ನೀವು ಬಯಸಿದ್ದೆಲ್ಲಾ ಸಿಗಬೇಕೆಂದರೆ ಈ ಮೂರು ಕೆಲಸವನ್ನು ತಪ್ಪದೇ ಮಾಡಬೇಕು.ಯಾರಿಗೂ ಹೇಳಬಾರದು - Karnataka's Best News Portal

ನೀವು ಬಯಸಿದ್ದೆಲ್ಲ ಸಿಗಬೇಕು ಎಂದರೆ ಈ ಮೂರು ಕೆಲಸಗಳನ್ನು ತಪ್ಪದೇ ಮಾಡಬೇಕು. ಕೆಲವೊಮ್ಮೆ ಪರಿಸ್ಥಿತಿಗೆ ತಕ್ಕಂತೆ ನಿಮಗೆ ಮಾತನಾಡುವುದಕ್ಕೆ ಆಗದಿದ್ದರೆ ನಗೆಯನ್ನು ಬೀರಿ ಸುಮ್ಮನಾಗುವುದು ಒಳ್ಳೆಯದು ಆದರೆ ಮನುಷ್ಯ ಬರುವಾಗ ಭಾಗ್ಯದ ಜೊತೆ ಬರುತ್ತಾನೆ ಹೋಗುವಾಗ ಕರ್ಮದ ಫಲವನ್ನು ಕರೆದುಕೊಂಡು ಹೋಗುತ್ತಾನೆ ದೇವರು ತಡ ಮಾಡಿದರು ಸಹ ನ್ಯಾಯವನ್ನೇ ಮಾಡುತ್ತಾನೆ ಹೊರತು ಅನ್ಯಾಯವನ್ನು ಎಂದಿಗೂ ಮಾಡುವುದಿಲ್ಲ ಒಳ್ಳೆಯವರಿಗೆ ಎಂದಿಗೂ ಒಳ್ಳೆಯದೇ ಆಗುತ್ತದೆ.

ತಡ ಆಗುವುದರ ಹಿಂದೆ ಅದ್ಭುತಗಳು ನಡೆಯುತ್ತದೆ ನಾವು ಅದನ್ನು ತಾಳ್ಮೆಯಿಂದ ಕಾದು ನೋಡಬೇಕು ಅಷ್ಟೇ. ನಿಮ್ಮ ಜೀವನದಲ್ಲಿ ನೀವು ಬಯಸಿದ್ದೆಲ್ಲ ನಿಮಗೆ ಸಿಗಬೇಕಾದರೆ ಈ ಮೂರು ಕೆಲಸಗಳನ್ನು ತಪ್ಪದೇ ನೀವು ಮಾಡಲೇಬೇಕಾಗುತ್ತದೆ. ಈ ಕೆಲಸಗಳನ್ನು ನೀವು ಮಾಡಿದ್ದೆ ಆದಲ್ಲಿ ನೀವು ಉನ್ನತ ಮಟ್ಟವನ್ನು ಸೇರುವುದು ಖಂಡಿತಾ. ಮೊದಲನೆಯದಾಗಿ ಬೆಳಿಗ್ಗೆ ಬೇಗ ಎದ್ದು ನಿಮ್ಮ ದಿನಚರಿಯನ್ನು ಶುರು ಮಾಡಬೇಕು ಹೀಗೆ ಮಾಡಿದ್ದೆ ಆದಲ್ಲಿ ನಿಮ್ಮ ದಿನ ತುಂಬಾ ಅದ್ಭುತವಾಗಿ ಇರಲು ಇದು ನಿಮಗೆ ಸಹಾಯ ಮಾಡುತ್ತದೆ.


ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ನಿಮ್ಮ ದಿನಚರಿಯನ್ನು ಆರಂಭಿಸಿದರೆ ನಿಮ್ಮ ಮನಸ್ಥಿತಿ ಶಾಂತವಾಗಿರುತ್ತದೆ. ಯಾರ ಕಿರಿ ಕಿರಿಯು ಇರುವುದಿಲ್ಲ ಪ್ರಶಾಂತವಾದ ವಾತಾವರಣದಲ್ಲಿ ಒಮ್ಮೆ ಶಾಂತಿಯಿಂದ ದೇವರಿಗೆ ಪ್ರಾರ್ಥಿಸಿ, ವ್ಯಾಯಾಮ ಮಾಡಿ ನಿತ್ಯ ಕರ್ಮಗಳನ್ನು ಮುಗಿಸಿ ನಿಮ್ಮ ಕೆಲಸವನ್ನು ಶುರು ಮಾಡಬೇಕು. ಎರಡನೆಯದು ಆಗಿ ಹೋಗಿರುವುದರ ಬಗ್ಗೆ ಎಂದಿಗೂ ಚಿಂತೆಯನ್ನು ಮಾಡಬಾರದು ಮುಂದೆ ಬರುವಂತಹ ಕೆಲಸಗಳ ಬಗ್ಗೆ ಯೋಚನೆ ಮಾಡಬೇಕು.

ಪ್ರತಿಯೊಬ್ಬರ ಜೀವನದಲ್ಲೂ ಕೆಲವು ಘಟನೆಗಳು ನಡೆದು ಹೋಗಿರುತ್ತದೆ ಆದ್ದರಿಂದ ಕೆಲವೊಂದು ಸಹಿಸಲು ಕಷ್ಟ ಕೂಡ ಆಗಿರುತ್ತದೆ ಆದರೆ ಅದು ಮುಂದಿನ ಒಳ್ಳೆಯದಕ್ಕೆ ಆಗಿರುತ್ತದೆ ಅನ್ನೋದನ್ನ ನಾವು ಎಂದಿಗೂ ಸಹ ಮರೆಯಬಾರದು. ಮೂರನೆಯದಾಗಿ ನಿಮ್ಮ ರಹಸ್ಯಗಳನ್ನು ಯಾರಿಗೂ ಸಹ ಹೇಳಬಾರದು ಅಥವಾ ಹಂಚಿಕೊಳ್ಳಬಾರದು ನಿಮ್ಮ ರಹಸ್ಯಗಳನ್ನು ಬೇರೆಯವರ ಹತ್ತಿರ ಹೇಳಿಕೊಂಡು ಸಹಾಯಕ್ಕಾಗಿ ಯಾರ ಹತ್ತಿರವೂ ಸಹ ನೀವು ಕೈ ಚಾಚ ಬೇಡಿ.

ಯಾಕೆಂದರೆ ಈ ಸಮಾಜದಲ್ಲಿ ನಿಮ್ಮ ಸಹಾಯಕ್ಕೆ ಯಾರು ಬರುವುದಿಲ್ಲ ಬದಲಾಗಿ ಕಾಲು ಎಳೆಯುವಂತಹ ಜನರೇ ಹೆಚ್ಚಾಗಿ ತುಂಬಿಕೊಂಡಿದ್ದಾರೆ ಈ ಪ್ರಪಂಚದಲ್ಲಿ ನಿನ್ನ ಆಸೆಗಳನ್ನು ಅವರು ಉಪಯೋಗಕ್ಕಾಗು ಬಳಸಿಕೊಂಡು ಅವರಿಗೆ ಲಾಭ ಮಾಡಿಕೊಳ್ಳುತ್ತಾರೆ. ಆದ್ದರಿಂದ ಯಾರ ಹತ್ತಿರವೂ ಸಹ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳಬೇಡಿ.

ಯಾರು ಯಾರನ್ನು ಉದ್ದಾರ ಮಾಡುವುದಕ್ಕೂ ಆಗುವುದಿಲ್ಲ ಹಾಗೆ ಯಾರು ಯಾರನ್ನು ಹಾಳು ಮಾಡಲು ಸಹ ಆಗುವುದಿಲ್ಲ ಈ ಜೀವನ ಇರುವುದೇ ಎರಡು ದಿನ ಒಂದು ನಿನ್ನ ಪರವಾದರೆ ಮತ್ತೊಂದು ನಿನ್ನ ವಿರುದ್ಧವಾಗಿರುತ್ತದೆ. ಪರವಾದ ದಿನದಲ್ಲಿ ಅಹಂಕಾರ ತೋರದೆ ವಿರುದ್ಧವಾದ ದಿನದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳದೆ ಜೀವನವನ್ನು ಸಮತೋಲನದಲ್ಲಿ ಇಟ್ಟುಕೊಂಡು ಸಾಗಿಸಬೇಕು.

Leave a Reply

Your email address will not be published. Required fields are marked *