ಕಾರ್ಖಾನೆಯಲ್ಲಿ ಅಡುಗೆ ಎಣ್ಣೆ ಹೇಗೆ ತಯಾರು ಮಾಡುತ್ತಾರೆ ಗೊತ್ತಾ ? ನೀವು ತಿಳಿಯದ ಟ್ರಿಕ್ಸ್ ಬಳಸ್ತಾರೆ ನೋಡಿ » Karnataka's Best News Portal

ಕಾರ್ಖಾನೆಯಲ್ಲಿ ಅಡುಗೆ ಎಣ್ಣೆ ಹೇಗೆ ತಯಾರು ಮಾಡುತ್ತಾರೆ ಗೊತ್ತಾ ? ನೀವು ತಿಳಿಯದ ಟ್ರಿಕ್ಸ್ ಬಳಸ್ತಾರೆ ನೋಡಿ

ಕಾರ್ಖಾನೆಯಲ್ಲಿ ಅಡುಗೆ ಎಣ್ಣೆ ಹೇಗೆ ಮಾಡುತ್ತಾರೆ… ನೋಡಿ ಕಾರ್ಖಾನೆ ಸಂಪೂರ್ಣ ಚಿತ್ರಣ ಕನಸಿನಲ್ಲೂ ಎಣ್ಣೆ ತಿನ್ನೋದಿಲ್ಲ….!!ಸಮೋಸ ಪೂರಿ ಪಕೋಡ ದೋಸೆ ಚಪಾತಿ ಯಾವುದೇ ಅಡುಗೆಯಾ ಗಲಿ ಸನ್ ಫ್ಲವರ್ ರಿಫೈಂಡ್ ಆಯಿಲ್ ಇರದೇ ಅಡುಗೆ ಪೂರ್ತಿಯಾಗುವುದಿಲ್ಲ ಸನ್ ಫ್ಲವರ್ ರಿಫೈಂಡ್ ಆಯಿಲ್ ಬಗ್ಗೆ ನಿಮಗೆಲ್ಲರಿಗೂ ಗೊತ್ತು ಆದರೆ ಫ್ಯಾಕ್ಟರಿಯಲ್ಲಿ ಈ ಸನ್ ಫ್ಲವರ್ ರಿಫೈಂಡ್ ಆಯಿಲ್ ಹೇಗೆ ಮಾಡುತ್ತಾರೆ.

WhatsApp Group Join Now
Telegram Group Join Now

ಈ ಎಣ್ಣೆಯನ್ನು ಮಾಡುವುದಕ್ಕೆ ಏನೇನು ಹಾಕುತ್ತಾರೆ ಈ ಎಲ್ಲಾ ಪ್ರಶ್ನೆಗೂ ಉತ್ತರ ಈ ಕೆಳಗಿನಂತೆ ತಿಳಿಯೋಣ ಹಾಗಾದರೆ ಈ ದಿನ ಸನ್ ಫ್ಲವರ್ ಎಣ್ಣೆಯನ್ನು ಹೇಗೆ ತಯಾರಿಸುತ್ತಾರೆ ಹಾಗೂ ಇದನ್ನು ಸೇವನೆ ಮಾಡುವುದರಿಂದ ಯಾವುದೆಲ್ಲ ಅಡ್ಡ ಪರಿಣಾಮಗಳು ಉಂಟಾಗುತ್ತದೆ ಎಂದು ನೋಡುವುದಾದರೆ. ಸೂರ್ಯಕಾಂತಿ ಅಡುಗೆ ಎಣ್ಣೆಯನ್ನು ತಯಾರಿಸುವುದಕ್ಕೆ ಮೊದಲನೆಯದಾಗಿ ಬೇಕಾಗಿರುವುದು ಸೂರ್ಯಕಾಂತಿ ಹೂವಿನ ಬೀಜ.


ಸೂರ್ಯಕಾಂತಿ ಹೂವು ಸಂಪೂರ್ಣವಾಗಿ ಒಣಗಿದ ನಂತರ ಅದರಿಂದ ಬೀಜವನ್ನು ತೆಗೆಯುತ್ತಾರೆ ಈ ವಿಧಾನವನ್ನು ಕಲ್ಟಿಂಗ್ ಹಾರ್ವೆಸ್ಟಿಂಗ್ ಎಂದು ಕರೆಯುತ್ತಾರೆ. ಈ ಒಂದು ಕಟಿಂಗ್ ಹಾರ್ವೆಸ್ಟಿಂಗ್ ಮಿಷನ್ ಸೂರ್ಯಕಾಂತಿ ಹೂವಿನಲ್ಲಿರುವಂತಹ ಬೀಜವನ್ನು ತೆಗೆದು ಲಾರಿಯಲ್ಲಿ ತುಂಬಿಸುತ್ತದೆ ಹೀಗೆ ಸೂರ್ಯಕಾಂತಿ ಬೀಜವನ್ನು ಫ್ಯಾಕ್ಟರಿಯಲ್ಲಿ ತಂದು ಫಿಲ್ಟರೇಶನ್ ಮತ್ತು ಸೆಪರೇಷನ್ ಮಾಡುತ್ತಾರೆ. ಗುಣಮಟ್ಟ ಇರುವಂತಹ ಬೀಜವನ್ನು ಮುಂದಿನ ಹಂತಕ್ಕೆ ಕಳುಹಿಸಲಾಗುತ್ತದೆ.

ಹಾಗೂ ಗುಣಮಟ್ಟ ಇಲ್ಲದೆ ಇರುವಂತಹ ಬೀಜವನ್ನು ವೇಸ್ಟೇಜ್ ಗೆ ಕಳುಹಿಸಲಾಗುತ್ತದೆ. ಗುಣಮಟ್ಟ ಇರುವಂತ ಸೂರ್ಯಕಾಂತಿ ಬೀಜವನ್ನು ಎರಡು ಗಂಟೆಗಳ ಕಾಲ -10 ಡಿಗ್ರಿ ಸೆಲ್ಸಿಯಸ್ ನಲ್ಲಿ ರೋಲಿಂಗ್ ಮಾಡುತ್ತಾರೆ. ಈ ರೋಲಿಂಗ್ ಮಾಡುವಂತಹ ಮಿಷಿನ್ ಅನ್ನು ಕೋಲ್ಡ್ ಬೌನ್ಸರ್ಸ್ ಎಂದು ಕರೆಯುತ್ತಾರೆ ಈ ವಿಧಾನವನ್ನು ಅನುಸರಿಸುವುದರಿಂದ ಸೂರ್ಯಕಾಂತಿ ಬೀಜ ಹೆಚ್ಚು ಎಣ್ಣೆಯನ್ನು ಕೊಡುತ್ತದೆ.

See also  ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..

ರೋಲಿಂಗ್ ಪ್ರಕ್ರಿಯೆ ಮುಗಿದ ಬಳಿಕ ಹಾಟ್ ವಾಟರ್ ಸ್ಟೀಮ್ ಅಂಡ್ ಗ್ರೈಂಡಿಂಗ್ ಪ್ರಕ್ರಿಯೆ ಶುರುವಾಗುತ್ತದೆ ಸೂರ್ಯಕಾಂತಿ ಬೀಜವನ್ನು ಈ ಗ್ರೈಂಡಿಂಗ್ ಮಷೀನ್ ಬಿಸಿ ನೀರಿನ ಸಹಾಯದಿಂದ ಪ್ರೆಸ್ಸಿಂಗ್ ಅಂಡ್ ಕಟ್ಟಿಂಗ್ ಮಾಡುತ್ತಾ ಎಣ್ಣೆ ಹೊರಗೆ ತೆಗೆಯುತ್ತದೆ. ಈಗ ಸೂರ್ಯಕಾಂತಿ ಎಣ್ಣೆ ಹೊರಗೆ ಬರುತ್ತದೆ ಹಾಗಂತ ಎಣ್ಣೆ ತೆಗೆಯುವಂತಹ ಪ್ರಕ್ರಿಯೆ ಮುಗಿಯಿತು ಎಂದು ಕೊಳ್ಳಬೇಡಿ. ನಿಜವಾದ ಅಸಲಿ ಆಟ ಇಲ್ಲಿಂದ ಪ್ರಾರಂಭವಾಗುತ್ತದೆ.

ಹೀಗೆ ಸೂರ್ಯಕಾಂತಿ ಬೀಜದಿಂದ ಬಂದಂತಹ ಎಣ್ಣೆಯನ್ನು 300 ಡಿಗ್ರಿ ಸೆಲ್ಸಿಯಸ್ ನಲ್ಲಿ ಎಂಟು ಗಂಟೆಗಳ ಕಾಲ ಕುದಿಸಲಾಗುತ್ತದೆ ಹೀಗೆ ಮಾಡುವುದರಿಂದ ಎಣ್ಣೆಯಲ್ಲಿರುವಂತಹ ಅಸಿಡಿಟಿ ಅಂಶ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ ಇದಾದ ನಂತರ ಸೂರ್ಯಕಾಂತಿ ಎಣ್ಣೆಗೆ ಫುಡ್ ಗ್ರೇಡ್ ಕಲರ್ ಬೆರೆಸಲಾಗುತ್ತದೆ ಒಂದು ಲೆಕ್ಕದ ಪ್ರಕಾರ 500 ಲೀಟರ್ ಎಣ್ಣೆಗೆ 15 ರಿಂದ 18 ಗ್ರಾo ಬಣ್ಣವನ್ನು ಹಾಕಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">