ದೇವರಿಗೆ ಏರಿಸುವ ಗೆಜ್ಜೆ ವಸ್ತ್ರ ಹೇಗಿರಬೇಕು ಎಷ್ಟು ಗೆಜ್ಜೆ ವಸ್ತ್ರ ಏರಿಸಿದರೆ ಒಳ್ಳೆಯದು ಗೊತ್ತಾ.?ಭಗವಂತನಿಗೆ ಮಾಡುವಂತಹ ಉತ್ತಮ ಸೇವೆಯಲ್ಲಿ ಇದು ಕೂಡ ಒಂದು ಯಾವುದೇ ಪೂಜೆ ಪುನಸ್ಕಾರವನ್ನು ಮಾಡಲಿ ಗೆಜ್ಜೆ ವಸ್ತ್ರ ಏರಿಸದೇ ಮಾಡಬಾರದು ಪ್ರತಿನಿತ್ಯ ವಾಗಿ ಅಥವಾ ದೇವರ ವಿಶೇಷ ಪೂಜೆಯಲ್ಲಿ ಗೆಜ್ಜೆ ವಸ್ತ್ರವನ್ನು ಏರಿಸಿ ಮಾಡಿದರೆ ಬಹಳ ಒಳ್ಳೆಯದು. ಮನೆಯಲ್ಲಿ ಯಾವುದಾದರೂ ಪೂಜೆ ಇದ್ದರೆ ಗೆಜ್ಜೆ ವಸ್ರ್ತ ದೇವರಿಗೆ ಅರ್ಪಿಸುತ್ತೇವೆ.
ನಾವು ಗೆಜ್ಜೆ ವಸ್ತ್ರವನ್ನು ನಮ್ಮ ದೇಹವನ್ನು ಧಣಿಸಿ ಮಾಡಿರುವುದು ದೇವರಿಗೆ ಮುಟ್ಟುತ್ತದೆ ಆದ್ದರಿಂದ ಮನೆಯಲ್ಲಿ ಬತ್ತಿಗಳು ಅಥವಾ ಗೆಜ್ಜೆಯ ವಸ್ತ್ರವನ್ನು ನಾವೇ ಆದಷ್ಟು ಮಾಡಬೇಕು. ಪ್ರತಿ ದೇವಸ್ಥಾನಗಳಲ್ಲೂ ಸಹ ದೇವರಿಗೆ ಗೆಜ್ಜೆ ವಸ್ತ್ರವನ್ನು ಧರಿಸುತ್ತಾರೆ. ಕೆಲವೊಬ್ಬರು ಪ್ರತಿ ಶನಿವಾರ ನರಸಿಂಹ ಸ್ವಾಮಿಯ ಪೂಜೆಯನ್ನು ಮಾಡುತ್ತಾರೆ ಅಂತ ಸಂದರ್ಭದಲ್ಲಿ ಗೆಜ್ಜೆ ವಸ್ತ್ರವನ್ನು ದೇವರಿಗೆ ಅರ್ಪಿಸುತ್ತಾರೆ.
ಇಲ್ಲವಾದರೆ ಕೆಲವೊಬ್ಬರು ನಿತ್ಯ ಮನೆ ದೇವರಿಗೆ ಪೂಜೆಯನ್ನು ಸಲ್ಲಿಸುತ್ತಾರೆ ಅಂತಹವರು ಸಹ ದೇವರಿಗೆ ಗೆಜ್ಜೆ ಉತ್ರವನ್ನು ಏರಿಸಿ ಪೂಜೆ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ. ಶುಕ್ರವಾರ ಅಮಾವಾಸ್ಯೆ ವಿಶೇಷ ದಿನಗಳಲ್ಲಿ ಕಳಶ ಪೂಜೆಯನ್ನು ಮಾಡಿದಾಗ ಕಳಶಕ್ಕೂ ಸಹ ಗೆಜ್ಜೆ ವಸ್ತ್ರವನ್ನು ಏರಿಸಿ ಮಾಡು ಪೂಜೆ ಮಾಡುವುದರಿಂದ ಉತ್ತಮ ಫಲಗಳು ದೊರೆಯುತ್ತದೆ.
ಹುಣ್ಣಿಮೆ ಹಾಗೂ ಅಮಾವಾಸ್ಯೆಯ ದಿನಗಳಲ್ಲಿ ವಿಶೇಷವಾದಂತಹ ಪೂಜೆಯನ್ನು ಮಾಡುತ್ತಾರೆ ಅಂತಹ ಸಂದರ್ಭದಲ್ಲಿಯೂ ಸಹ ಗೆಜ್ಜೆ ವಸ್ತ್ರವನ್ನು ಧರಿಸಿ ದೇವರಿಗೆ ಪೂಜೆ ಮಾಡುವುದು ಒಳ್ಳೆಯದು. ಹಬ್ಬ ಹರಿದಿರಗಳು ಈ ದಿನಗಳಲ್ಲಿ ಗೆಜ್ಜೆ ವಸ್ತ್ರವನ್ನು ದೇವರಿಗೆ ಏರಿಸಿ ಪೂಜೆ ಮಾಡದೇ ಇದ್ದರೆ ವಸ್ತ್ರಧಾರಿದ್ರ್ಯ ಜನ್ಮ ಜನ್ಮಂತರದವರೆಗೂ ಬರುತ್ತದೆ ಎನ್ನುತ್ತಾರೆ. ಆದ್ದರಿಂದ ವಿಶೇಷವಾದಂತಹ ಪೂಜೆಯನ್ನು ಮಾಡಿದಾಗ ಗೆಜ್ಜೆ ವಸ್ತ್ರವನ್ನು ಏರಿಸಬೇಕು. ಗೆಜ್ಜೆ ವಸ್ತ್ರ ದಾನವು ಸಹ ಅತ್ಯಂತ ಶ್ರೇಷ್ಠವಾದದ್ದು ಎಂದು ಹೇಳಲಾಗುತ್ತದೆ.
ಹೆಣ್ಣು ದೇವರಿಗಳಿಗೆ 18 ಗೆಜ್ಜೆ ಇರುವಂತಹ ವಸ್ತ್ರ ಹಾಗೂ ಎರಡು ಬಿಡಿಬಿಡಿಯಾದಂತಹ ವಸ್ತ್ರಗಳನ್ನು ಏರಿಸಬೇಕು ಏಕೆಂದರೆ ಇದು ಹೆಣ್ಣು ದೇವರಿಗೆ ಸೀರೆ ಮತ್ತು ಬ್ಲೌಸ್ ಇದ್ದ ಹಾಗೆ. ಒಂಟಿವಸ್ತ್ರವನ್ನು ದೇವರಿಗೆ ಸಲ್ಲಿಸುವುದು ಅಪಶಕುನ ಗಂಡು ದೇವರಿಗೆ ಪೂಜೆ ಮಾಡುವಂತಹ ಸಂದರ್ಭದಲ್ಲಿ ಮೈ ಮೇಲೆ ಹೊದಿಕೆ ಹಾಕಿಕೊಂಡು ಪೂಜೆ ಮಾಡಬೇಕು.
ಪೂಜೆಯನ್ನು ಮಾಡಬೇಕೆಂದರೆ ಸರಿಯಾದ ಕ್ರಮದಲ್ಲಿ ಮಾಡುವುದು ತುಂಬಾ ಉತ್ತಮ. 18 ಗೆಜ್ಜೆ ವಸ್ತ್ರವನ್ನು ರೆಡಿ ಮಾಡಿಕೊಂಡು ನಂತರ ಎರಡು ಬಿಡಿ ಬಿಡಿ ಆದ ಗೆಜ್ಜೆ ವಸ್ತ್ರವನ್ನು ರೆಡಿ ಮಾಡಿಕೊಳ್ಳಬೇಕು. ಈ ಒಂದು ಗೆಜ್ಜೆ ವಸ್ತ್ರವನ್ನು ಸಿದ್ಧ ಮಾಡುವಂತಹ ಸಂದರ್ಭದಲ್ಲಿ ಅರಿಶಿಣ ಕುಂಕುಮ ಮತ್ತು ಗಂಧವನ್ನು ನೀರಿನಲ್ಲಿ ಸ್ವಲ್ಪ ಕಲಿಸಿ ಗೆಜ್ಜೆ ವಸ್ತ್ರ ಸಿದ್ದಪಡಿಸಬೇಕು.