ಸುಕ್ಷೇತ್ರ ಮೈಲಾರಲಿಂಗೇಶ್ವರನಿಂದ 2023 ಸ್ಪೋಟಕ ಕಾರ್ಣಿಕ ಭವಿಷ್ಯ ರಾಜಕೀಯದಲ್ಲಿ ಬಾರಿ ಬದಲಾವಣೆ ಪಿಕ್ಸ್ ಡಿಕೆಶಿಗೆ ಅಂದು ಸಾತ್ ಕೊಟ್ಟಿದ್ದ ಐತಿಹಾಸಿಕ ಕ್ಷೇತ್ರ. - Karnataka's Best News Portal

ಬೆಚ್ಚಿ ಬೀಳಿಸುವ ಭವಿಷ್ಯ, ಸುಕ್ಷೇತ್ರ ಮೈಲಾರ ಲಿಂಗೇಶ್ವರ ಕಾರ್ಣಿಕ ಸಂಚಲನ.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದ ಸುಕ್ಷೇತ್ರ ಇತಿಹಾಸಿಕ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಕಾರಣಿಕದ ಭವಿಷ್ಯವನ್ನು ನುಡಿದಿದ್ದಾರೆ ಈ ಬಾರಿ ನುಡಿದಿರುವಂತಹ ಭವಿಷ್ಯ ಮತ್ತೆ ಅಚ್ಚರಿಯ ಜೊತೆಗೆ ಒಂದಷ್ಟು ಕುತೂಹಲಗಳು ಒಂದಷ್ಟು ಭಯ ಒಂದಷ್ಟು ಆತಂಕ ಒಂದಷ್ಟು ಪ್ರಶ್ನೆಗಳು ಹೀಗೆ ಸಾಕಷ್ಟು ಅನುಮಾನಗಳಿಗೆ ಸಾಕಷ್ಟು ಗೊಂದಲಗಳಿಗೆ ಜೊತೆಗೆ ಒಂದಷ್ಟು ವಿಚಿತ್ರಗಳಿಗೂ ಕೂಡ ಕಾರಣವಾಗಿದೆ.

ಈ ಬಾರಿಯ ಭವಿಷ್ಯವಾಣಿ ಏನೆಂದರೆ ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್ ಎಂದು ಹೇಳಿ ಆ ಬಿಲ್ಲನ್ನು ಕೈ ಬಿಟ್ಟು ಬಿಲ್ಲಿನಿಂದ ಕೆಳಗೆ ಬೀಳುತ್ತಾರೆ ಈ ಭವಿಷ್ಯವಾಣಿಯನ್ನು ಇಲ್ಲಿನ ಧರ್ಮ ದರ್ಶಿಗಳಾದಂತಹ ವೆಂಕಪ್ಪಯ್ಯ ಒಡೆಯರ್ ಅದನ್ನು ವಿಶ್ಲೇಷಣೆಯನ್ನು ಮಾಡುತ್ತಾರೆ ಒಂದೊಂದು ಕಾಲ ಕ್ರಮೇಣವಾಗಿ ಪ್ರತಿ ವರ್ಷವೂ ಕೂಡ ಅಥವಾ ಪ್ರತಿಯೊಂದು ಜಾಗದಲ್ಲೂ ಕೂಡ ಇದೇ ರೀತಿ ಬಿಲ್ಲನ್ನು ಏರಿ ಭವಿಷ್ಯವನ್ನು ನುಡಿಯುವಂತಹ ಪದ್ಧತಿ ಇದೆ.


ಆ ಭವಿಷ್ಯವಾಣಿಯನ್ನು ನುಡಿದ ಬಳಿಕ ಅಲ್ಲಿನ ಧರ್ಮದರ್ಶಿಗಳು ಯಾರಿರುತ್ತಾರೋ ಅವರು ಈ ಒಂದು ಭವಿಷ್ಯವಾಣಿಯ ವಿವರಣೆಯನ್ನು ಕೊಡುತ್ತಾರೆ ರಾಜಕೀಯ ಸಾಮಾಜಿಕ ಜೊತೆಗೆ ಪ್ರಾಕೃತಿಕ ಈ ಮೂರು ವಿಚಾರಗಳ ಮೇಲೆ ಪ್ರತಿಯೊಂದು ಭವಿಷ್ಯವಾಣಿಯು ನಿಂತಿರುತ್ತದೆ ಎನ್ನುವಂತಹದ್ದು ಗಮನಿಸಬೇಕಾದಂತಹ ಅಂಶ.

ಮೊದಲಿಗೆ ರಾಜಕೀಯವಾಗಿ ಏನಾಗಬಹುದು ಎಂದು ವಿಶ್ಲೇಷಿಸಿದ್ದಾರೆ ಎಂದು ನೋಡುವುದಾದರೆ ಹಂಬಲಿ ಎಂದು ಹೇಳಿದರೆ ಆಹಾರವನ್ನು ಮುಂದಿಟ್ಟುಕೊಂಡು ಪ್ರಭುತ್ವದ ಆಸೆಗೆ ಸರ್ಕಾರವನ್ನು ದುರುಪಯೋಗ ಮಾಡಿಕೊಳ್ಳುವಂತಹ ಅದೋಗತಿ ಬೇಗ ಬರಲಿದೆ ಎನ್ನುವಂತಹ ವಿಚಾರವನ್ನು ಇಲ್ಲಿ ಹೇಳಿದ್ದಾರೆ ಕಂಬಳಿ ಎಂದರೆ ಪವಿತ್ರವಾದಂತಹ ವಸ್ತು ಹಾಗೂ ಮೈಲಾರಲಿಂಗನಿಗೆ ಪ್ರಿಯವಾದ ವಸ್ತು ಮತ್ತು ಧರ್ಮಯುತವಾದಂತಹ ರಾಜಕಾರಣಕ್ಕೆ ದೇಶ ಸಜ್ಜಾಗಬಹುದು ಎಂಬ ಸಾರಾಂಶವನ್ನು ಶುಭ ಸೂಚನೆಯನ್ನು ನೀಡಿದ್ದಾರೆ.

ಮುಂದೆ ಎರಡು ಮೂರು ತಿಂಗಳಲ್ಲಿ ಎಲೆಕ್ಷನ್ ಬರುವುದರಿಂದ ಈ ಎಲೆಕ್ಷನ್ ಮೇಲೆ ಈ ಭವಿಷ್ಯವಾಣಿಯ ಪರಿಣಾಮ ದೊಡ್ಡಮಟ್ಟದಲ್ಲಿ ಬೀರಲಿದೆ. ಇನ್ನು ಸಾಮಾನ್ಯವಾಗಿ ರೈತಾಪಿ ವರ್ಗದವರು ಈ ಭವಿಷ್ಯದ ಮೇಲೆ ನಂಬಿಕೆ ಮತ್ತು ಭರವಸೆಯನ್ನು ಇಟ್ಟುಕೊಂಡಿರುತ್ತಾರೆ ಕಾರಣ ಮುಂದಿನ ಬೆಳೆ ಮಳೆ ಪ್ರತಿಯೊಂದು ಕೂಡ ನಿರ್ಧರಿಸುವಂತಹ ಭವಿಷ್ಯ ವಾಣಿ ಇದಾಗಿರುತ್ತದೆ ಕೂಡಿಟ್ಟಿರುವ ಅಂತಹ ದವಸ ಧಾನ್ಯ ರಾಶಿಗಳು ಮಳೆಯಿಂದ ಹಾಳಾಗಬಹುದು ಜೊತೆಗೆ ಬೆಳೆಗಾರರಿಗೆ ಸ್ವಲ್ಪ ಎಚ್ಚರಿಕೆಯ ಕರೆಗಂಟೆಯನ್ನು ಕೊಟ್ಟಿದ್ದಾರೆ.

ಜೊತೆಗೆ ಜಾನುವಾರುಗಳಿಗೆ ಹಾಲು ಕುರಿ ಮೀನು ಇತ್ಯಾದಿ ಉತ್ಪಾದಕರಿಗೆ ಲಾಭದಾಯಕ ಆಶಾಡ ಬಂದು ಹೋದ ಮೇಲೆ ಎಲ್ಲಾ ಸಮಸ್ಥಿತಿಗೆ ಬರಬಹುದು ಎನ್ನುವುದು ಎಚ್ಚರಿಕೆಯನ್ನು ಈ ಭವಿಷ್ಯವಾಣಿಯಲ್ಲಿ ಉಲ್ಲೇಖ ಮಾಡಲಾಗಿದೆ ಮಳೆ ಸ್ವಲ್ಪ ಹೆಚ್ಚಾಗಿರುತ್ತದೆ ಎನ್ನುವಂತಹ ವಿಷಯವನ್ನು ಈ ಒಂದು ಭವಿಷ್ಯವಾಣಿಯಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.

Leave a Reply

Your email address will not be published. Required fields are marked *