ಹಿರಿಯ ನಟ ಲಕ್ಷ್ಮಣ್ ಕೊನೆ ಕ್ಷಣ ಬಿಚ್ಚಿಟ್ಟ ಮಗ. ನಟ ಲಕ್ಷ್ಮಣ್ ಜೀವನದಲ್ಲಿ ಇದ್ದಕ್ಕಿದ್ದಂತೆ ಆಗಿದ್ದೇನು ಗೊತ್ತಾ ? - Karnataka's Best News Portal

ಹಿರಿಯ ನಟ ಲಕ್ಷ್ಮಣ್ ಅವರ ಕೊನೆಯ ಕ್ಷಣಗಳನ್ನು ಬಿಚ್ಚಿಟ್ಟ ಅವರ ಪುತ್ರ‌.ಹಿರಿಯ ನಟ ಲಕ್ಷ್ಮಣ್ ಅವರು ಹೃ’ದ’ಯಾ’ಘಾ’ತದಿಂದ ನಿ’ಧ’ನರಾದರು. 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಣ್ ಅವರಿಗೆ 74 ವರ್ಷವಾಗಿತ್ತು. ಲಕ್ಷ್ಮಣ್ ಅವರು ಅಂಬರೀಶ್ ಅವರ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು
ಭಾನುವಾರ ರಾತ್ರಿ ಲಕ್ಷ್ಮಣ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಆ ನಂತರ ಅವರನ್ನು ಬೆಂಗಳೂರಿನ ನಾಗರಬಾವಿಯಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಇಸಿಜಿ ಮಾಡಿಸಲಾಯಿತು.

ಆದ ನಂತರ ಲಕ್ಷ್ಮಣ್ ಅವರನ್ನು ಮನೆಗೆ ಕರೆದುಕೊಂಡು ಬರಲಾಯಿತು. ಸೋಮವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ಅವರು ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮನೆಯಲ್ಲಿಯೇ ಪಾರ್ಥಿವ ಶರೀರವನ್ನ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಟ ಲಕ್ಷ್ಮಣ ಅವರಿಗೆ ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ಇರಲಿಲ್ಲ ಅವರು ಫಿಟ್ಟಾಗಿ ಹೆಲ್ದಿಯಾಗಿ ಇದ್ದರು ಎಂದು ಅವರ ಕೊನೆಯ ಮಗ ವಿಚಾರವನ್ನು ತಿಳಿಸಿದ್ದಾರೆ.


ಹೌದು ಅವರಿಗೆ ಹಲ್ಲು ನೋವಿನ ಸಮಸ್ಯೆ ಒಂದು ಬಿಟ್ಟರೆ ಇನ್ನು ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಸಹ ಇರಲಿಲ್ಲ. ಅವರು ಸಾಯುವ ಹಿಂದಿನ ದಿನ ನನಗೆ ಹಲ್ಲು ನೋವು ಇದೆ ಎಂದು ಮಗನ ಬಳಿ ಹೇಳಿಕೊಂಡಿದ್ದರು ಅದನ್ನು ಬಿಟ್ಟರೆ ಇವರಿಗೆ ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ಇರಲಿಲ್ಲ.

ಯಾವುದೇ ಸಿನಿಮಾ ಆಫರ್ ಗಳು ಇಲ್ಲದ ಕಾರಣ ಇವರು ಮನೆಯಲ್ಲಿಯೇ ಇದ್ದು ಆರಾಮವಾಗಿದ್ದರು ಕಳೆದ ಒಂದುವರೆ ತಿಂಗಳು ತಮ್ಮ ಮಗಳ ಮನೆಯಲ್ಲಿ ಲಕ್ಷ್ಮಣ್ ದಂಪತಿಗಳು ಇದ್ದರೂ ಎಂದು ಅವರ ಮಗ ತಿಳಿಸಿದ್ದಾರೆ. ಲಕ್ಷ್ಮಣ್ ಅವರಿಗೆ 74 ವರ್ಷ ವಯಸ್ಸಾಗಿದ್ದರು ಸಹ ಅವರು ತುಂಬಾ ಆಕ್ಟಿವ್ ಆಗಿ ಇದ್ದರು ಯಾವುದೇ ಕೆಲಸಗಳನ್ನು ಚುರುಕಿನಿಂದ ಮಾಡುತ್ತಿದ್ದರು. ಸಹ ವಿಷ್ಣುವರ್ಧನ್ ಜೊತೆ ಲಕ್ಷ್ಮಣ್ ಸ್ನೇಹ ಅವರು ತುಂಬಾ ಸ್ನೇಹದಿಂದ ಇದ್ದರು.

ಹಾಲುಂಡ ತವರು ಚಿತ್ರದಲ್ಲಿ ಡಾ ವಿಷ್ಣುವರ್ಧನ್ ಅವರ ಜೊತೆ ಮುಖ್ಯ ಪಾತ್ರದಲ್ಲಿ ಲಕ್ಷ್ಮಣ್ ಕಾಣಿಸಿಕೊಂಡಿದ್ದರು. ಎಲ್ಲರ ಜೊತೆ ಪ್ರೀತಿಯಿಂದ ಮಾತನಾಡುತ್ತಿದ್ದ ವಿಷ್ಣುವರ್ಧನ್ ಜೊತೆ ಹಾಲುಂಡ ತವರು ಸಿನಿಮಾದಲ್ಲಿ ಲಕ್ಷ್ಮಣ್ ಅವರಿಗೆ ಒಳ್ಳೆಯ ಬಾಂಧವ್ಯ ಶುರುವಾಯ್ತು. ಆರ್ಮಿಗೆ ಹೋಗಬೇಕಿದ್ದ ಲಕ್ಷ್ಮಣ್ ನಟರಾದರು ಹೌದು ಆರ್ಮಿಗೆ ಆಯ್ಕೆಯಾಗಿದ್ದ ಲಕ್ಷ್ಮಣ್ ಅವರು ಭೂಪಾಲ್‌ನಲ್ಲಿ ಕೆಲಸ ಮಾಡಲು ಹೊರಟಾಗ ಅವರ ತಾಯಿ ತಡೆದರಂತೆ.

ಅಂಬರೀಶ್, ವಿಷ್ಣುವರ್ಧನ್, ಶಂಕರ್ ನಾಗ್ ಸೇರಿದಂತೆ ಕನ್ನಡದ ದಿಗ್ಗಜರ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಣ್ ಅವರು, ಯಜಮಾನ , ಸೂರ್ಯವಂಶ, ಒಲವಿನ ಉಡುಗೊರೆ, ಸಾಂಗ್ಲಿಯಾನ, ದಾದ, ಅಂತ ಸಿನಿಮಾಗಳಲ್ಲಿ ನಟಿಸಿದ್ದಾರೆ. ರವಿಚಂದ್ರನ್ ಅವರ ಜೊತೆ ರವಿ ಬೋಪಣ್ಣ, ಮಲ್ಲ ಸಿನಿಮಾದಲ್ಲಿಯೂ ಲಕ್ಷ್ಮಣ್ ಅವರು ನಟಿಸಿದ್ದರು.

Leave a Reply

Your email address will not be published. Required fields are marked *