾತು ವೈಕುಂಠ ಜಿಹ್ವಾಂ ಪಾತುದಯಾನಿಧಿಃ ||

ಆಸ್ಯಂ ದಶಾಸ್ಯಹಾಽವ್ಯಾತ್ ನೇತ್ರೇ ಮೇ ಪದ್ಮಲೋಚನಃ | ] ಭ್ರುವೌ ಮೇ ಪಾತು ಭೂಮೀಶೋ ಲಲಾಟಂ ಮೇ ಸದಾಽಚ್ಯುತಃ ||

ಮುಖಂ ಮೇ ಪಾತು ಗೋವಿಂದಃ ಶಿರೋ ಗರುಡವಾಹನಃ | ಮಾಂ ಶೇಷಶಾಯೀ ಸರ್ವೇಭೋ ವ್ಯಾಧಿಭೋ ಭಕ್ತವತ್ಸಲಃ ||

ಪಿಶಾಚಾಗ್ನಿಜ್ವರೇಯ್ಯೋ

ಮಾಮಾಪದ್ಯ್ಭೋಽವತು ವಾಮನಃ | ಸರ್ವೇಭ್ಯೋ ದುರಿತೇಭ್ಯಶ್ಚ ಪಾತು ಮಾಂ ಪುರುಷೋತ್ತಮಃ ||

ಇದಂ ಶ್ರೀವಿಷ್ಣುಕವಚಂ ಸರ್ವಮಂಗಳದಾಯಕಂ | ಸರ್ವರೋಗಪ್ರಶಮನಂ ಸರ್ವಶತ್ರುವಿನಾಶನಮ್ ||

By admin

Leave a Reply

Your email address will not be published. Required fields are marked *