ಸುಮಲತಾ ಅಂಬರೀಷ್ ರವರ ಪತ್ನಿ,ನಟಿ,ಸಂಸದರು ಅಂತ ಮಾತ್ರ ಎಲ್ಲರಿಗೂ ಗೊತ್ತು ಅದರೆ ಇವರ ನಿಜವಾದ ಹಿನ್ನೆಲೆ ನಿಮಗೆ ಗೊತ್ತಾ? » Karnataka's Best News Portal

ಸುಮಲತಾ ಅಂಬರೀಷ್ ರವರ ಪತ್ನಿ,ನಟಿ,ಸಂಸದರು ಅಂತ ಮಾತ್ರ ಎಲ್ಲರಿಗೂ ಗೊತ್ತು ಅದರೆ ಇವರ ನಿಜವಾದ ಹಿನ್ನೆಲೆ ನಿಮಗೆ ಗೊತ್ತಾ?

ಅಂಬರೀಶ್ ಪತ್ನಿ ಸುಮಲತಾ ನಟಿ ಸಂಸದೆ ಅಂತ ಮಾತ್ರ ಗೊತ್ತು ಆದರೆ ಅವರ ಹಿನ್ನೆಲೆ ಗೊತ್ತಾ.
ಸುಮಲತಾ ಮದನ್ ಮೋಹನ್ ಹಾಗು ರೂಪ ಎಂಬ ದಂಪತಿಯ ಮಗಳಾಗಿ 1963 ಆಗಸ್ಟ್ ತಿಂಗಳಲ್ಲಿ ಚೆನ್ನೈನಲ್ಲಿ ಜನಿಸುತ್ತಾರೆ. ಇವರ ಐದು ಮಕ್ಕಳಲ್ಲಿ ಸುಮಲತಾ ಕೂಡ ಒಬ್ಬರಾಗಿದ್ದರು. ಇವರಿಗೆ ಇಬ್ಬರು ಅಕ್ಕಂದಿರು ಒಬ್ಬ ಅಣ್ಣ ಹಾಗೂ ಒಬ್ಬ ಸಹೋದರಿ ಕೂಡ ಇದ್ದರು ಮೂಲತಹ ಗುಂಟೂರಿನವರು ಇವರ ಕುಟುಂಬ ಚೆನ್ನೈನಲ್ಲಿ ನೆಲೆಸಿತ್ತು. ಸುಮಲತಾ ಅವರ ಮಾತೃಭಾಷೆ ತೆಲುಗು ಇವರ ತಂದೆ ಎಲ್ ವಿ ಪ್ರಸಾದ್ ಸ್ಟುಡಿಯೋದಲ್ಲಿ ಎಡಿಟಿಂಗ್ ಅನ್ನು ಮಾಡುತ್ತಿದ್ದರು.

WhatsApp Group Join Now
Telegram Group Join Now

ಆ ಕಾಲಕ್ಕೆ ದೂರದ ಲಂಡನ್ ನಲ್ಲಿ ಎಡಿಟಿಂಗ್ ಹಾಗೂ ಸ್ಪೆಷಲ್ ಎಫೆಕ್ಟ್ಸ್ ಗಳನ್ನ ಕಲಿತು ಬಂದಿದ್ದಂತಹ ಮೊಟ್ಟಮೊದಲ ಭಾರತೀಯ ನಿಪುಣ ಎಂದು ಕರೆಯುತ್ತಿದ್ದರು. ಇವರು ಚೆನ್ನೈನ ಸ್ಟುಡಿಯೋದಿಂದ ಮುಂಬೈನ ಸ್ಟುಡಿಯೋಗೆ ಪೋಸ್ಟಿಂಗ್ ಆಗುತ್ತಾರೆ ಸುಮಲತಾ ಚೆನ್ನೈನಲ್ಲಿ ಜನಿಸಿದರು ಕೂಡ ತಂದೆ ಉದ್ಯೋಗ ಬಾಂಬೆಗೆ ಸ್ಥಳಾಂತರ ಆದ್ದರಿಂದ ಅವರು ಕೂಡ ಕ್ರಮೇಣ ಬಾಂಬೆಗೆ ಶಿಫ್ಟ್ ಆದರು.


ಸುಮಲತಾ ಅವರು 7 ವರ್ಷದ ಬಾಲಕಿಯಾಗಿದ್ದಾಗಲೇ ಅವರ ತಂದೆ ಏಕಏಕಿ ಮರಣದಿಂದ ಅವರ ಕುಟುಂಬ ದಿಕ್ಕಾಪಾಲಾಯಿತು ಇದು ಅವರಿಗೆ ಬರಸಿಡಿಲು ಬಡಿದಂತೆ ಆಯಿತು ಅವರ ತಾಯಿ ಐದು ಮಕ್ಕಳ ಹೊಣೆಯನ್ನು ಹೋತ್ತರು ಮದನ್ ಮೋಹನ್ ರವರ ಮರಣದ ನಂತರ ಹುಟ್ಟೂರದ ಗುಂಟೂರಿಗೆ ಸುಮಲತ ಕುಟುಂಬ ಮರಳುತ್ತದೆ ಗುಂಟೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಅವರ ಶಿಕ್ಷಣ ನೆಡೆಯುತ್ತಿರುತ್ತದೆ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ಆದರೆ ಕೆಲಸದ ಒತ್ತಡ ಹಾಗೂ ಕೌಟುಂಬಿಕ ಒತ್ತಡದ ಹಿನ್ನೆಲೆಯಲ್ಲಿ ಅವರ ಶಿಕ್ಷಣ ಸಂಪೂರ್ಣ ಹೊಂದಲು ಸಾಧ್ಯವಾಗಲಿಲ್ಲ ಅದನ್ನು ಅವರು ಅರ್ಧಕ್ಕೆ ನಿಲ್ಲಿಸಬೇಕಾಗುತ್ತದೆ. ಶಾಲಾ-ಕಾಲೇಜು ಪಠ್ಯವನ್ನು ಅವರು ಹೆಚ್ಚು ಓದದೆ ಹೋದರು ಇತರೆ ಕಥೆ ಕಾದಂಬರಿಗಳನ್ನು ಓದುವ ಅಭ್ಯಾಸ ಅವರಿಗೆ ಇತ್ತು ಇದೇ ಅವರ ನೆಚ್ಚಿನ ಸಂಗತಿಗಳಾಗಿದ್ದವು ಶೂಟಿಂಗ್ ಸೆಟ್ ನಲ್ಲೂ ಕೂಡ ಅವರ ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವುದರಲ್ಲಿ ಕಾಲ ಕಳೆಯುತ್ತಿದ್ದರು

ನೋಡುವುದಕ್ಕೆ ಸಹಜ ಚೆಲುವೆ ಆದಂತಹ ಸುಮಲತಾ ಅವರು ಬಹಳ ಸಂಕೋಚ ಸ್ವಭಾವದವರಾಗಿದ್ದರು. ಆಗ ಇನ್ನೂ ಕೂಡ ಅವರಿಗೆ 15 ವರ್ಷ ವಯಸ್ಸು ಆಗ ಶಾಲೆಯಲ್ಲಿ ಸೌಂದರ್ಯ ಸ್ಪರ್ಧೆ ಮತ್ತು ರ್ಯಾಂಪ್ ವಾಕ್ ಸ್ಪರ್ಧೆ ಇಟ್ಟಾಗ ಅದರಲ್ಲಿ ಪಾಲ್ಗೊಳ್ಳುವಂತೆ ಹಲವರು ಸುಮಲತಾ ಅವರಿಗೆ ಒತ್ತಾಯಿಸಿದರು.

ಸುಮಲತಾ ಇದರಲ್ಲಿ ಭಾಗವಹಿಸಿದರೆ ಖಂಡಿತವಾಗಿ ಗೆಲ್ಲುತ್ತಾರೆ ಅದರಿಂದ ಶಾಲೆಗೆ ಹೆಸರು ಮತ್ತು ಕೀರ್ತಿ ಬರುತ್ತದೆ ಎಂದು ಅವರ ನಂಬಿಕೆಯಾಗಿತ್ತು. ಆದರೆ ಸಂಕೋಚ ಸ್ವಭಾವದವರಾದ ಸುಮಲತಾ ಅವರು ಅದನ್ನು ನಿರಾಕರಿಸಿದರು ಸಹಪಾಠಿಗಳ ಒತ್ತಾಯದಿಂದ ಮೊದಲ ಬಾರಿಯೇ ಸೀರೆ ತೊಟ್ಟಂತಹ ಅವರು ಹೇಗೋ ರ್ಯಾಂಪ್ ಮಾಡಿ ಎಲ್ಲರ ಗಮನ ಸೆಳೆದು ಪ್ರಥಮ ಸ್ಥಾನವನ್ನು ಪಡೆದುಕೊಂಡರು.

[irp]


crossorigin="anonymous">