ವಿಷ್ಣುವರ್ಧನ್ ಎರಡನೇ ಮಗಳು ಚಂದನ ಯಾಕೆ ಅಪ್ಪನ ಸಮಾಧಿಗೆ ಬರೊಲ್ಲ ಕಾರಣ ಹೇಳಿದ ಅನಿರುದ್ದ್...ಎಲ್ಲರ ಆರೋಪಕ್ಕೆ ಉತ್ತರ ನೀಡಿದ ವಿಷ್ಣು ಅಳಿಯ.. - Karnataka's Best News Portal

ವಿಷ್ಣುವರ್ಧನ್ ಎರಡನೇ ಮಗಳು ಚಂದನ ಯಾಕೆ ಅಪ್ಪನ ಸಮಾಧಿಗೆ ಬರಲ್ಲ ಕಾರಣ ಹೇಳಿದ ಅನಿರುದ್ಧ್||
ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತೆ ವಿಷ್ಣುವರ್ಧನ್ ಅವರ ಯಾವುದೇ ಒಂದು ಕಾರ್ಯಕ್ರಮ ಅಥವಾ ಅವರ ಮನೆಯ ಯಾವುದೇ ಒಂದು ಸಮಾರಂಭಗಳಲ್ಲಿ ವಿಷ್ಣುವರ್ಧನ್ ಅವರ ಮಗಳು ಚಂದನ ಅವರು ಯಾಕೆ ಕಾಣಿಸಿಕೊಳ್ಳುವುದಿಲ್ಲ ಎನ್ನುವಂತಹ ಹಲವಾರು ಪ್ರಶ್ನೆಗೆ ಅನಿರುದ್ಧ್ ಅವರು ಉತ್ತರವನ್ನು ಕೊಟ್ಟಿದ್ದಾರೆ.

ಅದು ಏನೆಂದರೆ ಚಂದನ ಅವರು ಯಾವುದೇ ರೀತಿಯಾದಂತಹ ಮೀಡಿಯಾದ ಮುಂದೆ ಬರಲು ಅವರು ಇಷ್ಟಪಡುವುದಿಲ್ಲ ಬದಲಿಗೆ ಅವರು ಸಾಂಪ್ರದಾಯಿಕವಾಗಿ ನಡೆಯುವಂತ ಕೆಲವೊಂದು ಕಾರ್ಯಕ್ರಮಗಳಿಗೆ ಮಾತ್ರ ಬರುತ್ತಾರೆ ಆದರೆ ಅವರಿಗೂ ಮತ್ತು ನಮಗೂ ಯಾವುದೇ ರೀತಿಯಾದಂತಹ ತೊಂದರೆ ಇಲ್ಲ ಬದಲಿಗೆ ನಾವಿಬ್ಬರೂ ಕೂಡ ಸಂತೋಷವಾಗಿ ಅವರು ನಮ್ಮ ಮನೆಗೆ ಬರುತ್ತಾರೆ ನಾವು ಕೂಡ ಅವರ ಮನೆಗೆ ಹೋಗುತ್ತೇವೆ.


ನಮ್ಮಿಬ್ಬರ ನಡುವೆ ಅಂದರೆ ಚಂದನ ಹಾಗೂ ಕೀರ್ತಿ ವಿಷ್ಣುವರ್ಧನ್ ಇಬ್ಬರ ನಡುವೆ ಯಾವುದೇ ರೀತಿಯಾದಂತಹ ಮನಸ್ತಾಪಗಳು ಇಲ್ಲ ಬದಲಿಗೆ ಈ ವಿಷಯದಲ್ಲಿ ಯಾರು ಕೂಡ ತಪ್ಪನ್ನು ತಿಳಿದುಕೊಳ್ಳ ಬಾರದು ನಾವು ಅಪ್ಪಾಜಿ ಅವರ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇವೆ ಆದರೆ ಅವರು ಆ ಒಂದು ಕೆಲಸದ ಬಗ್ಗೆ ನಮಗೆ ಸಹಾಯವನ್ನು ಅಂದರೆ ಬೆಂಬಲವನ್ನು ಕೊಡುತ್ತಾರೆ ಬದಲಿಗೆ ಅವರು ಮೀಡಿಯಾದ ಮುಂದೆ ಕಾಣಿಸಿಕೊಳ್ಳುವುದಿಲ್ಲ ಅಷ್ಟೇ.

ಆದ್ದರಿಂದ ಯಾರೂ ಕೂಡ ಈ ವಿಚಾರದ ಬಗ್ಗೆ ತಪ್ಪು ತಿಳಿದುಕೊಳ್ಳ ಬೇಡಿ ಎಂದು ಅಭಿಮಾನಿಗಳಿಗೆ ಅನಿರುದ್ಧ್ ಅವರು ಕೆಲವೊಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳುವುದರ ಮುಖಾಂತರ ಎಲ್ಲರ ಪ್ರಶ್ನೆಗೂ ಕೂಡ ಉತ್ತರಿಸಿದ್ದಾರೆ. ಪ್ರತಿಯೊಬ್ಬ ಅಭಿಮಾನಿಗಳಿಗೂ ಕೂಡ ಒಂದು ಬೇಸರದ ಸಂಗತಿ ಏನು ಎಂದರೆ ಡಾ. ವಿಷ್ಣುವರ್ಧನ್ ಅವರಿಗೆ ಕಂಠೀರವ ಸ್ಟುಡಿಯೋದಲ್ಲಿ ಅವರ ಸಮಾಧಿಯನ್ನು ಮಾಡುವುದಕ್ಕೆ ಒಪ್ಪದೇ ಇರುವುದು.

ಹಾಗೂ ಅವರಿಗೆ ಬೆಂಗಳೂರಿನಲ್ಲಿ ಯಾವುದೇ ಜಾಗವನ್ನು ಕೊಡದೆ ಇರುವುದು ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ ಈಗಲೂ ಕೂಡ ಈ ಒಂದು ವಿಚಾರವಾಗಿ ಹೋರಾಟಗಳು ನಡೆಯುತ್ತಲೇ ಇದ್ದು ಈಗಲೂ ಕೂಡ ಈ ವಿಷಯಕ್ಕೆ ಸಂಬಂಧಿಸಿದಂತ ಯಾವುದೇ ಸಮಂಜಸ ಉತ್ತರ ಸರ್ಕಾರ ಕೊಡುತ್ತಿಲ್ಲ ಆದ್ದರಿಂದ ಪ್ರತಿ ವರ್ಷ ಹಾಗೂ ಪ್ರತಿದಿನ ಈ ವಿಚಾರವಾಗಿ ಹೆಚ್ಚಿನ ಜನ ಹೋರಾಡುತ್ತಲೇ ಇದ್ದಾರೆ ಅಂತ ಹೇಳಬಹುದು.

ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಹೆಸರಾನ್ವಿತ ನಟನಾಗಿ ಬೆಳೆದಿದ್ದರೂ ಕೂಡ ವಿಷ್ಣುವರ್ಧನ್ ಅವರಿಗೆ ಅವರ ಸಮಾಧಿಯನ್ನು ನಿರ್ಮಾಣ ಮಾಡುವುದಕ್ಕೆ ಎಲ್ಲೂ ಕೂಡ ಅವಕಾಶವನ್ನು ಕೊಡದೆ ಇರುವುದು ಒಂದು ನಾಚಿಕೆಯ ಸಂಗತಿಯಾಗಿದೆ ಎಂದೇ ಹೇಳಬಹುದು ಈ ಒಂದು ವಿಚಾರ ಈಗಲೂ ಕೂಡ ಪ್ರತಿಯೊಬ್ಬರಿಗೂ ಬೇಸರವನ್ನುಂಟು ಮಾಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *