ದೇವರ ಮನೆ ಯಾವ ರೀತಿ ಸ್ವಚ್ಚ ಮಾಡಬೇಕು ಯಾವಾಗ ಮಾಡಿದರೆ ಒಳ್ಳೆಯದು.ನೀವು ಅರಿಯದ ದೇವರ ಮನೆ ವಿಚಾರ - Karnataka's Best News Portal

ದೇವರ ಮನೆ ಯಾವ ರೀತಿ ಸ್ವಚ್ಛ ಮಾಡಬೇಕು ಯಾವಾಗ ಮಾಡಬೇಕು ಗೊತ್ತಾ.ದೇವರ ಮನೆಯನ್ನು ನಾವು ನಿತ್ಯ ಸ್ವಚ್ಛ ಮಾಡಬೇಕು ದೇವರ ಮನೆಯಲ್ಲಿ ಜೇಡ ಕಟ್ಟದಂತೆ ನೋಡಿಕೊಳ್ಳಬೇಕು ಕಸ ಬೀಳದಂತೆ ನೋಡಿಕೊಳ್ಳಬೇಕು ದೇವರ ಮನೆಯನ್ನು ಸ್ನಾನ ಮಾಡಿ ಬಂದು ನಿತ್ಯ ಸ್ವಚ್ಛಗೊಳಿಸಬೇಕು ಯಾವಾಗ ನಾವು ಸ್ವಚ್ಛಗೊಳಿಸುತ್ತೇವೆ ಆಗ ನಾವು ಬಟ್ಟೆಯಿಂದ ಸ್ವಚ್ಛಗೊಳಿಸಬೇಕು ಕಸಬರಿಕೆಯನ್ನು ದೇವರ ಮನೆಗೆ ತೆಗೆದುಕೊಂಡು ಹೋಗಬಾರದು.

ದೇವರ ಮನೆಯಲ್ಲಿ ಒಂದು ಬಟ್ಟೆಯನ್ನು ತೆಗೆದುಕೊಂಡು ಕಸವನ್ನು ತೆಗೆದು ಆಚೆ ಹಾಕುವುದರಿಂದ ಆ ಕಸವನ್ನು ದೇವರ ಮನೆಯಿಂದ ಹೊರ ಹಾಕಿದಾಗ ನಮ್ಮ ಪಾಪದ ರಾಶಿ ಕೂಡ ಕಳೆಯುತ್ತದೆ. ಶಾಸ್ತ್ರಗಳಲ್ಲಿ ಸ್ಪಷ್ಟವಾಗಿ ಹೇಳುತ್ತಾರೆ ದೇವರ ಮನೆಯನ್ನು ಸ್ವಚ್ಛತೆಗೊಳಿಸಿದಾಗ ನಮ್ಮ ಪಾಪ ರಾಶಿಯ ಪರಿಹಾರ ಒಂದು ಕಲ್ಪದವರೆಗೆ ಗೋ ಧಾನ ಮಾಡಿದ ಫಲ ಬರುತ್ತದೆ ಸಗಣಿಯಿಂದ ಸಾರಿಸಿದರೆ ಚಾಂದ್ರಾಯಾನ ಫಲ ಬರುತ್ತದೆ

ಸಣ್ಣ ಬಣ್ಣ ಮಾಡಿದರೆ ಹರಿ ಲೋಕ ಪ್ರಾಪ್ತಿಯಾಗುತ್ತದೆ ತಿಂಗಳಿಗೆ ಒಮ್ಮೆಯಾದರೂ ಸುಣ್ಣ ಬಣ್ಣವನ್ನು ಮಾಡಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. ದೇವರ ಮನೆಯನ್ನು ಎಷ್ಟು ಸ್ವಚ್ಛವಾಗಿ ಎಷ್ಟು ಸುಂದರವಾಗಿ ಇಡುತ್ತೇವೋ ಸಮಸ್ತ ಸಂಪತ್ತಿನ ಪ್ರಾಪ್ತಿಯಾಗುತ್ತದೆ ಮನೆಯಲ್ಲಿ ಮಕ್ಕಳಿಗೆ ಸದ್ಗುಣಗಳು ಬೆಳೆಯುತ್ತವೆ. ಆದ್ದರಿಂದ ನಾವು ಮನೆಯನ್ನು ದಿನ ಸ್ವಚ್ಛಗೊಳಿಸಬೇಕು ಹಾಗೆ ರಂಗೋಲಿಯನ್ನು ಹಾಕಬೇಕು ಆಗ ಅಲ್ಲಿ ದೈವಿಕ ಕಳೆ ಬರುತ್ತದೆ.

15-20 ದಿನಗಳವರೆಗೆ ದೇವರ ಮನೆಯಲ್ಲಿ ಕಸವನ್ನು ಇಡಬಾರದು ದೇವರ ಮನೆಯನ್ನು ಅಷ್ಟೇ ಇಲ್ಲದೆ ದೇವರ ಪಾತ್ರೆಗಳನ್ನು ಸಹ ಸ್ವಚ್ಛವಾಗಿ ತೊಳೆದಿಡಬೇಕು ನಿತ್ಯ ದೇವರ ಮುಂದೆ ರಂಗೋಲಿಯನ್ನು ಹಾಕಬೇಕು ಒಡಗಿದ ಹೂಗಳನ್ನು ನಿತ್ಯ ತೆಗೆಯಬೇಕು ದೇವರ ಮೇಲೆ ಒಣಗಿದ ಹೂಗಳು ಇರಬಾರದು.

ಕಪ್ಪು ಇರುವೆಗಳು ದೇವರ ಮನೆಯಲ್ಲಿ ಇದ್ದರೆ ಶುಭ ಎಂದು ಹೇಳುತ್ತದೆ ಮೊಟ್ಟೆಯನ್ನು ಕಪ್ಪು ಇರುವೆಗಳು ಇಟ್ಟುಕೊಂಡು ಬಂದಿರುತ್ತವೆ ಅಂತಹ ಇರುವೆಗಳನ್ನು ಓಡಿಸಬಾರದು. ದೇವರ ಮನೆಯಲ್ಲಿ ಸದಾ ದೀಪ ಇರುವಂತೆ ನೋಡಿಕೊಳ್ಳಬೇಕು ದೇವರ ಮನೆಯಲ್ಲಿ ಕತ್ತಲೇ ಇರಬಾರದು ಪ್ರತಿನಿತ್ಯವಾಗಿ ದೇವರ ಮುಂದೆ ದೀಪ ಬೆಳಗುವಂತೆ ನೋಡಿಕೊಳ್ಳಬೇಕು. ಮನೆಗೆ ಯಾರೇ ಮುತ್ತೈದೆಯರು ಬಂದರು ಸಹ ಅವರಿಗೆ ಅರಿಶಿನ ಕುಂಕುಮ ಕೊಟ್ಟು ನಂತರ ಅವರನ್ನು ಕಳಿಸಬೇಕು.

ಪ್ರತಿನಿತ್ಯ ದೇವರ ಮನೆಯನ್ನು ಸ್ವಚ್ಛ ಮಾಡಿ ಕಸತೆಗೆದು ದೇವರ ಮುಂದೆ ರಂಗೋಲಿಯನ್ನು ಹಾಕಿ ದೇವರ ಪಾತ್ರೆಗಳನ್ನು ತೊಳೆದು ದೇವರ ಮುಂದೆ ದೀಪವನ್ನು ಹಚ್ಚಿ ಮನಸ್ಸಿನಿಂದ ಬೇಡಿಕೊಂಡರೆ ನಿಮಗೆ ಇರುವಂತಹ ಎಲ್ಲಾ ಬೇಡಿಕೆಗಳನ್ನು ದೇವರಲ್ಲಿ ಇಟ್ಟಾಗ ದೇವರು ಖಂಡಿತವಾಗಿಯೂ ನಮ್ಮ ಹರಕೆಗಳನ್ನು ಈಡೇರಿಸುತ್ತಾರೆ. ನಾವು ಹಚ್ಚುವಂತಹ ದ್ವೀಪಗಳಲ್ಲಿ ಹುಳಗಳು ಬೀಳದ ಹಾಗೆ ನೋಡಿಕೊಳ್ಳಬೇಕು ಹಾಗೆ ಏನಾದರೂ ಬಿದ್ದರೆ ಪ್ರತಿನಿತ್ಯ ಆ ದೀಪಗಳನ್ನು ಸ್ವಚ್ಛಗೊಳಿಸಿ ನಂತರ ಬತ್ತಿ ಮತ್ತು ಎಣ್ಣೆಯನ್ನು ಬದಲಾಯಿಸಿ ದೀಪ ಹಚ್ಚಬೇಕು.

Leave a Reply

Your email address will not be published. Required fields are marked *