ಪಾಕಿಸ್ತಾನ ದಿ ಎಂಡ್ ಮುಗಿಯುತ್ತ ಈ ದೇಶದ ಕಥೆ ಇಂಥ ಪರಿಸ್ಥಿತಿ ಯಾರಿಗೂ ಬೇಡ ಹೊಸ ಪಾಕಿಸ್ತಾನ ಕಟ್ಟುತ್ತೇವೆ ಅಂತ ದೇಶ ಮುಳುಗಿಸಿದ್ರಾ - Karnataka's Best News Portal

ಈ ಮೂರು ಕಾರಣಗಳಿಗೆ ನೋಡಿ ಪಾಕಿಸ್ತಾನ ಈ ಪರಿಸ್ಥಿತಿಗೆ ಬರಲು ಕಾರಣ.

ಪಾಕಿಸ್ತಾನದಲ್ಲಿ ಈಗ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ ಅಲ್ಲಿನ ಮಿನಿಸ್ಟರ್ ಪಾಕಿಸ್ತಾನದ ಜನತೆಗೆ ಟೀ ಸೇವನೆಯಲ್ಲಿ ಕಡಿತವನ್ನು ಮಾಡಲು ಮನವಿ ಮಾಡಿಕೊಂಡಿದ್ದಾರೆ ಪಾಕಿಸ್ತಾನಕ್ಕೆ ಈಗ ಟೀ ಇಂಪೋರ್ಟ್ ಮಾಡಲು ಹಾಗೂ ಇದುವರೆಗೂ ಆಮದು ಮಾಡಿಕೊಂಡಿರುವಂತಹ ಅದರ ಸಾಲವನ್ನು ತೀರಿಸಲು ಈಗ ಹಣ ಇಲ್ಲ ಹೀಗಾಗಿ ಕೆಲವು ತಿಂಗಳ ಹಿಂದೆ ಎರಡು ಕಪ್ ಚಹಾ ಬದಲಾಗಿ ಒಂದು ಕಪ್ ಚಹಾ ಸೇವಿಸಿ ಎಂದು ಸಲಹೆ ನೀಡಿದರು.

ಈಗ ಹಣದುಬ್ಬರದ ಸಮಸ್ಯೆ ವಿಪರೀತವಾಗಿದೆ ಜನ ದಿನ ಬಳಕೆಗೆ ವಸ್ತುಗಳನ್ನು ಕೊಂಡುಕೊಳ್ಳಲಾಗದೇ ಇತ್ತೀಚಿಗಷ್ಟೇ ಶೇಕಡ 30ರಷ್ಟು ಅಂಗಡಿ ರೆಸ್ಟೋರೆಂಟ್ ಹಾಗೂ ಇತರ ಶಾಪ್ಗಳ್ಳನ್ನು ವಿದ್ಯುತ್ ಅಭಾವದಿಂದ ಮುಚ್ಚಬೇಕಾದಂತಹ ಪರಿಸ್ಥಿತಿ ಒದಗಿತ್ತು. ಅಮೆರಿಕದ ವಾಷಿಂಗ್ಟನ್ ನಲ್ಲಿ ವೈಟ್ ಹೌಸ್ ನಲ್ಲಿ ಇರುವ ಪಾಕಿಸ್ತಾನದ ಎಂಬಾಸಿ ಕಚೇರಿಯನ್ನು ಸ್ವತಹ ಪಾಕಿಸ್ತಾನವೇ ಸಾರ್ವಜನಿಕ ಮಾರಾಟಕ್ಕೆ ಇಟ್ಟಿದೆ

ಅದರಿಂದ ಎಷ್ಟು ಹಣ ಬಂದರೆ ಜನರ ಸಹಾಯಕ್ಕೆ ಅದನ್ನು ಬಳಸಿಕೊಳ್ಳಬಹುದು ಎಂಬ ಉದ್ದೇಶದಿಂದ. ಪಾಕಿಸ್ತಾನದಲ್ಲಿ ಅನೇಕ ರೀತಿಯಾದಂತಹ ಸಮಸ್ಯೆಗಳು ಉಂಟಾಗುತ್ತಿದೆ. ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು 1947ರ ಆಗಸ್ಟ್ 14ನೇ ತಾರೀಕು ಆದರೆ ಅಲ್ಲಿಂದ ಇಲ್ಲಿಯವರೆಗೆ 29 ಜನ ಪ್ರಧಾನಿಗಳನ್ನು ಕಂಡಿದೆ ಇಷ್ಟು ಜನ ಪ್ರಧಾನಿಗಳಲ್ಲಿ ಯಾರೊಬ್ಬರೂ ಕೂಡ ಇದುವರೆಗೂ ಪೂರ್ಣ ಅವಧಿ ಅಂದರೆ ಅಧಿಕಾರದ ಐದು ವರ್ಷಗಳನ್ನು ಮುಗಿಸಿಲ್ಲ.

18ಕ್ಕೂ ಹೆಚ್ಚು ಸಲ ಅಲ್ಲಿ ನಾನಾ ಪ್ರಧಾನಿಗಳನ್ನು ಅವರನ್ನು ನಾನಾ ಕಾರಣಗಳಿಗೆ ಪದಚುತಿಗೊಳಿಸಲಾಗಿದೆ. ಪಾಕಿಸ್ತಾನ ಈಗ ಆರ್ಥಿಕವಾಗಿ ಕುಸಿಯುತ್ತಾ ಬಂದಿದೆ 2002ರಿಂದ ನಿರಂತರವಾಗಿ ಹಣದುಬ್ಬರದ ಸಮಸ್ಯೆ 23% ಅಷ್ಟು ಏರಿಕೆಯಾಗಿದೆ. ಪಾಕಿಸ್ತಾನದ ರಫ್ತಿನ ಪ್ರಮಾಣ 30 ಬಿಲಿಯನ್ ಡಾಲರ್ ಅಷ್ಟಿದೆ.

ಅಮೇರಿಕಾದ ಆಮದು 90 ಬಿಲಿಯನ್ ಡಾಲರ್ ಗು ಹೆಚ್ಚು ಅಂದರೆ ಪ್ರತಿ ವರ್ಷ ಪಾಕಿಸ್ತಾನ 30 ಬಿಲಿಯನ್ ಡಾಲರ್ ಗಳಿಸಿದರೆ ಅದಕ್ಕೆ ಪ್ರತಿಯಾಗಿ ಅದರ ಮೂರು ಪಟ್ಟು ಹೆಚ್ಚು ಅಂದರೆ 90 ಬಿಲಿಯನ್ ಡಾಲರ್ ಅಷ್ಟು ಹಣವನ್ನು ಖರ್ಚು ಮಾಡುತ್ತಿದೆ. ಈ ಅಗಾಧವಾದ ಅಂತರದಿಂದಾಗಿ ವಿದೇಶಿ ವಿನಿಮಯ ಸಿಕ್ಕಾಪಟ್ಟೆ ಏರಿಕೆಯಾಗುತ್ತಿದೆ ಇನ್ನು ಇದರ ಸಾಲದ ಹೊರೆ, 274 ಬಿಲಿಯನ್ ಡಾಲರ್ ಗಳು ಇದಕ್ಕೆ ಪ್ರತಿ ವರ್ಷ ಬಡ್ಡಿ ಏರಿಕೆ ಆಗುತ್ತದೆ

ಇದರಿಂದಾಗಿ ಪ್ರತಿ ವರ್ಷ ಬಜೆಟ್ ನ ಮೂರನೇ ಒಂದು ಭಾಗ ಅದರ ಸಾಲದಾರಿ ಪೇಮೆಂಟ್ ಗಾಗಿ ನೀಡಬೇಕಾಗುತ್ತದೆ. ಈಗ ಪಾಕಿಸ್ತಾನ ಸಾಲದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದೆ ಈ ಸಾಲವನ್ನು ತೀರಿಸಲು ಈಗ ಇರುವ ಏಕೈಕ ಸರಳತೆ ಇನ್ನಷ್ಟು ಸಾಲವನ್ನು ಪಡೆಯುವುದು ಒಂದೆ.

Leave a Reply

Your email address will not be published. Required fields are marked *