ಮನೆ ಒಳಗೆ ಪ್ರತ್ಯಕ್ಷಗೊಂಡು ಶಾಶ್ವತವಾಗಿ ನೆಲೆಸಿರುವ ದೇವರುಗಳು.ನಿಮ್ಮ ಕಣ್ಣಾರೆ ನೋಡಿ - Karnataka's Best News Portal

ಮನೆ ಒಳಗೆ ಪ್ರತ್ಯಕ್ಷ ಗೊಂಡು ಶಾಶ್ವತವಾಗಿ ನೆಲ್ಲಿಸಿರುವ ದೇವರುಗಳನ್ನು ನಿಮ್ಮ ಕಣ್ಣಾರೆ ನೋಡಿ.ಮೊದಲನೆಯದಾಗಿ ಗುರುವಾಯಿರಪ್ಪ ದೇವಸ್ಥಾನ ಕೇರಳದಲ್ಲಿ ನೆಲೆಸಿರುವ ಅತ್ಯಂತ ದೊಡ್ಡ ದೇವಸ್ಥಾನ ಈ ದೇವಸ್ಥಾನದಲ್ಲಿ ನೆಲೆಸಿರುವುದು ಶ್ರೀ ಕೃಷ್ಣ ಪರಮಾತ್ಮ ದೇವಸ್ಥಾನದಲ್ಲಿ ಶ್ರೀ ಕೃಷ್ಣರನ್ನು ಗುರುವಾಯಿರಪ್ಪ ಎಂದು ಕರೆಯಲಾಗುತ್ತದೆ ನಮ್ಮ ದೇಶದ ಪ್ರಸಿದ್ದ ಮಂದಿರಗಳಲ್ಲಿ ಗುರುವಾಯಿರಪ್ಪ ದೇವಸ್ಥಾನ 8 ನೇ ಸ್ಥಾನ ಪಡೆದುಕೊಳ್ಳುತ್ತದೆ. ದೇವಸ್ಥಾನ ಅನ್ನುವುದಕ್ಕಿಂತ ಮನೆ ದೇವಸ್ಥಾನ ಎಂದು ಹೇಳಲಾಗುತ್ತದೆ.

17ನೇ ಶತಮಾನದಲ್ಲಿ ಗುರುವಾಯಿರು ಜರಿಷ್ಠ ಎಂಬ ಸಾಹುಕಾರ ಈ ಮನೆಯನ್ನು ಕಟ್ಟಿಸುತ್ತಾನೆ ಗುರುವಾಯಿರು ಕುಟುಂಬದಲ್ಲಿ 800 ಸದಸ್ಯರು ಇರುತ್ತಾರೆ ಈ ಎಲ್ಲಾ 800 ಸದಸ್ಯರು ಗುರುವಾಯಿರು ಕಟ್ಟಿಸಿರುವ ಮನೆಯಲ್ಲಿಯೇ ತಮ್ಮ ಜೀವನವನ್ನು ಸಾಗಿಸುತ್ತ ಇರುತ್ತಾರೆ. ಗುರುವಾಯಿರಪ್ಪ ಇದ್ದಂತಹ ಕುಟುಂಬದಲ್ಲಿ ತುಂಬಾ ಬರಗಾಲ ಉಂಟಾಗುತ್ತದೆ ಆಹಾರ ಸಿಗದ ಪರಿಸ್ಥಿತಿ ಉಂಟಾಗುತ್ತದೆ ಈ ಬರಗಾಲ ಬಂದ ಒಂದು ಪ್ರದೇಶದಲ್ಲಿ ಇದ್ದದ್ದು ಗುರುವಾಯಿರಪ್ಪ ಕುಟುಂಬ ಮಾತ್ರ. ಬರಗಾಲದಿಂದ ಈ ಕುಂಟುಂಬಂದ 800 ಸದಸ್ಯರು ಸಾಯುವ ಸ್ಥಿತಿ ಬರುತ್ತದೆ.


