ಮೈಲಾರಲಿಂಗ ಗರ್ಭಗುಡಿ ರಹಸ್ಯ ಲಿಂಗಕ್ಕೆ ಹಾಕಿದ ನೀರು ಎಲ್ಲಿಗೆ ಹೋಗುತ್ತದೆ ಗೊತ್ತಾ ? ಈ ವಿಡಿಯೋ ನೋಡಿ - Karnataka's Best News Portal

ಮೈಲಾರಲಿಂಗ ಗರ್ಭಗುಡಿ ರಹಸ್ಯ ಲಿಂಗಕ್ಕೆ ಹಾಕಿದ ನೀರು ಎಲ್ಲಿ ಹೋಗುತ್ತದೆ.ಪ್ರತಿ ವರ್ಷ ರಾಜ್ಯದಲ್ಲಿ ಮೈಲಾರ ಕಾರ್ಮಿಕ ನುಡಿಯುವ ಭವಿಷ್ಯ ಕೇಳುವ ಸಲುವಾಗಿ ಹಲವಾರು ಭಕ್ತಾದಿಗಳು ಕಾಯುತ್ತಿರುತ್ತಾರೆ ಮತ್ತು ಕಾರಣಿಕ ನುಡಿದ ಭವಿಷ್ಯ ಇಂದಿಗೂ ಸುಳ್ಳಾಗುವುದಿಲ್ಲ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ನಡೆಯುವ ಮೈಲಾರ ಜಾತ್ರೆಗೆ ಲಕ್ಷಾಂತರ ಜನರು ಕರ್ನಾಟಕ, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶದಿಂದ ಆಗಮಿಸುತ್ತಾರೆ.

ಈ ಸಂದರ್ಭದಲ್ಲಿ ಇಡಿ ಮೈಲಾರವೆ ಹರಿಶಿಣಮಯ ಆಗಿರುತ್ತದೆ ಭಕ್ತರು ಭಂಡಾರದಲ್ಲಿ ಮುಳಿಗೇಳುತ್ತಾರೆ. ಶಿವನ ಹಲವು ಅವತಾರಗಳಲ್ಲಿ ಮೈಲಾರಲಿಂಗೇಶ್ವರನ ಅವತಾರವು ಕೂಡ ಒಂದು ಹಿಂದೆ ಮಣಿ ಮತ್ತು ಮಲ್ಲ ಎಂಬ ರಾಕ್ಷಸರು ಎಲ್ಲರಿಗೂ ತೊಂದರೆ ಕೊಡುತ್ತಾ ಅಟ್ಟಹಾಸ ಮೆರೆಯುತ್ತಾ ತಿರುಗುತ್ತಿದ್ದರು.


ಈ ವೇಳೆ ದೇವತೆಗಳು ಋಷಿಮುನಿಗಳು ಶಿವನ ಮೊರೆ ಹೋಗುತ್ತಾರೆ ರಾಕ್ಷಸರ ಅಟ್ಟಹಾಸದಿಂದ ಕಾಪಾಡುವಂತೆ ಬೇಡಿಕೊಳ್ಳುತ್ತಾರೆ ಆಗ ಶಿವ ಮೈಲಾರನ ರೂಪದಲ್ಲಿ ಧರಿಸಿ ಏಳು ಕೋಟಿ ಗೊರವರ ಜೊತೆ ಮಣಿ ಮತ್ತು ಮಲ್ಲರ ಸಂಹಾರ ಮಾಡುತ್ತಾನೆ ಈ ರಾಕ್ಷಸರ ಸಂಹಾರ ಮಾಡುವಾಗ ಇವರ ರಕ್ತ ನೆಲಕ್ಕೆ ಬಿದ್ದರೆ ಮತ್ತೆ ರಾಕ್ಷಸರು ಹುಟ್ಟುತ್ತಾರೆ ಎಂಬ ಕಾರಣಕ್ಕೆ ಪಾರ್ವತಿಯು ಗಂಗೆ ಮಾಲಮ್ಮನ ರೂಪ ತಾಳಿ ತನ್ನ ನಾಲಿಗೆ ಚಾಚಿ ರಾಕ್ಷಸರ ರಕ್ತವನ್ನು ಹೀರುತ್ತಾರೆ.

ಹೀಗೆ ಈ ಭೂಮಿಯ ಮೇಲೆ ಸಂಪೂರ್ಣವಾಗಿ ಮಣಿ ಮತ್ತು ಮಲ್ಲರ ಸಂಹಾರವಾಗುತ್ತದೆ ಗೊರವರ ಜೊತೆ ಸೇರಿ ರಾಕ್ಷಸರ ಸಂಹಾರವನ್ನು ಮಾಡಿದ್ದಕ್ಕೆ ಗೊರವರಿಗೆ ಮೈಲಾರವೇ ಕುಲ ದೇವರಾಗಿದ್ದಾನೆ ತಲೆಗೆ ಕೆಂಪು ಪೇಟ ಅದಕ್ಕೆ ಅರ್ಧ ಚಂದ್ರ, ಹಣೆಗೆ ಅರಿಶಿನ ಅದರ ಮಧ್ಯೆ ಕುಂಕುಮ ತಿಲಕ, ಗಿರಿಜಾಮಿಸೆ, ಡಮರುಗ, ತ್ರಿಶೂಲ, ಖಡ್ಗ ,ಅರಿಸಿನ ಬಟ್ಟಲು, ಹುಲಿ ಚರ್ಮ, ಕಂಬಳಿ ಇದು ಮೈಲಾರನ ಅವತಾರವಾಗಿದೆ.

ಬುಡು ಬುಡುಕೆಯವರು ಮೈಲಾರನ ಭಕ್ತರಾಗಿದ್ದು ಇವರು ಇವನ ರೀತಿ ಬಟ್ಟೆ ಹಾಕುತ್ತಾರೆ. ಮೈಲಾರಲಿಂಗನ ದರ್ಶನ ಪಡೆಯಲು ಸಾಕಷ್ಟು ಕಡೆಗಳಿಂದ ಜನಸಾಗರವೇ ಹರಿದು ಬರುತ್ತದೆ. ಮೈಲಾರಲಿಂಗ ಗರ್ಭಗುಡಿಯಲ್ಲಿ ಲಿಂಗ ನೀರು ಕುಡಿಯುವುದು ಎಂಬ ನಂಬಿಕೆ ಇದೆ. ಪ್ರತಿಯೊಬ್ಬ ಭಕ್ತರು ಭಕ್ತಿಯಿಂದ ಬಿಂದಿಗೆಯಿಂದ ನೀರು ಸುರಿದರೆ ನೀರನ್ನೇ ಅದು ಸ್ವೀಕರಿಸುತ್ತದೆ ಹೀಗೆ ಅಭಿಷೇಕ ಮಾಡಿದಂತಹ ನೀರು ಎಷ್ಟೇ ಹಾಕಿದರು ಆ ನೀರು ಸ್ವೀಕರಿಸುತ್ತದೆ ಲಿಂಗ.

ಆದರೆ ಲಿಂಗಕ್ಕೆ ಹಾಕಿದ ನೀರು ಎಲ್ಲಿಗೆ ಹೋಗುತ್ತದೆ ಎನ್ನುವುದೇ ಇಲ್ಲಿಗೂ ವರೆಗೂ ಸಹ ರಹಸ್ಯಮಯವಾಗಿದೆ. ಶಾಂತ ಮನಸ್ಸಿನಿಂದ ಪೂಜೆ ಸಲ್ಲಿಸಿ ನೀರನ್ನು ಹಾಕಿದರೆ ಆ ಲಿಂಗ ಎಷ್ಟೇ ನೀರು ಹಾಕಿದರು ಸ್ವೀಕರಿಸುತ್ತದೆ ಎಂಬ ಪ್ರತೀತಿಯಿದೆ ಈ ಲಿಂಗಕ್ಕೆ ಯಾವುದೇ ರೀತಿಯಾದಂತಹ ಜಾತಿ ಧರ್ಮ ಮೇಲು ಕೀಳು ಎನ್ನುವಂತಹ ಭೇದಭಾವ ಇಲ್ಲ ಪ್ರತಿಯೊಬ್ಬ ಭಕ್ತರು ಭಗವಂತನನ್ನು ನೆನೆದು ಲಿಂಗಕ್ಕೇ ನೀರು ಹಾಕಿದರೆ ಲಿಂಗ ಸ್ವೀಕರಿಸುತ್ತದೆ.

Leave a Reply

Your email address will not be published. Required fields are marked *