ಶಿವ ಹೇಗೆ ಜನ್ಮಿಸಿದನು ಗೊತ್ತಾ ? ಶಿವನ ತಂದೆ ತಾಯಿ ಯಾರು ಶಿವನ ಬಗ್ಗೆ ನೀವು ಅರಿಯದ ಸತ್ಯ ನೋಡಿ - Karnataka's Best News Portal

ಶಿವ ಹೇಗೆ ಜನ್ಮಿಸಿದನು ಗೊತ್ತಾ ? ಶಿವನ ತಂದೆ ತಾಯಿ ಯಾರು ಶಿವನ ಬಗ್ಗೆ ನೀವು ಅರಿಯದ ಸತ್ಯ ನೋಡಿ

ಶಿವ ಜನಿಸಿದ್ದು ಹೇಗೆ ಗೊತ್ತಾ.?ಶಿವ ಎಂದರೆ ದಯಾ, ಕರುಣಾ, ಶಿವಪ್ರದ ಋಗ್ವೇದದಲ್ಲಿ ಇರುವ ಲಿಟರಲ್ ಮೀನಿಂಗ್ ಇದಕ್ಕೆ ಏನಾದರೂ ಕೆಟ್ಟ ಫೀಲಿಂಗ್ ಬಂದಾಗ ತಕ್ಷಣ ಪಾಸಿಟಿವ್ ಆಗಿ ಮಾಡಲು ಶಿವನನ್ನು ನೆನೆಸಿಕೊಂಡು ಶಿವ ಶಿವ ಎನ್ನುತ್ತಾರೆ ಸ್ವಲ್ಪ ಆಳವಾಗಿ ನೋಡಿ ಸಂಸ್ಕೃತದಲ್ಲಿ ಇರುವ ತಾತ್ವಿಕ ಅರ್ಥ ಗಮನಿಸಿದರೆ ಶಿವ ಎನ್ನುವ ಪದ ಶ್ರೀ ಮತ್ತು ವಾ ಎಂಬ ಎರಡು ಪದಗಳಿಂದ ಕೂಡಿದೆ ಶ್ರೀ ಎಂದರೆ ಎಲ್ಲವನ್ನು ಬೆಳಗಿಸುವುದು ಎಲ್ಲವನ್ನು ಬೆಳಗಿಸುವ ಈ ಕರಣ ಸ್ವರೂಪಕ್ಕೆ ಅರ್ಥವೇನು?

WhatsApp Group Join Now
Telegram Group Join Now

ಅದಕ್ಕೆ ಸಮಾಧಾನ ಶ್ವೇತ ಸತರ ಉಪನಿಷತ್ ನಲ್ಲಿ ಪರಬ್ರಹ್ಮನಿಗೆ ಸೇರಿದವನು ಎಂಬ ಅರ್ಥ ಬರುತ್ತದೆ. ಪರ ಅಂದರೆ ಅಲ್ಟಿಮೇಟ್ ಬ್ರಹ್ಮ ಎಂದರೆ ಕಾಸ್ಮಿಕ್ ಪ್ರಿನ್ಸಿಪಲ್ ಅಂದರೆ ನಾವು ನಮ್ಮ ಸೃಷ್ಟಿ ಈ ರೀತಿ ಯಾಕೆ ಹೀಗೆ ಇದೆ ಎನ್ನುವ ತತ್ವ ಇದರಲ್ಲಿ ಸತ್, ಚಿತ್, ಆನಂದ ಅಂದರೆ ಸತ್ಯ ಚೈತನ್ಯ ಆನಂದ ಇದೆಲ್ಲದರ ಅಲ್ಟಿಮೇಟ್ ಲೆವೆಲನ್ನು ಅರ್ಥ ಮಾಡಿಕೊಂಡಿರುವವನು ಇದೆಲ್ಲದರ ಸಾರಾಂಶವನ್ನು ಈಶ್ವರ ಎಂದು ಹೇಳಲಾಗಿದೆ.


ಇಲ್ಲಿಯವರೆಗೂ ಹೇಳಿದೆ ಎಲ್ಲಾ ಪಾಯಿಂಟ್ಸ್ ಗಳನ್ನು ಒಂದು ಮಾಡಿ ಹೇಳಿದರೆ ಶಿವನು ರೂಪ ಇಲ್ಲದ ತತ್ವ ಆಗುತ್ತಾನೆ. ಆದರೆ ಪುರಾಣ ಇತಿಹಾಸದಲ್ಲಿ ಶಿವನು ಯೋಗಿ ರೂಪದಲ್ಲಿ ಇರುತ್ತಾನೆ ಎಂಬ ವರ್ಣನೆ ಕಾಣುತ್ತದೆ. ರುದ್ರಾಭಿಷೇಕದಲ್ಲಿ ವಿವರಣೆ ನೋಡುವುದಾದರೆ ವಿರುಪೇಭ್ಯೋ ವಿಶ್ವರೂಪೇಭ್ಯೋ ನಮೋ ನಮಃ ವಿರುಪೇಭ್ಯೋ ಅಂದರೆ ರೂಪವಿಲ್ಲದ, ವಿಶ್ವರೂಪೇಭ್ಯೋ ಅಂದರೆ ವಿಶ್ವದಲ್ಲಿ ಇರುವ ಎಲ್ಲಾ ರೂಪದಲ್ಲಿ ಇರುತ್ತದೆ ಎಲ್ಲಾ ರೂಪವೂ ರೂಪವಿಲ್ಲದ ಆ ಶೀವನ ವ್ಯಕ್ತಿಕರಣ.

See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ

ಮೊದಲನೇದಾಗಿ ಭಾಗವತದಲ್ಲಿ ಇರುವ ವಿವರಣೆ ವಿಷ್ಣು ಚತುರ್ಮುಖ ಬ್ರಹ್ಮನಿಗೆ ವಿಶ್ವವನ್ನು ಸೃಷ್ಟಿಸುವ ಬಾಧ್ಯತೆಯನ್ನು ಒಪ್ಪಿಸುತ್ತಾನೆ ಆಗ ಬ್ರಹ್ಮ ಕನಕ, ಸಾನಂದ, ಸನಾತನ, ಸನತ್ ಕುಮಾರ್ ಎಂಬ ನಾಲ್ಕು ಮಾನಸ ಪುತ್ರರನ್ನು ಸೃಷ್ಟಿ ಮಾಡಿದನು. ಸೃಷ್ಟಿಯನ್ನು ಮುಂದುವರಿಸುವ ಭಾದ್ಯತೆಯನ್ನು ತೆಗೆದುಕೊಳ್ಳಿ ಎಂದು ಬ್ರಹ್ಮ ಹೇಳಿದನು.

ಆದರೆ ಹುಟ್ಟಿನಿಂದಲೇ ಜ್ಞಾನೋದಯದಿಂದ ಹುಟ್ಟಿದವರು ಒಂದು ಸಾಮಾನ್ಯ ಜೀವನವನ್ನು ನಡೆಸಲು ಇಷ್ಟಪಡಲಿಲ್ಲ ಬ್ರಹ್ಮ ಹೇಳಿದ ಮಾತನ್ನು ಅಂಗೀಕರಿಸದೆ ವಿಮೋಚನೆಗಾಗಿ ವೈಕುಂಠಕ್ಕೆ ಹೋದರು. ತನ್ನ ಮಾತನ್ನು ತಿರಸ್ಕರಿಸಿದ್ದರು ಎಂದು ಬ್ರಹ್ಮನ ಮನಸ್ಸಿನಲ್ಲಿ ಕೋಪ ಉಂಟಾಗುತ್ತದೆ ಈ ಕೋಪವನ್ನು ನಿಯಂತ್ರಿಸುವಾಗ ಒಂದು ರೂಪ ಸೃಷ್ಟಿಯಾಗುತ್ತದೆ ಕೆಂಪು ನೀಲಿಯಿಂದ ಕೂಡಿದ ಬಣ್ಣದಲ್ಲಿ ಒಂದು ಶಿಶು ಹುಟ್ಟಿದನು.

ಅವನು ಅಳುತ್ತಾ ಅವನ ಹೆಸರು ಕೇಳಿ ನಾನು ಎಲ್ಲಿರಬೇಕು ಎಂದು ಕೇಳುತ್ತಾನೆ ಹುಟ್ಟಿನಿಂದಲೇ ಅಳುತ್ತಿರುವ ಕಾರಣ ನಿನಗೆ ರುದ್ರ ಎಂಬ ನಾಮಕರಣ ಮಾಡುತ್ತೇನೆ. ಹೃದಯ, ಇಂದ್ರಿಯ, ಜೀವ, ನೀರು, ಅಗ್ನಿ, ಭೂಮಿ, ಆಕಾಶ, ಸೂರ್ಯ, ಚಂದ್ರರು ತಪಸ್ಸು ಈ ಸ್ಥಾನವೆಲ್ಲವೂ ನಿನ್ನದೇ ಈ ಪ್ರದೇಶಗಳಿಗೆ ಹೋಗಿ ಪ್ರತಿರೂಪಗಳನ್ನು ಸೃಷ್ಟಿಸು ಎಂದು ಬ್ರಹ್ಮ ಆದೇಶಿಸುತ್ತಾನೆ ಆ ರುದ್ರನೇ ಶಿವ.

[irp]


crossorigin="anonymous">