ಮನೆಯ ವಾತಾವರಣ ಈ ರೀತಿ ಇದ್ದರೆ ಮಾತ್ರ ಶ್ರೀ ಲಕ್ಷ್ಮಿ ಖುಷಿಯಿಂದ ಒಳಗೆ ಬರುತ್ತಾಳೆ…ನಿಮ್ಮ ಮನೆಯಲ್ಲಿ ತಪ್ಪದೆ ಈ ನಿಯಮ ಪಾಲಿಸಿ ನೋಡಿ

ಮನೆಯ ಉತ್ತಮ ವಾತಾವರಣಕ್ಕೆ ಕೆಲವು ಸಲಹೆಗಳು||
ಮನೆಯಲ್ಲಿರುವಂತ ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ಮನೆಯ ಅಭಿವೃದ್ಧಿಗಾಗಿ ಹಾಗೂ ಮನೆಯ ಏಳಿಗೆಗಾಗಿ ಹಲವಾರು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ ಅದೇ ರೀತಿಯಾಗಿ ಮನೆಯಲ್ಲಿ ಏನಾದರೂ ಸಂಕಷ್ಟ ತೊಂದರೆ ಎದುರಾದರೆ ಅವೆಲ್ಲವನ್ನು ಹೇಗೆ ದೂರ ಮಾಡಿಕೊಳ್ಳುವುದು ಅವುಗಳನ್ನು ಯಾವ ಪೂಜೆ ಮಾಡುವುದರಿಂದ ಸರಿಪಡಿಸಿಕೊಳ್ಳಬಹುದು ಎನ್ನುವಂತಹ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ.

WhatsApp Group Join Now
Telegram Group Join Now

ಹಾಗೂ ದೇವಸ್ಥಾನಗಳಿಗೆ ಹೋಗಿ ದೇವರ ಬಳಿ ಹಲವಾರು ಪೂಜೆಗಳನ್ನು ಮಾಡಿಸುವುದರ ಮುಖಾಂತರ ಕೆಲವೊಂದು ಶಾಸ್ತ್ರಗಳನ್ನು ಕೇಳುವುದರ ಮುಖಾಂತರ ಮನೆಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ ಆದರೆ ಕೆಲವೊಬ್ಬರು ತಮ್ಮ ಮನೆಗಳಲ್ಲಿ ಮಾಡುವಂತಹ ತಪ್ಪುಗಳಿಂದ ಈ ರೀತಿಯಾದಂತಹ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ ಆದ್ದರಿಂದ ಮನೆಯ ಒಳಗಡೆ ಅಂದರೆ ಮನೆಯಲ್ಲಿ ಯಾವ ರೀತಿಯಾದಂತಹ ವಾತಾವರಣ ಇರಬೇಕು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ.


ಅದಕ್ಕೂ ಮುನ್ನ ಪ್ರತಿಯೊಬ್ಬರೂ ಕೂಡ ಬೆಳಗಿನ ಸಮಯ ಮನೆಯ ಮುಂಭಾಗಿಲನ್ನು ಸೂರ್ಯ ಉದಯಿಸುವುದಕ್ಕೂ ಮುನ್ನ ಸ್ವಚ್ಛ ಮಾಡಿ ರಂಗೋಲಿಯನ್ನು ಬಿಟ್ಟು ಹೊಸ್ತಿಲನ್ನು ಪೂಜೆ ಮಾಡಬೇಕು ಜೊತೆಗೆ ಮನೆಯ ಮುಂಭಾಗಿಲಿನಲ್ಲಿ ತುಳಸಿ ಕಟ್ಟೆಯನ್ನು ಇಟ್ಟು ಪೂಜೆಯನ್ನು ಮಾಡುವುದರಿಂದ ನಿಮ್ಮ ಮನೆಯ ಮುಖ್ಯದ್ವಾರದಲ್ಲಿಯೇ ತಾಯಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಎಂದೇ ಹೇಳಬಹುದು ಆದ್ದರಿಂದ ಪ್ರತಿಯೊಬ್ಬರೂ ಕೂಡ ಬಹಳ ಮುಖ್ಯವಾಗಿ ಮೊದಲನೆಯದು ಮನೆಯ ಮುಂಭಾಗದಲ್ಲಿ ತುಳಸಿ ಕಟ್ಟೆಯನ್ನು ಇಟ್ಟು ಪ್ರತಿನಿತ್ಯ ಪೂಜೆ ಮಾಡುವುದು ಮುಖ್ಯ.

See also  ಈ ಮರದ ಎಲೆ ಇಟ್ಕೊಂಡು ಹಣ ಕೇಳಿ ಕೊಟ್ಟ ಹಣ ವಾಪಸ್ ಬರುತ್ತೆ..

ಜೊತೆಗೆ ತುಳಸಿ ಕಟ್ಟೆ ಇಡುವುದರಿಂದ ನಿಮ್ಮ ಮನೆಗೆ ಪಾಸಿಟಿವ್ ಎನರ್ಜಿ ಅಂದರೆ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಜೊತೆಗೆ ಪ್ರತಿ ಬಾರಿ ನೀವು ನೆಲವನ್ನು ಒರೆಸುವಂತಹ ಸಮಯದಲ್ಲಿ ನೀರಿಗೆ ಅರಿಶಿನ ಅಥವಾ ಉಪ್ಪನ್ನು ಹಾಕಿ ಮನೆಯನ್ನು ಸ್ವಚ್ಛ ಮಾಡುವುದರಿಂದ ಮನೆಯಲ್ಲಿರುವಂತಹ ಎಲ್ಲ ದುಷ್ಟ ಶಕ್ತಿಗಳು ಅಂದರೆ ನೆಗೆಟಿವ್ ಎನರ್ಜಿ ದೂರವಾಗುತ್ತದೆ.

ಹಾಗೂ ವಾರಕ್ಕೆ ಒಮ್ಮೆಯಾದರೂ ಹಸುವಿನ ಗಂಜಲವನ್ನು ಮನೆಗೆ ತಂದು ಮಾವಿನ ಎಲೆಯನ್ನು ಗಂಜಲಕ್ಕೆ ಹಾಕಿ ಅದರಿಂದ ಮನೆಯ ಪ್ರತಿಯೊಂದು ಭಾಗಕ್ಕೂ ಕೂಡ ಹಸುವಿನ ಗಂಜಲವನ್ನು ಹಾಕುವುದರಿಂದ ನಿಮ್ಮ ಮನೆಯಲ್ಲಿ ವಾತಾವರಣ ಚೆನ್ನಾಗಿ ಇರುತ್ತದೆ ಜೊತೆಗೆ ಮನೆಯಲ್ಲಿ ದುಷ್ಟ ಶಕ್ತಿಗಳು ಇದ್ದರೂ ಕೂಡ ದೂರವಾಗುತ್ತದೆ.

ಜೊತೆಗೆ ಬಹಳ ಮುಖ್ಯವಾಗಿ ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ಕಾಲಿಗೆ ಗೆಜ್ಜೆಯನ್ನು ಹಾಕುವುದರಿಂದ ಮನೆಯ ವಾತಾವರಣ ಚೆನ್ನಾಗಿರುತ್ತದೆ ಎಂದು ಹೇಳಬಹುದು ತಾಯಿ ಮಹಾಲಕ್ಷ್ಮಿಗೆ ಗೆಜ್ಜೆಯನಾದ ಎಂದರೆ ತುಂಬಾ ಇಷ್ಟ ಆದ್ದರಿಂದ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಕಾಲಿಗೆ ಗೆಜ್ಜೆಯನ್ನು ಧರಿಸುವುದು ಬಹಳ ಮುಖ್ಯವಾಗಿರುತ್ತದೆ ಹಾಗೂ ಮಂಗಳವಾರ ಶುಕ್ರವಾರದ ದಿನ ತಾಯಿ ಲಕ್ಷ್ಮಿ ದೇವಿ ಹಾಗೂ ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಮನೆಯ ವಾತಾವರಣ ಚೆನ್ನಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">