40 ವರ್ಷಕ್ಕೆ ಒಮ್ಮೆ ಕಾಣುವ ವಿಷ್ಣು ಪರಮಾತ್ಮ ಈಗಲೆ ನೋಡಿ ಇಲ್ಲವಾದರೆ ಮತ್ತೆ 40 ವರ್ಷ ಕಾಯಬೇಕು.. - Karnataka's Best News Portal

40ವರ್ಷಕ್ಕೆ ಒಮ್ಮೆ ಕಾಣುವ ವಿಷ್ಣು ಪರಮಾತ್ಮ ಈಗಲೇ ನೋಡಿ ಇಲ್ಲವಾದರೆ ಮತ್ತೆ 40 ವರ್ಷ ಕಾಯಬೇಕು.
ಈ ದೇವಸ್ಥಾನದಲ್ಲಿ ನೆಲೆಸಿರುವ ಅಂತಹ ವಿಷ್ಣು ದೇವರನ್ನು ವರದರಾಜ ಮತ್ತು ಹತ್ತಿರಾಜ ಎಂದು ಕರೆಯಲಾಗುತ್ತದೆ ಈ ದೇವಸ್ಥ ತಮಿಳುನಾಡು ರಾಜ್ಯದಲ್ಲಿರುವ ಕಾಂಚಿಪುರಂ ಊರಿನಲ್ಲಿ ಈ ಒಂದು ದೇವಸ್ಥಾನ ಇದೆ ಕಾಂಚಿಪುರಂ ಅನ್ನು ಕಂಚಿ ಎಂದು ಸಹ ಕರೆಯುತ್ತಾರೆ. ಈ ಒಂದು ವಿಷ್ಣು ಪರಮಾತ್ಮ 40 ವರ್ಷಗಳಿಗೆ ಒಮ್ಮೆ ದರ್ಶನವನ್ನು ಕೊಡುತ್ತಾರೆ.

ಕಾಂಚಿಪುರಂ ಸುತ್ತಮುತ್ತ ಹತ್ತಿ ಮರಗಳು ಅತಿ ಹೆಚ್ಚು ಕಂಡುಬರುತ್ತದೆ ವಿಷ್ಣು ದೇವರು ವರದರಾಜ ಹಾಗೆ ಶಿಲೆಯಾಗಿ ಬದಲಾದಾಗ ಹತ್ತಿ ಮರಗಳು ಊರಿನ ತುಂಬಾ ಬೆಳೆಯಲು ಶುರು ಮಾಡಿದವು. ಇಲ್ಲಿಗೆ ಬರುವ ಭಕ್ತರು ಈ ಹತ್ತಿ ಹಣ್ಣನ್ನು ಪ್ರಸಾದವಾಗಿ ಸೇವಿಸುತ್ತಾರೆ ಹಾಗಾಗಿ ವಿಷ್ಣು ದೇವರನ್ನು ಹತ್ತಿರಾಜ ಸ್ವಾಮಿ ಎಂದೇ ಕರೆಯುತ್ತಾರೆ ಈ ದೇವಸ್ಥಾನದಲ್ಲಿ ಇರುವ ವಿಷ್ಣು ದೇವರ ಶಿಲೆ 10 ಅಡಿ ಎತ್ತರವಿದೆ


ನಿಂತಲ್ಲಿಯೇ ಶಿಲೆಯಾದ ದೇವರುಗಳಲ್ಲಿ ಅತ್ಯಂತ ಎತ್ತರವಾದ ಏಕೈಕ ಶಿಲೆ ವಿಷ್ಣು ದೇವರ ಶಿಲೆ. ವಿಷ್ಣು ದೇವರ ಶಿಲೆಯನ್ನು 40 ವರ್ಷಗಳಿಗೊಮ್ಮೆ ಅನಂತ ಸರಸ್ ಎಂಬ ದೇವಾಲಯದ ಕಲ್ಯಾಣಿ ಯಿಂದ ಹೊರತೆಗೆದು ಶುದ್ಧಗೊಳಿಸಲಾಗುತ್ತದೆ ಕಲ್ಯಾಣಿಯಿಂದ ಹೊರ ಬಂದ ವಿಷ್ಣು ದೇವರನ್ನು 48 ದಿನಗಳ ಕಾಲ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ವಿಷ್ಣು ದೇವರು 24 ದಿನಗಳ ಕಾಲ ಮಲಗಿಕೊಂಡು ದರ್ಶನ ಕೊಡುತ್ತಾರೆ.

ಉಳಿದ 24 ದಿನಗಳ ಕಾಲ ನಿಂತುಕೊಂಡು ದರ್ಶನ ನೀಡುತ್ತಾರೆ 48 ದಿನಗಳ ಕಾಲ ದರ್ಶನದ ನಂತರ 40 ವರ್ಷಗಳ ಕಾಲ ಕಲ್ಯಾಣಿಯಲ್ಲಿ ಬಿಡಲಾಗುತ್ತದೆ ವಿಷ್ಣು ದೇವರನ್ನು ಕಲ್ಯಾಣಿಯಲ್ಲಿ ಬಿಟ್ಟ ಬಳಿಕ ಕೇವಲ 24 ತಾಸಿನಲ್ಲಿ ಮಳೆ ಶುರುವಾಗುತ್ತದೆ ಮಳೆ ನೀರಿನಿಂದ ಕಲ್ಯಾಣಿ ಸಂಪೂರ್ಣವಾಗಿ ತುಂಬುತ್ತದೆ 2019ರಲ್ಲಿ ವಿಷ್ಣು ದೇವರ ದರ್ಶನ ದೊರಕಿತ್ತು ಈ ಸಮಯದಲ್ಲಿ ಕಲ್ಯಾಣಿಯಲ್ಲಿರುವ ನೀರು ತನ್ನಷ್ಟಕ್ಕೆ ತಾನೇ ಬತ್ತಿ ಹೋಗುತ್ತದೆ

ಕಲ್ಯಾಣಿಯಲ್ಲಿರುವ ನೀರು ಖಾಲಿಯಾದ ಬಳಿಕ ವಿಷ್ಣು ದೇವರ ಮೂರ್ತಿಯನ್ನು ಸ್ವಚ್ಛ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾರೆ 2019ರಲ್ಲಿ ವಿಷ್ಣುದೇವರ ದರ್ಶನ ಮಾಡುವುದಕ್ಕೆ 48 ದಿನಗಳಲ್ಲಿ ಪ್ರಪಂಚಾದ್ಯಂತ 3 ರಿಂದ 5 ಕೋಟಿಗೂ ಅಧಿಕ ಭಕ್ತರು ಇಲ್ಲಿಗೆ ಬಂದು ದರ್ಶನ ಪಡೆದಿದ್ದಾರೆ.

48 ದಿನ 24 ತಾಸು ಈ ಜನಸಾಗರ ಹೆಚ್ಚಾಗಿ ಇರುತ್ತದೆ 48 ದಿನಗಳಲ್ಲಿ ಒಂದು ನಿಮಿಷವು ದೇವಸ್ಥಾನದ ಬಾಗಿಲು ಮುಚ್ಚುವುದಿಲ್ಲ ಮಧ್ಯರಾತ್ರಿ ಬಂದರೂ ದರ್ಶನ ಭಾಗ್ಯ ಸಿಗುತ್ತದೆ ಹಾಗೂ 48 ದಿನಗಳು 24 ತಾಸು ಪ್ರಸಾದ ಸೇವೆ ಮಾಡುತ್ತಾರೆ. ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ 48 ದಿನಗಳ ಕಾಲ ಅನ್ನಸಂತರ್ಪಣೆ ಕಾರ್ಯ ನೆರವೇರುತ್ತದೆ.

Leave a Reply

Your email address will not be published. Required fields are marked *