ಪುರುಷರ ಪಾದ ಈ ರೀತಿ ಆಗಿದ್ದರೆ ಖಂಡಿತವಾಗಿ ಬೇಗ ಶ್ರೀಮಂತರಾಗುತ್ತಾರೆ..ಎಷ್ಟೋ ಜನರಿಗೆ ಇದರ ಬಗ್ಗೆ ಗೊತ್ತಿಲ್ಲ - Karnataka's Best News Portal

ಪುರುಷರ ಪಾದಗಳು ಈ ರೀತಿ ಇದ್ದರೆ ಖಂಡಿತವಾಗಿ ಶ್ರೀಮಂತರಾಗುತ್ತಾರೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷವಾದಂತಹ ಗೌರವನ್ನು ಹಾಗೂ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಅದೇ ರೀತಿ ಗಂಡಸರಿಗೂ ಕೂಡ ಒಂದು ಪ್ರಮುಖ ಸ್ಥಾನವಿರುತ್ತದೆ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಲಕ್ಷ್ಮಿ ಎಂದು ಕರೆದರೆ ಗಂಡು ಮಕ್ಕಳನ್ನು ಮನೆಯ ಪಾಲಕ ಎಂದು ಕರೆಯಲಾಗುತ್ತದೆ.

ಸಾಮುದ್ರಿಕ ಶಾಸ್ತ್ರದಲ್ಲಿ ಕೆಲವೊಂದು ಲಕ್ಷಣಗಳನ್ನು ಹೊಂದಿದ್ದರೆ ಅಂತಹ ಮನೆ ಮಹಿಳೆಯರು ಪುರುಷರು ಅದೃಷ್ಟವಂತರಾಗಿರುತ್ತಾರೆ ಎಂದು ಉಲ್ಲೇಖಿಸಲಾಗಿದೆ. ಪುರುಷರ ಕಣ್ಗಳು ತುಂಬಾ ಹೊಳಪಿನಿಂದ ಕೂಡಿದ್ದರೆ ಅಂತಹವರು ತುಂಬಾ ಅದೃಷ್ಟಶಾಲಿ ಆಗಿರುತ್ತಾರೆ. ವಿಶೇಷವಾಗಿ ಇಂತಹ ಕಣ್ಣುಗಳು ಉಳ್ಳ ವ್ಯಕ್ತಿಯ ಮೇಲೆ ವಿಷ್ಣುವಿನ ಕೃಪೆ ಇರುತ್ತದೆ ಎಂದು ಹೇಳಲಾಗುತ್ತದೆ ಹಾಗೆಯೇ ಒಬ್ಬ ಪುರುಷ ಮಾತನಾಡುವಾಗ ತುಂಬಾ ಆತ್ಮಸ್ಥೈರ್ಯದಿಂದ ಹಾಗೆ ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದರೆ ಅಂತಹ ವ್ಯಕ್ತಿಯು ಕೂಡ ಅದೃಷ್ಟ ಶಾಲಿ ಆಗಿರುತ್ತಾನೆ.


ಈ ತರಹದ ವ್ಯಕ್ತಿಯ ಮೇಲೆ ದೇವರ ವಿಶೇಷವಾದ ಕೃಪೆ ಇರುತ್ತದೆ ಹಾಗಾಗಿಯೇ ಈ ವ್ಯಕ್ತಿಗಳಿಗೆ ಆತ್ಮವಿಶ್ವಾಸ ಆತ್ಮಸ್ಥೈರ್ಯ ಹೆಚ್ಚಾಗಿರುತ್ತದೆ. ಕಾಲಿನ ಹೆಬ್ಬೆರಳಿನ ಪಕ್ಕದ ಬೆರಳು ಎಲ್ಲಾ ಬೆರಳುಗುಂತ ಉದ್ದವಾಗಿದ್ದಾರೆ ಅಂತಹ ವ್ಯಕ್ತಿಯನ್ನು ಬಹಳ ಅದೃಷ್ಟಶಾಲಿ ಎಂದು ಹೇಳಲಾಗುತ್ತದೆ ಯಾಕೆಂದರೆ ಈ ರೀತಿಯ ಬೆರಳು ಪುರುಷರಿಗೆ ಇರುವುದು ಬಹಳ ವಿರಳ ಹಾಗಾಗಿ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ.

ಅದೇ ರೀತಿ ಗಂಡಸರ ಹಣೆಯ ಮೇಲೆ ನಾಲ್ಕು ಬೆರಳನ್ನು ಇಟ್ಟಾಗ ನಾಲ್ಕು ಬೆರಳು ಹಣೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡರೆ ತುಂಬಾ ಅದೃಷ್ಟ ಎಂದು ಹೇಳಲಾಗುತ್ತದೆ ಒಂದು ವೇಳೆ ಪುರುಷರ ದೇಹದಿಂದ ಯಾವಾಗಲೂ ನಿರಂತರವಾಗಿ ಬೆವರಿನ ಜೊತೆಗೆ ದುರ್ಗಂಧ ಬರುತ್ತಿದ್ದರೆ ಅಂತಹ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನ ಅನುಭವಿಸುತ್ತಾನೆ ಎಂದು ಹೇಳಲಾಗುತ್ತದೆ.

ಇನ್ನು ಪುರುಷರ ಎಡಗನ್ನೆಯ ಮೇಲೆ ಮಚ್ಚೆ ಇದ್ದರೆ ಅಂತಹವರು ಬಹಳ ಖರ್ಚು ಮಾಡುತ್ತಾರೆ ಅವರಿಗೆ ದುಡ್ಡಿನ ಮೇಲೆ ಹಿಡಿತ ಇರುವುದಿಲ್ಲ ಸಂಬಳ ಬಂದಿದ್ದಷ್ಟೇ ಗೊತ್ತು ಹೇಗೆ ಖರ್ಚಾಗಿತ್ತು ಎಂದೂ ತಿಳಿಯುವುದಿಲ್ಲ, ಕಂಡಿದ್ದೆಲ್ಲಾ ಬೇಕು ಎನ್ನುವ ಸ್ವಭಾವದ ಜೊತೆಗೆ ನನ್ನ ಬಳಿ ದುಡ್ಡಿದೆ ಎನ್ನುವಂತಹ ಸಣ್ಣದೊಂದು ಸೊಕ್ಕು ಇರುತ್ತದೆ.

ಹಣೆಯ ಮೇಲೆ ಮಚ್ಚೆ ಇದ್ದರೆ ಅಂತಹ ಪುರುಷರು ಬಹಳ ಸ್ಟ್ರಾಂಗ್ ಆಗಿ ಇರುತ್ತಾರೆ ಅಂದರೆ ಗಟ್ಟಿಗರು ಯಾವುದಕ್ಕೂ ಕೂಡ ಜಗ್ಗುವುದಿಲ್ಲ ಏನೇ ಬಂದರೂ ಒಂದು ಕೈ ನೋಡಲು ಸಿದ್ದರಿರುತ್ತಾರೆ ಈ ಪುರುಷರನ್ನ ಸುಲಭವಾಗಿ ಎದುರಿಸುವುದು ಅಸಾಧ್ಯ ಕಷ್ಟಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಜೊತೆಗೆ ಅಗತ್ಯ ಬಿದ್ದರೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಎದೆಯ ಮೇಲೆ ಎಡ ಭಾಗದಲ್ಲಿ ಮಚ್ಚೆ ಇದ್ದರೆ ಅಂತಹ ವ್ಯಕ್ತಿಗಳು ಜಗಳಗಂಟ ರಾಗಿರುತ್ತಾರೆ ಯಾರ ಜೊತೆ ಬೇಕಾದರೂ ಗುದ್ದಾಡಲು ಇಳಿಯುತ್ತಾರೆ.

Leave a Reply

Your email address will not be published. Required fields are marked *