ಕರ್ಣನ ಸಾವಿನಿಂದ ಕೋಪಗೊಂಡಂತಹ ಪರಶುರಾಮರನ್ನು ಶಾಂತಗೊಳಿಸಲು ಶ್ರೀ ಕೃಷ್ಣನು ಮಾಡಿದ್ದೇನು.. - Karnataka's Best News Portal

ಕರ್ಣನ ಸಾವಿನಿಂದ ಕೋಪಗೊಂಡಂತಹ ಪರಶುರಾಮರನ್ನು ಶಾಂತಗೊಳಿಸಲು ಶ್ರೀ ಕೃಷ್ಣನು ಮಾಡಿದ್ದೇನು…??
ಭಗವಾನ್ ಪರಶುರಾಮರು ಕರ್ಣನ ಅಂತಿಮ ಸಮಯದಲ್ಲಿ ಯಾಕಾಗಿ ಬಂದಿದ್ದರು ಕರ್ಣನ ಸಾವಿನಿಂದ ಕೋಪಗೊಂಡಂತಹ ಪರಶುರಾಮ ರನ್ನು ಶಾಂತ ಗೊಳಿಸಲು ಶ್ರೀ ಕೃಷ್ಣರು ಮಾಡಿದ್ದೇನು ಸ್ವಯಂ ಪರಶು ರಾಮರೇ ಹೇಳಿರುವ ಪ್ರಕಾರ ಕರ್ಣ ಹಾಗೂ ಅರ್ಜುನರಲ್ಲಿ ಯಾರು ಸರ್ವಶ್ರೇಷ್ಠರು. ಪರಶುರಾಮರನ್ನು ವಿಷ್ಣುದೇವರ ಅಂಶ ಎಂದು ಹೇಳಲಾಗುತ್ತದೆ ಇವರು ಅತ್ಯಂತ ಕ್ರೋಧ ಸ್ವಭಾವದವರಾಗಿದ್ದರು.

ಹಿಂದೂ ಶಾಸ್ತ್ರಗಳ ಪ್ರಕಾರ ಇವರು ಚಿರಂಜೀವಿಯಾಗಿ ಇಂದಿಗೂ ಕೂಡ ಜೀವಂತವಾಗಿ ಇದ್ದಾರೆ ಎಂದು ಹೇಳಲಾಗುತ್ತದೆ ಇವರು 21 ಬಾರಿ ಭೂಮಂಡಲವನ್ನು ಪ್ರದರ್ಶಿಸಿ ಅಧರ್ಮಿ ರಾಜರುಗಳನ್ನು ಸಂಹರಿಸಿ ದ್ದರು ಇವರು ಪಿತಾಮಹ ಭೀಷ್ಮ ಗುರುದ್ರೋಣಾಚಾರ್ಯರು ಹಾಗೂ ಅಂಗರಾಜ ಕರ್ಣರಂತಹ ಮಹಾರತಿಗಳಿಗೆ ಧನುರ್ ವಿದ್ಯೆಯನನ್ನು ಶಿಕ್ಷಣ ನೀಡಿದ್ದರು. ಕರ್ಣ ಹುಟ್ಟಿನಿಂದ ಸಾಯುವವರೆಗೂ ಅನ್ಯಾಯ ಹಾಗೂ ಅವಮಾನಗಳನ್ನು ಎದುರಿಸುತ್ತಲೇ ಬಂದಿದ್ದಾನೆ.


ಕರ್ಣ ಹುಟ್ಟಿದಾಗಲೇ ತಾಯಿ ಕುಂತಿದೇವಿಯು ಅವನನ್ನು ನೀರಿನಲ್ಲಿ ತೇಲಿ ಬಿಟ್ಟಳು ಹಾಗೆಯೇ ಕರ್ಣ ಶಿಕ್ಷಣವನ್ನು ಕಲಿಯಲು ಹೋದಾಗ ಗುರುಗಳಿಂದಲೇ ಶಾಪವನ್ನು ಪಡೆಯಬೇಕಾದoತಹ ಪ್ರಸಂಗಗಳು ಬಂದವು. ಪರಶುರಾಮರು ಕರ್ಣನಿಗೆ ಶಾಪವನ್ನು ನೀಡಿದ ನಂತರ ಅವನು ಜೀವನದಲ್ಲಿ ಆದಂತಹ ಅವಮಾನ ಅನ್ಯಾಯಗಳ ಬಗ್ಗೆ ಪರಶುರಾಮರಿಗೆ ತಿಳಿಯುತ್ತದೆ ಹೀಗಾಗಿ ಪರಶುರಾಮರು ಕರ್ಣನಿಗೆ ತಮ್ಮ ಅತ್ಯಂತ ಶಕ್ತಿಶಾಲಿಯಾದ ವಿಜಯ ದನಸ್ಸನ್ನು ನೀಡುತ್ತಾ ಹೀಗೆ ಹೇಳುತ್ತಾರೆ.

ಕರ್ಣ ಎಲ್ಲಿಯ ತನಕ ನಿನ್ನ ಕೈಯಲ್ಲಿ ಈ ವಿಜಯ ಧನಸ್ಸು ಇರುತ್ತದೆ ಯೋ ಅಲ್ಲಿಯವರೆಗೆ ಯಾರು ಕೂಡ ನಿನ್ನನ್ನು ಸೋಲಿಸಲು ಸಾಧ್ಯವಿಲ್ಲ ಹೀಗೆ ಮಹಾಭಾರತದ ಯುದ್ಧದ ಸಮಯದಲ್ಲಿ 16 ಮತ್ತು 17ನೇ ದಿನದಲ್ಲಿ ಕರ್ಣ ಹಾಗೂ ಅರ್ಜುನ ಇವರಿಬ್ಬರ ನಡುವೆ ಭಯಾನಕವಾದ ಯುದ್ಧ ಪ್ರಾರಂಭವಾಗುತ್ತದೆ. ಆದರೆ ಯುದ್ಧದ 17ನೇ ದಿನ ಕೊನೆಯ ಸಂದರ್ಭದಲ್ಲಿ

ಕರ್ಣನ ರಥದ ಚಕ್ರವು ಯುದ್ಧ ಭೂಮಿಯಲ್ಲಿ ಹೂತು ಹೋಗುತ್ತದೆ. ಆಗ ಆ ಸಮಯದಲ್ಲಿ ಕರ್ಣ ವಿಜಯ ಧನಸ್ಸನ್ನು ರಥದ ಮೇಲೆ ಇಟ್ಟು ರಥದ ಚಕ್ರವನ್ನು ಮೇಲೆತ್ತಲೂ ರಥದಿಂದ ಕೆಳಗೆ ಇಳಿಯುತ್ತಾನೆ. ಇದೇ ಸಮಯವನ್ನು ಬಳಸಿಕೊಂಡಂತಹ ಅರ್ಜುನನು ಕರ್ಣನನ್ನು ಮೋಸದಿಂದ ಸಾಯಿಸುತ್ತಾನೆ. ಕರ್ಣನ ಸಾವಿನ ಸುದ್ದಿ ತಿಳಿದಂತಹ ಪರಶುರಾಮರು ಯುದ್ಧ ಭೂಮಿಗೆ ಆಗಮಿಸುತ್ತಾರೆ.

ತನ್ನ ಪ್ರಿಯ ಶಿಷ್ಯ ಕರ್ಣನ ಸಾವನ್ನು ಕಣ್ಣೆದುರು ನೋಡಿದಂತಹ ಪರಶುರಾಮರು ಇಡಿ ಬ್ರಹ್ಮಾಂಡವನ್ನೇ ನಾಶ ಮಾಡುವ ಶಪಥವನ್ನು ಮಾಡುತ್ತಾರೆ. ಪರಶುರಾಮರ ಕ್ರೋಧದ ಬಗ್ಗೆ ಅರಿತಿದ್ದ ಶ್ರೀ ಕೃಷ್ಣರು ಅವರನ್ನು ಶಾಂತಗೊಳಿಸುತ್ತಾರೆ. ನಂತರ ಪರಶುರಾಮರು ಕರ್ಣನಿಗೆ ಹೀಗೆ ಹೇಳುತ್ತಾರೆ ಕರ್ಣ ನಿನ್ನಂಥ ಯೋಧ ಹಿಂದೆ ಹುಟ್ಟಿಲ್ಲ ಮುಂದೆ ಹುಟ್ಟಲು ಕೂಡ ಸಾಧ್ಯವಿಲ್ಲ ನೀನೇ ಸರ್ವ ಶ್ರೇಷ್ಠ ಧನುರ್ಧಾರಿ ಎನ್ನುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *