ಹೆಣ್ಣಿನ ಮುಟ್ಟು ಅದೆಷ್ಟು ಶ್ರೇಷ್ಠ ಗೊತ್ತಾ ಮುಟ್ಟಿನ ರಕ್ತದಲ್ಲಿರೋ ಆ ಶಕ್ತಿ ಎಂಥದ್ದು ಗೊತ್ತಾ ಮುಟ್ಟಿನ ಬಗ್ಗೆ ಶ್ರೀ ಕೃಷ್ಣ ಹೇಳಿದ ಆ ಮಾತೇನು? - Karnataka's Best News Portal

ಹೆಣ್ಣಿನ ಮುಟ್ಟು ಅದೆಷ್ಟು ಶ್ರೇಷ್ಠ ಗೊತ್ತಾ ಮುಟ್ಟಿನ ರಕ್ತದಲ್ಲಿರೋ ಆ ಶಕ್ತಿ ಎಂಥದ್ದು ಗೊತ್ತಾ ಮುಟ್ಟಿನ ಬಗ್ಗೆ ಶ್ರೀ ಕೃಷ್ಣ ಹೇಳಿದ ಆ ಮಾತೇನು?

ಹೆಣ್ಣಿನ ಮುಟ್ಟು ಅದೆಷ್ಟು ಶ್ರೇಷ್ಠ ಗೊತ್ತಾ|ಮೂಢನಂಬಿಕೆ ಬಿಡಿ ಹೆಣ್ಣನ್ನು ಗೌರವಿಸಿ||ಇಡೀ ಸುಷ್ಠಿಯ ಮೂಲವೇ ಹೆಣ್ಣು ಎನ್ನುತ್ತದೆ ಪುರಾಣ ಹಾಗೂ ಈ ಭೂಮಿಯನ್ನು ಹೆಣ್ಣಿಗೆ ಹೋಲಿಸಲಾಗಿದೆ ಏಕೆಂದರೆ ಇಲ್ಲಿ ಪ್ರೀತಿ ಇದೆ ಕರುಣೆ ವಾತ್ಸಲ್ಯಗಳ ಆಧರವೇ ಇದೆ ಹಾಗೂ ಮನಸ್ಸುಗಳ ಆಲಿಂಗನವಿದೆ ಹೆಣ್ಣು ಮಾಯೆ ಎಂದು ಹೇಳುತ್ತಾರೆ ಭಾರತೀಯ ಸಂಸ್ಕೃತಿ ಅತಿ ಎತ್ತರದ ಸ್ಥಾನದಲ್ಲಿ ಹೆಣ್ಣನ್ನು ಬಿಂಬಿಸಿದೆ.

WhatsApp Group Join Now
Telegram Group Join Now

ಹಾಗೂ ಪೂಜನೀಯ ಭಾವದಲ್ಲಿ ಪೂಜಿಸಿದೆ ಒಬ್ಬ ಮಹಿಳೆ ಕೇವಲ ಸೇವೆ ಮಾಡುವ ದಾಸಿಯಲ್ಲ ಆದರೂ ಆಕೆ ತನ್ನ ಮನೆ ಗಂಡ ಮಕ್ಕಳು ಅಂತ ಸಂಬಳವಿಲ್ಲದೆ ದುಡಿಯುತ್ತಾಳೆ ಅವಳ ಪ್ರಪಂಚ ಅಷ್ಟಕ್ಕೆ ಸೀಮಿತವಾಗಿರುತ್ತಿತ್ತು ಇವತ್ತಿಗೂ ಎಷ್ಟೋ ಮಹಿಳೆಯರು ಹೆಣ್ಣು ಮಕ್ಕಳು ಅಡುಗೆ ಮನೆಯಲ್ಲಿಯೇ ಪ್ರಪಂಚವನ್ನು ಕಾಣುತ್ತಿದ್ದಾರೆ ಇನ್ನು ಆಚಾರ ವಿಚಾರಗಳಿಗೆ ಕಟ್ಟುಬಿದ್ದು ಅದೆಷ್ಟೋ ಆಕಾಂಕ್ಷೆಗಳನ್ನು ಬರಿದು ಮಾಡಿಕೊಳ್ಳುತ್ತಿದ್ದಾರೆ.


ಗೊಡ್ಡು ಸಂಪ್ರದಾಯದ ಹೆಸರಿನಲ್ಲಿ ಸ್ತ್ರೀಯರ ಹಕ್ಕು ಚ್ಯುತಿ ಮಾಡಲಾಗುತ್ತದೆ ಹಾಗೆಂದ ಮಾತ್ರಕ್ಕೆ ಎಲ್ಲಾ ಮಹಿಳೆಯರು ಬದಲಾಗಿದ್ದಾರೆ ಎಂದಲ್ಲ ತಾಯಿ ತಂಗಿ ಹೆಂಡತಿಯ ಪಾತ್ರದಲ್ಲಿ ಎಲ್ಲರ ಬದುಕಿನಲ್ಲಿ ಬೆರೆತು ಹೋಗಿದ್ದಾರೆ ಆದರೆ ಪ್ರತಿಯೊಬ್ಬ ಮಹಿಳೆಯರು ಸಂಸಾರದ ಬದುಕಿಗೆ ಸಂತೋಷಕ್ಕೆ ಶ್ರಮಿಸುತ್ತಾರೆ ಪುರುಷ ಮನೆಯ ಹೊರಗಡೆ ದುಡಿದರೆ ಮಹಿಳೆ ಮನೆಯ ಒಳಗಡೆ ನಾಲ್ಕು ಗೋಡೆಯ ಮಧ್ಯೆಯೇ ಸುಂದರವಾದಂತಹ ಬದುಕನ್ನು ತನ್ನವರಿಗೋಸ್ಕರ ಕಟ್ಟುತ್ತಾಳೆ.

ಅಲ್ಲಿ ನಾನು ನನ್ನದು ಎನ್ನುವ ಸ್ವಾರ್ಥವಿಲ್ಲ ಬದಲಿಗೆ ಎಲ್ಲರೂ ನನ್ನವರು ಎನ್ನುವ ಭಾವ ಇರುತ್ತದೆ ಒಬ್ಬ ಗಂಡಿನ ಯಶಸ್ಸಿನ ಹಿಂದೆ ಹೆಣ್ಣಿನ ಪಾತ್ರ ಅಗಾಧ ಆ ಯಶಸ್ಸನ್ನು ಕೂಡ ಮರೆಯಲ್ಲಿಯೇ ನಿಂತು ಖುಷಿ ಪಡುತ್ತಾಳೆ ಸಣ್ಣ ಮಕ್ಕಳಿಂದ ಅಮ್ಮನಾಗಿ ಬೆಳೆಯುತ್ತಾ ಸಹೋದರಿ ಯಾಗಿ ಯೌವ್ವನಾವಸ್ತೆಯಲ್ಲಿ ಜೊತೆಗಾರ್ತಿಯಾಗಿ ಮದುವೆಯ ನಂತರ ಮಡದಿಯಾಗಿ ವೃದ್ಧಾಪ್ಯದಲ್ಲಿ ಆಸರೆಯಾಗಿ.

See also  ಲಕ್ಷ್ಮಿ ನಿವಾಸ ಜಯಂತ್ ನಿಜವಾಗಿಯೂ ಹೀರೋನಾ ? ಅಥವಾ ವಿಲನ್ ಆ..ಇಲ್ಲಿದೆ ನೋಡಿ ಕ್ಲೂ..ಹೇಗಿದ್ದವರು ಹೇಗಾದ್ರೂ..

ಕೊನೆಗೊಮ್ಮೆ ಉಸಿರಲ್ಲಿ ಉಸಿರಾಗಿ ಬೆರೆತು ಹೋಗುತ್ತಾಳೆ ಹೆಣ್ಣು ಇವತ್ತಿಗೂ ಕೂಡ ಹಳ್ಳಿ ಪ್ರದೇಶಗಳತ್ತ ಕಣ್ಣಾಯಿಸಿದರೆ ಮಹಿಳೆಗೆ ಸಿಗಬೇಕಾದ ಕನಿಷ್ಠ ಗೌರವವು ಕೂಡ ಸಿಗದೇ ಇರುವುದು ಬಹಳ ವಿಪರ್ಯಾಸ.ಇನ್ನು ಮಹಿಳೆ ಎಷ್ಟೇ ಸಾಧನೆ ಮಾಡಿದರು ಎಷ್ಟೇ ಆರ್ಥಿಕವಾಗಿ ರಾಜಕೀಯ ಹಾಗೂ ಸಾಮಾಜಿಕವಾಗಿ ಮುಂದೆ ಇದ್ದರೂ ಕೂಡ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬದುಕುವುದು ಇಂದಿಗೂ ಸಂಕೋಚವೇ.

ಬದುಕು ಮಹಿಳೆಗೆ ಎಲ್ಲವನ್ನು ಸಂಭಾಳಿಸುವ ಜಾಣ್ಮೆಯನ್ನು ಹೇಗೆ ಕೊಟ್ಟಿದೆಯೋ ಅದೇ ರೀತಿ ಅನಾದಿಕಾಲದಿಂದಲೂ ಕೂಡ ಮಹಿಳೆಗೆ ಅಪಾರವಾದ ತಾಳ್ಮೆಯನ್ನು ನೀಡಿದೆ ಅವಳೇ ಈ ಪ್ರಕೃತಿ ಎಲ್ಲವನ್ನು ಸಹಿಸುವವಳೇ ಆ ತಾಯಿ. ಮಹಿಳೆ ಅಬಲೆಯಲ್ಲ ಆಕೆ ಸಬಲೆ ಎಂದು ಹೇಳುವುದು ಸುಲಭ ಎಷ್ಟರ ಮಟ್ಟಿಗೆ ಇಡಿ ಸ್ತ್ರೀ ವರ್ಗ ಸಬಲೆಯಾಗಿ ದ್ದಾರೆ ಎನ್ನುವುದನ್ನು ಚಿಂತನೆ ಮಾಡಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">