ಕೇವಲ ಮೂರು ಟೊಮೊಟೊದಲ್ಲಿ ತುಂಬಾ ರುಚಿಯಾದ ಬಾಯಲ್ಲಿಟ್ಟರೆ ಕರಗುವ ಸ್ವೀಟ್..ಮಾಡುವ ವಿಧಾನ ಸರಳವಾಗಿದೆ ನೋಡಿ » Karnataka's Best News Portal

ಕೇವಲ ಮೂರು ಟೊಮೊಟೊದಲ್ಲಿ ತುಂಬಾ ರುಚಿಯಾದ ಬಾಯಲ್ಲಿಟ್ಟರೆ ಕರಗುವ ಸ್ವೀಟ್..ಮಾಡುವ ವಿಧಾನ ಸರಳವಾಗಿದೆ ನೋಡಿ

ಕೇವಲ ಮೂರು ಟೊಮೊಟೊ ದಲ್ಲಿ ತುಂಬ ರುಚಿಯಾದಂತಹ ಬಾಯಲ್ಲಿಟ್ಟರೆ ಕರಗುವವ ಸ್ವೀಟ್.ಮನೆಯಲ್ಲಿರುವಂತಹ ಕಡಿಮೆ ಸಾಮಗ್ರಿಗಳಲ್ಲಿ ಒಂದು ಸ್ವೀಟ್ ಅನ್ನು ನೀವು ಮಾಡಬಹುದು ಮೊದಲಿಗೆ ಮೂರು ದಪ್ಪ ಟೊಮ್ಯಾಟೋಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಇಟ್ಟುಕೊಳ್ಳಬೇಕು ನಂತರ ಅದನ್ನು ಕಟ್ ಮಾಡಿಕೊಳ್ಳಬೇಕು ಆದಷ್ಟು ಕೆಂಪಾಗಿರುವಂತಹ ಹಾಗೆಯೇ ಸ್ವೀಟಾಗಿರುವಂತಹ ಟೊಮೆಟೊವನ್ನು ತೆಗೆದುಕೊಳ್ಳಬೇಕು. ಕಟ್ ಮಾಡಿರುವಂತಹ ಟೊಮ್ಯಾಟೋಗಳನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ.

WhatsApp Group Join Now
Telegram Group Join Now

ನಂತರ ಇದನ್ನು ಚೆನ್ನಾಗಿ ಶೋಧಿಸಿ ಇದರಿಂದ ಬೀಜ ಅಥವಾ ಸಿಪ್ಪೆ ಇದ್ದರೆ ಅದನ್ನು ಬೇರ್ಪಡಿಸಿಕೊಳ್ಳಿ. ಇದಕ್ಕೆ ಅರ್ಧ ಲೋಟದಷ್ಟು ನೀರನ್ನು ಸೇರಿಸಿ ನಂತರ ಒಂದು ಪಾತ್ರೆಯಲ್ಲಿ ತಯಾರು ಮಾಡಿಕೊಂಡಿರುವಂತಹ ಟೊಮ್ಯಾಟೋ ಜ್ಯೂಸನ್ನು ಹಾಕಿ ಅದನ್ನು ಚೆನ್ನಾಗಿ ಕುದಿಸಲು ಇಡಿ ಕಡಿಮೆ ಉರಿಯಲ್ಲಿ ಕುದಿಯಲು ಇಡಿ ನಂತರ ಅದಕ್ಕೆ ಅರ್ಧ ಕಪ್ ನಷ್ಟು ಬೆಲ್ಲವನ್ನು ಸೇರಿಸಿ ಅದನ್ನು ಚೆನ್ನಾಗಿ ಕಲಸಿ ನಿಮಗೆ ಸ್ವೀಟ್ ಹೆಚ್ಚು ಬೇಕಾದರೆ ಸ್ವಲ್ಪ ಜಾಸ್ತಿ ಪ್ರಮಾಣದಲ್ಲಿ ಬೆಲ್ಲ ಸೇರಿಸಬಹುದು.


ನಂತರ ಒಂದು ಬೌಲ್ ಗೆ ಐದು ಟೇಬಲ್ ಸ್ಪೂನ್ ಅಷ್ಟು ಕಾರ್ನ್ ಫ್ಲೋರ್ ಅನ್ನು ಹಾಕಿ ಅರ್ಧ ಕಪ್ ನಷ್ಟು ತಣ್ಣೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಕಾರ್ನ್ ಫ್ಲೋರ್ ನೀರನ್ನು ಟಮೋಟ ರಸಕ್ಕೆ ಹಾಕಿ ಸ್ಟವ್ ಆಫ್ ಮಾಡಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ನಂತರ ಸ್ಟವ್ ಅನ್ನು ಆನ್ ಮಾಡಿ ಕಡಿಮೆ ಉರಿಯಲ್ಲಿ ಇಟ್ಟು ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

See also  ವಿಜಯಲಕ್ಷ್ಮಿ ಶಿಬರೂರು ಅವರ ನಿಜವಾದ ಸ್ಟೋರಿ ಇಲ್ಲಿದೆ ನೋಡಿ ಇವರ ವಿದ್ಯೆ,ಅಪ್ಪ ಅಮ್ಮ,ಸ್ವಂತ ಊರು ಮುಂಚೆ ಏನ್ಮಾಡ್ತಾ ಇದ್ರು ನೋಡಿ

ನಂತರ ಟಮೋಟೊ ಮಿಶ್ರಣ ನಿಧಾನವಾಗಿ ಗಟ್ಟಿಯಾಗಲು ಪ್ರಾರಂಭವಾಗುತ್ತದೆ ಆಗ ಗಟ್ಟಿಯಾಗುವಂತಹ ಸಂದರ್ಭದಲ್ಲಿ ಉರಿಯನ್ನು ಮೀಡಿಯಂ ಫ್ಲೇಮ್ ನಲ್ಲಿ ಇಟ್ಟುಕೊಳ್ಳಿ ಇದನ್ನು ಚೆನ್ನಾಗಿ ಕೈ ಆಡಿಸಬೇಕು ನಂತರ ಇದಕ್ಕೆ ಅರ್ಧ ಟೇಬಲ್ ಸ್ಪೂನ್ ಅಷ್ಟು ಏಲಕ್ಕಿ ಪುಡಿಯನ್ನು ಹಾಕಿ ಇದರಿಂದ ಒಳ್ಳೆಯ ಫ್ಲೇವರ್ ಇರುತ್ತದೆ ನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ಅಷ್ಟು ತುಪ್ಪ ಹಾಕಿ ಮಿಕ್ಸ್ ಮಾಡಿಕೊಳ್ಳಿ ಇದಕ್ಕೆ ಮೂರು ಟೇಬಲ್ ಸ್ಪೂನ್ ಗಳಷ್ಟು ತುಪ್ಪವನ್ನು ಹಾಕಬಹುದು.

ನಂತರ ಈ ಒಂದು ಮಿಶ್ರಣ ಪಾತ್ರೆಯಿಂದ ಬೇರ್ಪಡುತ್ತಿದೆ ಎನ್ನುವಂತಹ ಸಂದರ್ಭದಲ್ಲಿ ಸ್ಟವ್ ಆಫ್ ಮಾಡಿ ನಂತರ ಒಂದು ತಟ್ಟೆಗೆ ತುಪ್ಪವನ್ನು ಸವರಿ ಈ ಒಂದು ಮಿಶ್ರಣವನ್ನು ತಟ್ಟೆಯಲ್ಲಿ ಹಾಕಿ ಅದನ್ನು ತಣ್ಣಗಾಗಲು ಬಿಡಿ ತಣ್ಣಗಾದ ನಂತರ ನೀವು ತಟ್ಟೆಯಿಂದ ಅದನ್ನು ಹೊರ ತೆಗೆದು ಸಣ್ಣ ಸಣ್ಣ ಪೀಸ್ ಗಳಾಗಿ ಕಟ್ ಮಾಡಿ ತಿನ್ನಬಹುದು. ತುಂಬಾ ರುಚಿಯಾದಂತಹ ಮತ್ತು ಬೇಗ ತಯಾರು ಮಾಡಬಹುದಾದಂತಹ ಸ್ವೀಟ್ ಇದಾಗಿದ್ದು ಎಲ್ಲರಿಗೂ ಇಷ್ಟವಾಗುತ್ತದೆ.

[irp]


crossorigin="anonymous">