ಗುರುವಾಯಿರಪ್ಪ ಕುಟುಂಬದ ಕಷ್ಟ ಕಂಡ ಶ್ರೀ ಕೃಷ್ಣ ಪರಮಾತ್ಮ ಗುರುವಾಯಿರಪ್ಪ ಮನೆಯ ಒಳಗೆ ಒಳಾಂಗಣದಲ್ಲಿ ಪ್ರತ್ಯಕ್ಷನಾಗಿ ಕುಟುಂಬದ ಹಸಿವನ್ನು ನೀಗಿಸಿ ಬರಗಾಲವನ್ನು ಹೋಗಿಸುತ್ತಾನೆ. ಗುರುವಾಯಿರಪ್ಪ ಮನೆ ಗುರುವಾಯಿರಪ್ಪ ದೇವಸ್ಥಾನವಾಗಿ ಬದಲಾಗುತ್ತದೆ. ಎರಡನೆಯದಾಗಿ ಪರಶು ರಾಮೇಶ್ವರ ದೇವಸ್ಥಾನ ಒಡಿಸ್ಸಾ, ಓಡಿಸ್ಸಾದಲ್ಲಿ ಇರುವ ಅತ್ಯಂತ ಶಕ್ತಿಶಾಲಿ ಮತ್ತು ಸುಪ್ರಸಿದ್ಧ ಶಿವ ಮಂದಿರ.

ಈ ದೇವಸ್ಥಾನದ ವಿಶೇಷತೆ ಏನೆಂದರೆ, ಈ ದೇವಸ್ಥಾನದ ತುಂಬಾ ನೃತ್ಯ ಮಾಡುತ್ತಿರುವ ಕಲಾಕೃತಿಗಳು ಕಂಡುಬರುತ್ತದೆ 19ನೇ ಶತಮಾನದಲ್ಲಿ ಈ ದೇವಸ್ಥಾನ ನೃತ್ಯ ಕಲಿಸುವ ಶಿಕ್ಷಕರ ಮನೆ ಮತ್ತು ತರಬೇತಿ ಕೇಂದ್ರ ಆಗಿರುತ್ತದೆ ಒಂದು ರಾತ್ರಿ ನೃತ್ಯ ತರಬೇತಿ ಕೇಂದ್ರದ ಒಳಗೆ ಮತ್ತು ಹೊರಗಡೆ ಎರಡು ಲಿಂಗಗಳು ಉದ್ಭವವಾಗುತ್ತದೆ ಒಳಗೆ ಇರುವ ಲಿಂಗ ಸಾಲಿಗ್ರಾಮಕಲ್ಲು ಹೊರಗಡೆ ಇರುವ ಲಿಂಗ ವಂಜರಿ ಲಿಂಗ ಎಂದು ಕರೆಯುತ್ತಾರೆ.

ಹೊರಗಡೆ ಇರುವ ಲಿಂಗ 4 ಅಡಿ ಎತ್ತರವಿದೆ ದೇವಸ್ಥಾನದ ಒಳಗೆ ಇರುವ ಸಾಲಿಗ್ರಾಮ ಲಿಂಗವು ಪ್ರತಿದಿನ ಪೂಜೆ ಮಾಡಲಾಗುತ್ತದೆ ದೇವಸ್ಥಾನದ ಹೊರಗೆ ಇರುವ ಲಿಂಗವನ್ನು ತಿಂಗಳಿಗೆ ಒಮ್ಮೆ ಪೂಜೆ ಮಾಡುತ್ತಾರೆ ನೃತ್ಯ ಕಲಿಸುತ್ತಿದ್ದ ಶಿಕ್ಷಕರು ಹಂಸ ಜನಾಂಗಕ್ಕೆ ಸೇರುತ್ತಾರೆ ಅಂದಿನಿಂದ ಇಲ್ಲಿಯವರೆಗೂ ಹಂಸ ಜನಾಂಗದವರು ಪೂಜಾರಿಗಳಾಗಿ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸುತ್ತಿದ್ದಾರೆ.

ಹಂಸ ಜನಾಂಗದ ವ್ಯಕ್ತಿಗಳನ್ನು ಈ ದೇವಸ್ಥಾನದಲ್ಲಿ ಬಿಟ್ಟರೆ ಬೇರೆಲ್ಲೋ ನೋಡಲು ಸಹ ಸಾಧ್ಯವಿಲ್ಲ. ಈ ರೀತಿಯಾಗಿ ಸಾಕಷ್ಟು ದೇವಾಲಯ ಮನೆಗಳು ದೇವಾಲಯಗಳಾಗಿ ನಿರ್ಮಾಣವಾಗಿರುವುದನ್ನು ನಾವು ನಮ್ಮ ಕಣ್ಣಾರೆ ನೋಡಬಹುದಾಗಿದೆ ಧರ್ಮಸ್ಥಳ, ಮಂಗಳನಾಥ ಸ್ವಾಮಿ ದೇವಸ್ಥಾನ ತಮಿಳುನಾಡು ಈ ಎರಡು ದೇವಸ್ಥಾನಗಳು ಸಹ ಪ್ರಾರಂಭದಲ್ಲಿ ಮನೆಗಳಾಗಿ ನಂತರ ದೇವಾಲಯಗಳಾಗಿ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *