ಬಜೆಟ್ 2023 ರಕ್ಷಣೆಗೆ ಆರು ಲಕ್ಷ ಕೋಟಿ ಅನ್ನಕ್ಕೆ ಎರಡು ಲಕ್ಷ ಕೋಟಿ ರೈತ ಮದ್ಯಮ ವರ್ಗಕ್ಕೆ ಬಜೆಟ್ ಕೊಟ್ಟಿದ್ದೇನು? - Karnataka's Best News Portal

ಬಜೆಟ್ 2023 ರಕ್ಷಣೆಗೆ ಆರು ಲಕ್ಷ ಕೋಟಿ ಅನ್ನಕ್ಕೆ ಎರಡು ಲಕ್ಷ ಕೋಟಿ ರೈತ ಮದ್ಯಮ ವರ್ಗಕ್ಕೆ ಬಜೆಟ್ ಕೊಟ್ಟಿದ್ದೇನು?

ಬಜೆಟ್ 2023….! ರಕ್ಷಣೆಗೆ 6 ಲಕ್ಷ ಕೋಟಿ… ಅನ್ನಕ್ಕೆ ಎರಡು ಲಕ್ಷ ಕೋಟಿ….! ರೈತ ಮಧ್ಯಮ ವರ್ಗಕ್ಕೆ ಬಜೆಟ್ ಕೊಟ್ಟಿದ್ದೇನು…..??2023ರ ಬಜೆಟ್ ಮಂಡನೆಯಾಗಿದೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 23 ಹಾಗೂ 24ರ ಆಯವ್ಯಯವನ್ನು ಮಂಡಿಸಿದ್ದು ಇದು 45 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಆಗಿದೆ ಜಾಗತಿಕ ಆರ್ಥಿಕ ಹಿಂಜರಿತ, ಚೈನಾ ವೈರಾಣುವಿನ ಕಾಟ ಹಾಗೂ.

ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ನಡುವೆಯೂ ಕೂಡ ಬಜೆಟ್ ಭಾರತದ ಬೆಳವಣಿಗೆಗೆ ಪೂರಕವಾಗಿದೆ ಎನ್ನುವ ಅಭಿಪ್ರಾಯ ಗಳು ಮೂಡಿ ಬರುತ್ತಿದೆ ಈ ಬಜೆಟ್ ನಲ್ಲಿ ಕೃಷಿ ರಕ್ಷಣೆ ಕೈಗಾರಿಕಾ ವಲಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆಯನ್ನು ಕೊಡಲಾಗಿದೆ ಹಾಗೆಯೇ ತೆರಿಗೆದಾರರಿಗೂ ಸಹ ಒಂದಷ್ಟು ವಿನಾಯಿತಿ ಸಿಕ್ಕಿದ್ದು ಇನ್ಕಮ್ ಟ್ಯಾಕ್ಸ್ ಅನ್ನು 5 ಸ್ಕ್ಲ್ಯಾಬ್ ಗಳಾಗಿ ಮಾಡಲಾಗಿದೆ.


ಹಾಗಾದರೆ ಈ ಬಜೆಟ್ ನ ಕಾರಣದಿಂದಾಗಿ ಯಾವುದೆಲ್ಲ ಪದಾರ್ಥಗಳ ಬೆಲೆಗಳು ಹೆಚ್ಚಾಗುತ್ತದೆ ಯಾವುದೆಲ್ಲ ಪದಾರ್ಥಗಳ ಬೆಲೆ ಕಡಿಮೆ ಯಾಗುತ್ತದೆ ಒಟ್ಟು ಬಜೆಟ್ ನಲ್ಲಿ ರಕ್ಷಣೆಗೆ ಸಿಕ್ಕಿರುವ ಪಾಲು ಎಷ್ಟು ಭಾರತ ಈ ಬಾರಿ ಮಾಡಬೇಕಾಗಿರುವ ಸಾಲದ ಮೊತ್ತ ಎಷ್ಟು ಎನ್ನುವುದರ ಬಗ್ಗೆಯೂ ಕೂಡ ಈ ದಿನ ಸಂಪೂರ್ಣವಾದಂತಹ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ.

23 ಹಾಗೂ 24ರ ಬಜೆಟ್ ಮಂಡನೆಯಾಗಿದ್ದು ಕಳೆದ ಬಾರಿಗಿಂತ ಈ ಬಾರಿ ಬಜೆಟ್ ನ ಗಾತ್ರ ಹೆಚ್ಚಾಗಿದೆ ರಕ್ಷಣಾ ವಲಯಕ್ಕೆ ಸ್ವಲ್ಪ ಪಾಲು ಸಿಕ್ಕಿದ್ದು ಕೃಷಿ ಸಣ್ಣ ಕೈಗಾರಿಕೆ ಜವಳಿ ಔಷಧಿ ವಲಯ ಆರೋಗ್ಯ ವಲಯಗಳಿಗೂ ಸಹ ಸಾಕಷ್ಟು ನೆರವು ಸಿಗುತ್ತಿದೆ. ಮೊದಲಿಗೆ ಜನಸಾಮಾನ್ಯರಿಗೆ ಬೇಕಾಗಿರುವ ಯಾವುದೆಲ್ಲ ವಸ್ತುಗಳ ಬೆಲೆ ಹೆಚ್ಚಾಗಿದೆ ಹಾಗೂ ಯಾವುದೆಲ್ಲ ವಸ್ತುಗಳ ಬೆಲೆ ಕಡಿಮೆಯಾಗಿದೆ ಎಂದು ನೋಡುವುದಾದರೆ.

See also  ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..

ಮೊಬೈಲ್ ನ ಬಿಡಿ ಭಾಗಗಳು, ಎಲೆಕ್ಟ್ರಿಕ್ ವಾಹನ, ಲಿಥಿಯಂ ಅಯಾನ್ ಬ್ಯಾಟರಿಗಳು, ಕ್ಯಾಮರಾದ ಲೆನ್ಸ್ ಗಳು, ಸೈಕಲ್, ಟಿವಿ, ಗ್ಲಿಸರಿನ್, ನೈಸರ್ಗಿಕ ಅನಿಲ, ದೇಶಿಯ ಸಮುದ್ರ ಆಹಾರ ಉತ್ಪನ್ನಗಳು ಅಂದರೆ ಮೀನು ಸೀಗಡಿ ಮುಂತಾದವುಗಳು, ಈಥೈಲ್ ಆಲ್ಕೋಹಾಲ್ ನಂತಹ ವಸ್ತುಗಳ ಬೆಲೆ ಇಳಿಕೆ ಆಗುತ್ತಾ ಇದೆ ಹಾಗೆಯೇ ಎಲೆಕ್ಟ್ರಿಕ್ ಚಿಮಣಿ ಚಿನ್ನ, ಬೆಳ್ಳಿ,ತಾಮ್ರ

ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳು ಬ್ರಾಂಡೆಡ್ ಬಟ್ಟೆಗಳು, ಪ್ರೈವೇಟ್ ಜೆಟ್, ಹೆಲಿಕಾಫ್ಟರ್, ಆಭರಣಗಳು, ಗ್ಲಾಸ್ ಪೇಪರ್ ವಸ್ತುಗಳ ಬೆಲೆ ಹೀಗೆ ಇನ್ನೂ ಹಲವಾರು ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ.ಇನ್ನು ಆದಾಯ ತೆರಿಗೆಯ ವಿಷಯಕ್ಕೆ ಬರುವುದಾದರೆ ಮೊದಲು ಎರಡುವರೆ ಲಕ್ಷ ಹಣದ ವರೆಗೆ ಯಾವುದೇ ರೀತಿಯ ತೆರಿಗೆ ವಿಧಿಸಿರಲಿಲ್ಲ ಆದರೆ ಈಗ ಮೂರು ಲಕ್ಷ ಮೇಲಿನ ಆದಾಯಕ್ಕೆ ತೆರಿಗೆಯನ್ನು ವಿಧಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">