ನಿಮ್ಮ ಮನೆಯಲ್ಲಿ ಕೆಟ್ಟ ಶಕ್ತಿಗಳು ವಾಸ ಇದ್ದರೆ ನಿಮಗೆ ಸಿಗುತ್ತೆ ಈ 7 ಸೂಚನೆಗಳು ಯಾವು ಸೂಚನೆಗಳು ಅಂತ ನಿಮಗೆ ಗೊತ್ತಿದಿಯಾ? - Karnataka's Best News Portal

ನಿಮ್ಮ ಮನೆಯಲ್ಲಿ ಕೆಟ್ಟ ಶಕ್ತಿ ವಾಸವಾಗಿದ್ದರೆ ಈ 7 ಸೂಚನೆಗಳು ಸಿಗುತ್ತದೆ…!!ಈ ಜಗತ್ತನ್ನು ಕಣ್ಣಿಗೆ ಕಾಣದೆ ಇರುವ ಸಕಾರಾತ್ಮಕ ಶಕ್ತಿ ಮುನ್ನಡೆಸುತ್ತಿದೆ ಎಂದು ನೀವು ನಂಬುವುದಾದರೆ ನಕಾರಾತ್ಮಕ ಶಕ್ತಿಗಳು ಕೂಡ ಇವೆ ಎನ್ನುವುದನ್ನು ನೀವು ಒಪ್ಪಿಕೊಳ್ಳಲೇಬೇಕು ನೆಗೆಟಿವ್ ಎನರ್ಜಿ ಅಂದ ತಕ್ಷಣ ಕೇವಲ ಭೂತ ಪ್ರೇತಗಳ ಕಾಟ ಎಂದು ಭಾವಿಸಬೇಕಾಗಿಲ್ಲ ಅಸೂಯೆ, ಪರನಿಂದೆ, ಸಿಟ್ಟು ಆಲಸ್ಯ ಮುಂತಾದ ವರ್ತನೆಗಳು ಕೂಡ.

ನಕಾರಾತ್ಮಕ ಶಕ್ತಿಗಳೇ ಇವು ನಮ್ಮ ಯಶಸ್ಸು ಹಾಗೂ ನೆಮ್ಮದಿಗೆ ಭಂಗ ತರ ಬಲ್ಲವೂ ಈ ನಕಾರಾತ್ಮಕ ಶಕ್ತಿಗಳು ನಮ್ಮ ಸುತ್ತಲಿನ ವಾತಾವರಣದ ಮೇಲು ಪ್ರಭಾವ ಬೀರಬಲ್ಲದು ಉದಾಹರಣೆಗೆ ನೀವು ಚಿಕ್ಕ ಪುಟ್ಟ ವಿಚಾರಗಳಿಗೂ ಕೂಡ ನಿಮ್ಮ ಕುಟುಂಬ ಸದಸ್ಯರ ಮೇಲೆ ಜಗಳವಾಡುತ್ತಾ ಇದ್ದರೆ ಎಲ್ಲರ ನೆಮ್ಮದಿ ಹಾಳಾಗುತ್ತದೆ.


ಇಂತಹ ನೆಗೆಟಿವ್ ವಾತಾವರಣ ಮನೆಯಲ್ಲಿ ಇದ್ದರೆ ಅದು ಉಳಿದವರ ಮನಸ್ಸಿನ ಮೇಲೆ ನಕಾರಾತ್ಮಕವಾದ ಪರಿಣಾಮವನ್ನು ಬೀರುತ್ತದೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇವೆ ಎನ್ನುವುದಾದರೆ ಕೆಲವು ಸೂಚನೆಗಳು ಸಿಗುತ್ತದೆ ಅದು ಯಾವುದೆಂದರೆ ಪದೇಪದೇ ಮನೆಯಲ್ಲಿರುವಂತಹ ಸದಸ್ಯರಿಗೆ ಅನಾರೋಗ್ಯದಲ್ಲಿ ಏನಾದರೂ ತೊಂದರೆ ಉಂಟಾಗುವುದು ಉದ್ಯೋಗ ಹಾಗು ಯಾವುದೇ ಶುಭ ಕಾರ್ಯಕ್ರಮಕ್ಕೆ ಅಡ್ಡಿ ಉಂಟಾಗುವುದು ಹಾಗೂ ಕೊನೆಯ ಹಂತದಲ್ಲಿ ಉತ್ತಮ ಅವಕಾಶಗಳು ಕೈತಪ್ಪಿ ಹೋಗುವುದು.

ಎಷ್ಟೇ ಪ್ರಯತ್ನ ಪಟ್ಟು ಕೆಲಸ ಮಾಡಿದರು ಕೂಡ ಹಿಡಿದ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗದೇ ಇರುವುದು, ಸದಾ ಆಲಸ್ಯ ಕಾಡುವುದು, ಯಾವುದೇ ಕೆಲಸ ಕಾರ್ಯಗಳಿಗೂ ಕೂಡ ಗಮನ ಕೇಂದ್ರೀಕರಿಸಲು ಸಾಧ್ಯವಾಗದೇ ಇರುವುದು ಹಾಗೂ ಯಾವುದೇ ಸಮಸ್ಯೆ ಎದುರಾದಾಗ ಅದನ್ನು ಸರಿಪಡಿಸಿಕೊಳ್ಳುವುದಕ್ಕೆ ಯೋಚಿಸಲು ಕೂಡ ಸಾಧ್ಯವಾಗದೇ ಇರುವುದು ಪದೇ ಪದೇ ನಕಾರಾತ್ಮಕ ಯೋಚನೆಗಳು ಬರುವುದು.

ಆತ್ಮಹತ್ಯೆ ಮಾಡಿಕೊಳ್ಳುವಂತಹ ಕೆಟ್ಟ ಆಲೋಚನೆಗಳು ಹೆಚ್ಚಾಗುವುದು ಕುಟುಂಬ ಸದಸ್ಯರ ನಡುವೆ ವಿನಾಕಾರಣ ಜಗಳ ಹುಟ್ಟಿಕೊಳ್ಳುವುದು ಮನೆಯಲ್ಲಿ ವಿಚಿತ್ರ ಘಟನೆಗಳು ನಡೆಯುವುದು ಅಥವಾ ಅನುಭವವಾಗುವುದು ದೀಪವು ಅಂಧಕಾರವನ್ನು ತೊಡೆದು ಹಾಕುವಂತಹ ಸಾಮರ್ಥ್ಯವನ್ನು ಹೊಂದಿದೆ ಅಷ್ಟು ಮಾತ್ರವಲ್ಲದೆ ಅದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವಂತಹ ಸಾಮರ್ಥ್ಯವನ್ನು ಸಹ ಹೊಂದಿದೆ ಆದರೆ ಪೂಜೆ ಮಾಡುವ ಸಮಯದಲ್ಲಿ ದೀಪ ಪದೇಪದೇ ಆರಿ ಹೋಗುತ್ತಿದ್ದರೆ.

ಅದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ ಬದಲಿಗೆ ಆ ಜಾಗದಲ್ಲಿ ಯಾವುದೋ ನಕಾರಾತ್ಮಕ ಶಕ್ತಿ ಅಡಗಿದೆ ಎನ್ನುವುದನ್ನು ಅದು ಸೂಚಿಸುತ್ತದೆ ಅಂತಹ ಸಮಯದಲ್ಲಿ ಆ ಜಾಗದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವಂತಹ ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಹಚ್ಚಿದಂತ ದೀಪ ಪದೇ ಪದೇ ಆರಿ ಹೋಗಬಾರದು ಇದನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *