ದೇವರಮನೆಯಲ್ಲಿ ಬೆಂಕಿಪೊಟ್ಟಣ ಇಟ್ಟಿದ್ದೀರಾ ಹಾಗಾದರೆ ಮೊದಲು ಈ ವಿಷಯ ತಿಳಿಯಿರಿ..ಸರಿನಾ ತಪ್ಪಾ ? - Karnataka's Best News Portal

ದೇವರ ಮನೆಯಲ್ಲಿ ಬೆಂಕಿ ಪೊಟ್ಟಣ ಇಡುತ್ತೀರಾ ಹಾಗಾದರೆ ಇದನ್ನು ನೋಡಿ…!!ಹೆಚ್ಚಿನ ಹಿಂದೂ ಮನೆಗಳಲ್ಲಿ ದೇವರ ಕೋಣೆ ಇದ್ದೇ ಇರುತ್ತದೆ ಹಾಗೂ ಅಲ್ಲಿ ನಿಯಮಿತವಾದ ಪೂಜೆಗಳು ಕೂಡ ನಡೆಯುತ್ತಿರುತ್ತದೆ ವಾಸ್ತವವಾಗಿ ಪೂಜಾ ಸ್ಥಳವು ಮನೆಯಲ್ಲಿ ದೈವಿಶಕ್ತಿ ನೆಲೆಸಿರುವ ಸ್ಥಳ ಮನೆಯಲ್ಲಿ ಧನಾತ್ಮಕ ಶಕ್ತಿಯು ಪರಿಚಲನೆ ಗೊಳ್ಳುವ ಸ್ಥಳ. ಆದ್ದರಿಂದ ವಾಸ್ತು ಪ್ರಕಾರ ಪೂಜಾ ಕೋಣೆಯು ನಿಮ್ಮ ಮನೆಯಲ್ಲಿ.

ಧನಾತ್ಮಕ ಶಕ್ತಿಯನ್ನು ಉತ್ತಮ ರೀತಿಯಲ್ಲಿ ರವಾನಿಸುವಂತೆ ಇರಬೇಕು. ಕೆಲವೊಮ್ಮೆ ಪೂಜಾ ಕೋಣೆ ಸರಿಯಾದ ಸ್ಥಳದಲ್ಲಿ ಇಲ್ಲದೆ ಇರುವುದರ ಕಾರಣ ಕೆಲವೊಮ್ಮೆ ಪೂಜೆಯ ಮಂಗಳಕರ ಫಲಿತಾಂಶವನ್ನು ಪಡೆಯುವುದಕ್ಕೆ ಆಗುವುದಿಲ್ಲ ಆದ್ದರಿಂದ ಪೂಜಾ ಕೋಣೆಯನ್ನು ನಿರ್ಮಿಸುವಾಗ ನೀವು ಕೆಲವೊಂದಷ್ಟು ವಿಷಯಗಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕಾಗಿರುತ್ತದೆ ನಿಮ್ಮ ಮನೆಯಲ್ಲಿ ಪೂಜೆಯ ಮನೆ ಇದ್ದರೆ ಅದನ್ನು ವಾಸ್ತುವಿನ ನಿಯಮಗಳಿಂದ ಸರಿಪಡಿಸುವುದರ ಮೂಲಕ.


ನೀವು ಧನಾತ್ಮಕ ಶಕ್ತಿಯನ್ನು ಸಂವಹನ ಆಗುವಂತೆ ಸರಿಪಡಿಸಬಹುದು. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ದೇವಸ್ಥಾನ ಎಲ್ಲಿರಬೇಕು ಮತ್ತು ಅದರ ನಿಯಮಗಳು ಹೇಗಿರಬೇಕು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯುತ್ತಾ ಹೋಗೋಣ. ಮನೆಯಲ್ಲಿ ಪೂಜೆ ಮಾಡುವಂತಹ ಕೋಣೆ ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ಇರಬೇಕು ಉತ್ತರ ಮತ್ತು ಪೂರ್ವ ದಿಕ್ಕನ್ನು ಈಶಾನ್ಯ ದಿಕ್ಕು ಎಂದು ಕರೆಯುತ್ತಾರೆ.

ಮತ್ತು ಈ ದಿಕ್ಕಿನಲ್ಲಿ ಶಕ್ತಿಯ ಸಂಗ್ರಹವಿರುತ್ತದೆ ಈಶಾನ್ಯ ದಿಕ್ಕನ್ನು ದೇವರ ದಿಕ್ಕು ಎಂದು ಕೂಡ ಕರೆಯುತ್ತಾರೆ ಆದ್ದರಿಂದ ದೇವತೆಗಳ ಮನೆ ಅಂದರೆ ನಿಮ್ಮ ಮನೆಯ ದೇವಸ್ಥಾನವು ಈ ದಿಕ್ಕಿನಲ್ಲಿ ಇರಬೇಕು. ಈಶಾನ್ಯ ದಿಕ್ಕಿನಲ್ಲಿ ದೇವರ ಕೋಣೆಯನ್ನು ನಿರ್ಮಿಸುವುದಕ್ಕೆ ಸಾಧ್ಯವಾಗದೆ ಇದ್ದರೆ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ದೇವಾಲಯ ವನ್ನು ನಿರ್ಮಿಸಬಹುದು. ಮನೆಯನ್ನು ನಿರ್ಮಿಸುವಾಗ ಪೂಜಾ ಕೋಣೆಯ ದಿಕ್ಕು ಮಾತ್ರವಲ್ಲದೆ.

ನಾವು ಮುಖ ಮಾಡುವ ದಿಕ್ಕಿನ ಬಗ್ಗೆಯೂ ಕೂಡ ಕಾಳಜಿಯನ್ನು ವಹಿಸಬೇಕು ಯಾವುದೇ ದೇವರ ವಿಗ್ರಹ ಅಥವಾ ಪೂಜೆ ಮಾಡುವಾಗ ನಿಮ್ಮ ಮುಖವು ಪೂರ್ವದ ಕಡೆಗೆ ಇರಬೇಕು ನೀವು ಪೂರ್ವದಿಕ್ಕನ್ನು ನೋಡುವುದಕ್ಕೆ ಸಾಧ್ಯವಾಗದೇ ಇದ್ದರೆ ಪಶ್ಚಿಮ ದಿಕ್ಕನ್ನು ಸಹ ಮಂಗಳಕರ ಎಂದು ಪರಿಗಣಿಸಲಾಗುತ್ತದೆ ಈ ಎರಡು ದಿಕ್ಕುಗಳಲ್ಲಿ ಪೂಜೆ ಮಾಡುವುದು ವಾಸ್ತು ಪ್ರಕಾರ ತುಂಬಾ ಸೂಕ್ತ ಎಂದು ಪರಿಗಣಿಸಲಾಗಿದೆ.

ಮನೆಯಲ್ಲಿ ಪೂಜಾ ಕೋಣೆಯನ್ನು ನಿರ್ಮಿಸುವಾಗ ಅದು ಅಡುಗೆ ಮನೆ ಬಳಿ ಅಥವಾ ಸ್ನಾನ ಗೃಹದ ಬಳಿ ನಿರ್ಮಿಸಬಾರದು ಎನ್ನುವುದನ್ನು ನೀವು ತಿಳಿದುಕೊಂಡಿರಬೇಕು ಇದು ಸಂಭವಿಸಿದ್ದಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಅನುಕೂಲಕರ ಎಂದು ಪರಿಗಣಿಸಲಾಗುವುದಿಲ್ಲ ಹಾಗೆಯೇ ಮಲಗುವ ಕೋಣೆಯಲ್ಲಿ ಪೂಜಾ ಕೋಣೆಯನ್ನು ಹೊಂದಿರುವುದು ಅನುಕೂಲಕರವಲ್ಲ ಇದು ಕುಟುಂಬದ ಮೇಲೆ ಸಾಕಷ್ಟು ತೊಂದರೆ ಗಳನ್ನು ಬೀರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *