ಒಂದು ಎಕರೆಯಲ್ಲಿ ತಿಂಗಳಿಗೆ 1.5 ಲಕ್ಷ ಆದಾಯ ಬ್ಯಾಂಕ್ ಕೆಲಸ ಬಿಟ್ಟು ಕೃಷಿ ಹಿಡಿದ ಈ ರೈತ ಯಾರು ಹಾಕದಿರುವ ಬೆಳೆ ಹಾಕಿ ಏನ್ ಮಾಡ್ತಾರೆ ನೋಡಿ.. - Karnataka's Best News Portal

ಬ್ಯಾಂಕ್ ಕೆಲಸ ಬಿಟ್ಟು ಕೃಷಿಗೆ ಇಳಿದ ಇವರು ಕೊಂಡುಕೊಂಡ ಐಡಿಯಾ ಏನು ಗೊತ್ತಾ…?ಈ ದಿನ ನಾವು ಹೇಳುತ್ತಿರುವಂತಹ ಈ ರೈತರ ಹೆಸರು ಮಂಜುನಾಥ್ ಎಂದು ಇವರು ಕೆಲಸ ಮಾಡುವುದನ್ನು ಬಿಟ್ಟು ಈಗ ಇವರು ತಮ್ಮ ಜಮೀನಿನಲ್ಲಿ ರೈತರಾಗಿ ಕೆಲಸ ಮಾಡುವುದರ ಮುಖಾಂತರ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಈ ವಿಷಯವಾಗಿ ಇವರ ಬಳಿ ಹೋಗಿ ಕೇಳಿದರೆ ಇವರು ಇದಕ್ಕೆ ಒಂದೇ ಒಂದು ಉತ್ತರವನ್ನು ಕೊಡುತ್ತಾರೆ ಅದೇನಂದರೆ.

ಯಾರೇ ಆಗಲಿ ಅವರು ಮೊದಲು ನಮ್ಮ ಬಳಿ ಯಾವುದು ಲಭ್ಯವಿ ದೆಯೋ ಅವುಗಳನ್ನು ಉಪಯೋಗಿಸಿ ಹಾಗೂ ಅದನ್ನು ಹೇಗೆ ಉಪಯೋಗಿಸಿಕೊಂಡು ಅದರಿಂದ ಲಾಭವನ್ನು ಪಡೆಯಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ರೈತರು ಹೇಳಿದ್ದು ಇವರು ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿರುವಂತಹ ಸಮಯದಲ್ಲಿ ಇವರಿಗೆ ಕಡಿಮೆ ಸಂಬಳ ಬರುತ್ತಿತ್ತು.

ಆದರೆ ಅವರು ಬ್ಯಾಂಕ್ ಕೆಲಸವನ್ನು ಬಿಟ್ಟು ಈಗ ತಮ್ಮದೇ ಜಮೀನಿನಲ್ಲಿ ಹಲವಾರು ಬೆಳೆಗಳನ್ನು ಬೆಳೆಯುವುದರ ಮುಖಾಂತರ ಮಾದರಿ ರೈತ ಎನ್ನುವ ಹೆಸರನ್ನು ಪಡೆದುಕೊಂಡಿದ್ದಾರೆ.ಇವರು ಬ್ಯಾಂಕ್ ನಲ್ಲಿ ತೆಗೆದುಕೊಳ್ಳುತ್ತಿದ್ದಂತಹ ಹಣಕ್ಕಿಂತ ಎರಡರಷ್ಟು ಮೂರರಷ್ಟು ಹಣವನ್ನು ಇವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುವುದರ ಮುಖಾಂತರ ಪಡೆದುಕೊಳ್ಳುತ್ತಿದ್ದಾರೆ. ಹಾಗೂ ಯಾವ ಬೆಳೆಗಳನ್ನು ಬೆಳೆಯುವುದರ ಮುಖಾಂತರ ಹೆಚ್ಚು ಲಾಭವನ್ನು ಪಡೆಯಬಹುದು ಎನ್ನುವಂತಹ ಮಾಹಿತಿಯನ್ನು ಇವರು ಕೊಟ್ಟಿದ್ದು.

ಇವರು ತಮ್ಮ 1 ಎಕರೆ ಜಮೀನಿನಲ್ಲಿ ಲಾಂಗ್ ಬೀನ್ಸ್ ಅಂದರೆ ಇದನ್ನು ಕನ್ನಡದಲ್ಲಿ ಕರಮಣಿ ಎಂದು ಕರೆಯುತ್ತಾರೆ ಈ ಬೆಳೆಯನ್ನು ಹಾಕುವು ದರ ಮುಖಾಂತರ ತಿಂಗಳಿಗೆ ಒಂದುವರೆ ಲಕ್ಷ ಹಣವನ್ನು ಪಡೆದು ಕೊಳ್ಳುತ್ತಿದ್ದಾರೆ. ಜೊತೆಗೆ ಇವರು ತಮ್ಮ ಭೂಮಿಯಲ್ಲಿ ಯಾರು ಹಾಕದೆ ಇರುವಂತಹ ಬೆಳೆಗಳನ್ನು ಹಾಕುವುದರ ಮುಖಾಂತರ ಅಂದರೆ ಕೆಲವೊಂದಷ್ಟು ಬೆಳೆಗಳ ವಿಷಯವನ್ನು ಯೂಟ್ಯೂಬ್ ಮುಖಾಂತರ ತಿಳಿದುಕೊಂಡು.

ಅಲ್ಲಿ ಯಾವ ವಿಧಾನಗಳನ್ನು ಅನುಸರಿಸುತ್ತಾರೋ ಅವುಗಳನ್ನು ನೋಡಿಕೊಂಡು ನಾನು ಹಲವಾರು ರೀತಿಯ ಕೃಷಿ ಬೆಳೆಗಳನ್ನು ಬೆಳೆಯುತ್ತೇನೆ ಎನ್ನುವಂತಹ ಮಾಹಿತಿಯನ್ನು ಇವರು ಮೀಡಿಯಾದ ಮುಂದೆ ಹಂಚಿಕೊಂಡಿದ್ದಾರೆ. ಹಾಗೂ ಇವರು ಹಲವಾರು ರೈತರಿಗೆ ಈ ವಿಷಯವಾಗಿ ಎಲ್ಲಾ ತಿಳಿಸಿಕೊಟ್ಟಿದ್ದಾರೆ ಅದರಲ್ಲೂ ಎಲ್ಲರೂ ಕೂಡ ಈ ರೀತಿಯಾದಂತಹ ಕೃಷಿ ಬೆಳೆಗಳ ಬಗ್ಗೆ ತಿಳಿದುಕೊಂಡರೆ ಅವರು ಕೂಡ.

ಈ ರೀತಿಯಾದಂತಹ ಬೆಳೆಯನ್ನು ಬೆಳೆಯುವುದರ ಮುಖಾಂತರ ಹೆಚ್ಚಿನ ಹಣ ಸಂಪಾದನೆ ಮಾಡಬಹುದು ಬದಲಿಗೆ ಬೇರೆಯವರ ಕೈ ಕೆಳಗೆ ಹೋಗಿ ಕೆಲಸ ಮಾಡುವುದರ ಬದಲು ನಮ್ಮ ಜಮೀನಿನಲ್ಲಿ ನಮ್ಮ ಭೂಮಿಯಲ್ಲಿ ನಾವೇ ಕಷ್ಟಪಟ್ಟು ಶ್ರಮಪಟ್ಟು ದುಡಿದರೆ ಭೂಮಿ ತಾಯಿ ಯಾವತ್ತಿಗೂ ನಮಗೆ ಮೋಸವನ್ನು ಮಾಡುವುದಿಲ್ಲ ಎನ್ನುವಂತಹ ಮಾತನ್ನು ಕೂಡ ಮಂಜುನಾಥ್ ಅವರು ಹೇಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *